ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರ್ ಪಾಕಿಸ್ತಾನದ ಸಾಂವಿಧಾನಿಕ ದೃಷ್ಟಿಯಿಂದ ಭೂಪ್ರದೇಶವಲ್ಲ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸಂಘಟನೆಯ ನಾಯಕರ ಸ್ಪಷ್ಟನೆ

ಇಸ್ಲಾಮಾಬಾದ (ಪಾಕಿಸ್ತಾ) – ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರ್ ಇದು ಸಾಂವಿಧಾನಿಕ ದೃಷ್ಟಿಯಿಂದ ಪಾಕಿಸ್ತಾನದ ಭೂಪ್ರದೇಶ ಅಲ್ಲ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಪ್ರಮುಖ ನಗರ ಮೀರಪುರ ನ ಅವಾಮಿ ಕೃತಿ ಸಮಿತಿಯ ಮುಖ್ಯ ನಾಯಕ ಆರೀಫ್ ಚೌದರಿ ಅವರು ಹೇಳಿಕೆ ನೀಡಿದರು. ಅವರು ಪತ್ರಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.

ಪಾಕಿಸ್ತಾನಿ ಸರಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜನರ ಜೊತೆಗೆ ಒಳ್ಳೆಯ ರೀತಿಯಾಗಿ ವರ್ತಿಸುತ್ತಿಲ್ಲ ಮತ್ತು ಅವರ ಮೂಲಭೂತ ಸೌಕರ್ಯಗಳ ಕಾಳಜಿ ವಹಿಸುತ್ತಿಲ್ಲ. ಈ ಪ್ರದೇಶದಲ್ಲಿನ ಜನರು ಅನೇಕ ದಶಕಗಳಿಂದ ದಬ್ಬಾಳಿಕೆಯಲ್ಲಿ, ನಿರ್ಲಕ್ಷತೆಯಲ್ಲಿ ಮತ್ತು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ನಮ್ಮನ್ನು ಲೂಟಿ ಮಾಡಲಾಗುತ್ತಿದೆ. ಬಲವಂತವಾಗಿ ಸ್ಥಳಾಂತರಿಸಲಾಗುತ್ತಿದೆ. ಪಾಕಿಸ್ತಾನವು ಇಲ್ಲಿನ ಜನರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಪಾಕಿಸ್ತಾನದ ಸಂವಿಧಾನದ ಕಲಂ ೨೫೭ ರ ಪ್ರಕಾರ ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಪ್ರದೇಶವೇ ಅಲ್ಲ. ಈ ಪ್ರದೇಶದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ೧೯೪೦ ರ ದಶಕದಿಂದ ವಿಶ್ವ ಸಂಸ್ಥೆಯ ಸಭೆಯಲ್ಲಿ ಒಪ್ಪಂದ ನಡೆದಿತ್ತು. ಈ ಒಪ್ಪಂದದಂತೆ ೨೬ ಮೊಕದ್ದಮೆಗಳ ನಿರ್ಣಯ ತೆಗೆದುಕೊಳ್ಳುವ ಹಕ್ಕು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಜನರಿಗೆ ನೀಡಲಾಗಿತ್ತು; ಆದರೆ ಇಲ್ಲಿನ ಜನರಿಗೆ ಇಲ್ಲಿಯವರೆಗೆ ಈ ಹಕ್ಕು ದೊರೆತಿಲ್ಲ ಎಂದು ಚೌದರಿ ಖೇದ ವ್ಯಕ್ತಪಡಿಸಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದರೆ ಏನು ?

೧೯೪೭ ರಲ್ಲಿ ವಿಭಜನೆಯ ನಂತರ ಪಾಕಿಸ್ತಾನಿ ಸೈನ್ಯವು ಆದಿವಾಸಿ ಬಂಡಾಯಗಾರರ ಸಹಾಯದಿಂದ ಜಮ್ಮು ಕಾಶ್ಮೀರದ ಈ ಪ್ರದೇಶ ವಶಕ್ಕೆ ಪಡೆದಿತ್ತು. ಭಾರತೀಯ ಸೈನ್ಯ ಈ ಪ್ರದೇಶ ಹಿಂಪಡೆಯುವುದಕ್ಕಾಗಿ ಹೋರಾಡುತ್ತಿದ್ದಾಗ ತತ್ಕಾಲಿನ ಪ್ರಧಾನಮಂತ್ರಿ ನೆಹರು ಅವರು ಕಾಶ್ಮೀರದ ಈ ಸಮಸ್ಯೆಯನ್ನು ವಿಶ್ವಸಂಸ್ಥೆಯ ಮುಂದಿಟ್ಟರು. ವಿಶ್ವಸಂಸ್ಥೆಯು ಮದ್ಯಸ್ತಿಕೆಯಿಂದ ಯುದ್ಧವಿರಾಮ ಘೋಷಿಸಿತು ಮತ್ತು ಪ್ರಸ್ತುತ ಪರಿಸ್ಥಿತಿ ಹಾಗೆಯೇ ಇರಿಸಲು ಸೂಚಿಸಿತು. ಅಂದಿನಿಂದ ಎರಡು ದೇಶದ ಸೈನ್ಯಗಳು ಅಂತರಾಷ್ಟ್ರೀಯ ಗಡಿರೇಖೆಯ ಬದಲು ಈ ಹೊಸ ನಿಯಂತ್ರಣಾ ರೇಖೆಯ ಎರಡು ಬದಿಯಿಂದ ಗಡಿರಕ್ಷಣೆ ಮಾಡುತ್ತಿವೆ. ೮೪೦ ಕಿಲೋಮೀಟರ್ ಉದ್ದದ ಈ ಗಡಿರೇಖೆಯನ್ನು ಎರಡು ದೇಶದಲ್ಲಿ ಎಳೆಯಲಾಗಿದೆ. ಪಾಕಿಸ್ತಾನವು ಈ ಪಾಕ್ ಆಕ್ರಮಿತ ಕಾಶ್ಮೀರವನ್ನು ‘ ಆಝಾದ ಕಾಶ್ಮೀರ್ ಎಂದು ಕರೆಯುತ್ತದೆ. ಪಾಕಿಸ್ತಾನವು ಈ ಭೂಭಾಗವನ್ನು ಗಿಲಗಿಟ್ ಮತ್ತು ಬಾಲ್ಟಿಸ್ತಾನ್ ಎಂದು ಎರಡು ಭಾಗವಾಗಿ ವಿಭಜಿಸಿದೆ. ಭಾರತ ಸರಕಾರ ಆಗಾಗ ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ಬಗ್ಗೆ ಮಾತನಾಡುತ್ತಿದೆ. ೨೦೧೪ ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಬಿಜೆಪಿ ಸರಕಾರ ಬಂದ ನಂತರ ಮತ್ತು ಜಮ್ಮು-ಕಾಶ್ಮೀರದಿಂದ ಕಲಂ ೩೭೦ ತೆರವು ಗೊಳಿಸಿದ ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಿಂಪಡೆಯಲು ತೀವ್ರವಾಗಿ ಆಗ್ರಹಿಸಲಾಗುತ್ತಿದೆ.