ಆನೆ ಬೇಟೆಯ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಆಫ್ರಿಕಾದ ಬೋಟ್ಸ್ ವಾನಾದಿಂದ ಜರ್ಮನಿಗೆ ಬೆದರಿಕೆ

  • ೨೦ ಸಾವಿರ ಆನೆಗಳನ್ನು ಜರ್ಮನಿಗೆ ಕಳುಹಿಸುವೆವು !

  • ಬೋಟ್ಸ್ ವಾನಾದಲ್ಲಿ ಆನೆಗಳು ಹೆಚ್ಚಿದ್ದರಿಂದ ಬೆಳೆಗಳ ನಾಶ

ಗ್ಯಾಬೋರೋನ್ (ಬೋಟ್ಸ್ ವಾನಾ) – ಆಫ್ರಿಕಾ ಖಂಡದಲ್ಲಿನ ಬೋತ್ಸವಾನಾ ದೇಶದ ರಾಷ್ಟ್ರಪತಿ ಮೊಕ್ಗವೀಟ್ಸಿ ಮಾಸಿಸಿ ಇವರು ಜರ್ಮನಿಗೆ ೨೦ ಸಾವಿರ ಆನೆಗಳನ್ನು ಕಳುಹಿಸುವ ಬೆದರಿಕೆ ನೀಡಿದ್ದಾರೆ. ಜನವರಿ ತಿಂಗಳಲ್ಲಿ ಜರ್ಮನಿಯ ಪರಿಸರ ಸಚಿವರು ಆನೆಯ ಸಂವರ್ಧನೆಯ ಅಂಶಗಳನ್ನು ಹೇಳುತ್ತಾ, ‘ಬೋಟ್ಸ್ ವಾನಾಕ್ಕೆ ಹೋಗಿ ಆನೆಯ ಬೇಟೆ ಮಾಡುವುದು ಮತ್ತು ಅದನ್ನು ಆಮದು ಮಾಡುವುದರ ಮೇಲೆ ಕೆಲವು ನಿರ್ಬಂಧ ಹೇರಬೇಕೆಂದು’, ಹೇಳಿದ್ದರು. ಈ ಬಗ್ಗೆ ರಾಷ್ಟ್ರಪತಿ ಮಾಸಿಸಿ ಇವರು, ಜರ್ಮನಿಯ ಪರಿಸರ ಸಚಿವರು ನಮಗೆ ಆನೆಯ ಜೊತೆಗೆ ಇರುವ ಸಲಹೆಯನ್ನು ಹೇಗೆ ನೀಡಿದ್ದಾರೆಯೋ, ಅದರಂತೆಯೇ ಜರ್ಮನಿಯಲ್ಲಿನ ಜನರೂ ಕೂಡ ಆನೆಯ ಜೊತೆಗಿರುವ ಅನುಭವ ಪಡೆಯಬೇಕು. ನಾವು ಜರ್ಮನಿಗೆ ಆನೆಗಳನ್ನು ಉಡುಗೊರೆಯಾಗಿ ನೀಡುವೆವು. ಅವರು ಈ ಉಡುಗೊರೆ ನಿರಾಕರಿಸುವುದಿಲ್ಲ ಎಂದು ನಾವು ಆಶಿಸುತ್ತೇವೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಮಾಸಿಸಿ ಇವರ ಅಭಿಪ್ರಾಯ, ಬೋತ್ಸವಾನಾದಲ್ಲಿ ಆನೆಯ ಸಂವರ್ಧನೆ ಪ್ರಯತ್ನದಿಂದ ಅದರ ಸಂಖ್ಯೆಯಲ್ಲಿ ನಿರಂತರ ಹೆಚ್ಚಳವಾಗುತ್ತಿದೆ. ಅವು ದೇಶದ ಬೆಳೆಗಳನ್ನು ನಾಶ ಮಾಡುತ್ತಿವೆ. ಅಲ್ಲಿಯ ಆನೆಗಳು ಜನರನ್ನು, ವಿಶೇಷವಾಗಿ ಚಿಕ್ಕ ಮಕ್ಕಳನ್ನು ತುಳಿಯುತ್ತಿವೆ ಮತ್ತು ಆಸ್ತಿಯ ಹಾನಿ ಮಾಡುತ್ತಿವೆ. ಇದರಿಂದ ಆಫ್ರಿಕಾದ ಜನ ಕಂಗೆಟ್ಟಿದ್ದಾರೆ.

ಬ್ರಿಟನ್ ನಲ್ಲಿ ೧೦ ಸಾವಿರ ಆನೆಗಳನ್ನು ಬಿಡುವ ಬೆದರಿಕೆ !

೨೦೧೯ ರಲ್ಲಿ ಬ್ರಿಟನ್ ನ ಚುನಾವಣೆಯ ಸಮಯದಲ್ಲಿ ಹುಜೂರ ಪಕ್ಷದಿಂದ ತನ್ನ ಘೋಷಣಾ ಪತ್ರದಲ್ಲಿ ಇತರ ದೇಶದಲ್ಲಿ ಆನೆಯ ಬೇಟೆಯನ್ನು ನಿಷೇಧಿಸುವುದರ ಬಗ್ಗೆ ಹೇಳಿದ್ದರು. ಆದ್ದರಿಂದ ಬೋಟ್ಸ್ ವಾನಾದ ವನ್ಯಜೀವಿ ಸಚಿವರು ಮಿಥಿಮಖುಲು ಇವರು ಬ್ರಿಟನಿಗೆ ಬೆದರಿಕೆ ನೀಡಿದ್ದರು. ಅವರು, ‘ನಾವು ಲಂಡನ್ ನಲ್ಲಿ ಹೈಡ್ ಪಾರ್ಕ್ ಗೆ ೧೦ ಸಾವಿರ ಆನೆಗಳನ್ನು ಕಳುಹಿಸುತ್ತೇವೆ ಇದರಿಂದ ಅಲ್ಲಿಯ ಜನರಿಗೆ ಆನೆಯ ಜೊತೆಗೆ ಇರುವುದು ಹೇಗೆ ಇರುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು ಬೋಟ್ಸ್ ವಾನಾದ ಕೆಲವು ಪ್ರದೇಶಗಳಲ್ಲಿ ಮನುಷ್ಯರಿಗಿಂತಲೂ ಆನೆಯ ಸಂಖ್ಯೆ ಹೆಚ್ಚಾಗಿದೆ. ಬೆಳೆಗಳ ಜೊತೆಗೆ ಚಿಕ್ಕ ಮಕ್ಕಳನ್ನು ಕೂಡ ಅವು ತುಳಿಯುತ್ತವೆ.’ ಎಂದು ಹೇಳಿದ್ದಾರೆ.

ಬೋಟ್ಸ್ ವಾನಾದಲ್ಲಿ ಆನೆಯ ಬೇಟೆಗಾಗಿ ಸರಕಾರದಿಂದ ಶುಲ್ಕ

ಜಗತ್ತಿನಲ್ಲಿನ ಒಟ್ಟು ಆನೆಯ ಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಆನೆಗಳು ಬೋಟ್ಸ್ ವಾನಾದಲ್ಲಿ ಇವೆ. ಇಲ್ಲಿ ಅದರ ಸಂಖ್ಯೆ ೧ ಲಕ್ಷದ ೩೦ ಸಾವಿರಕ್ಕಿಂತಲೂ ಹೆಚ್ಚಾಗಿದೆ. ಭಾರತದಲ್ಲಿನ ಆನೆಗಳ ಸಂಖ್ಯೆಗಿಂತಲೂ ಈ ಪ್ರಮಾಣ ೪ ಪಟ್ಟು ಹೆಚ್ಚಾಗಿದೆ. ಪಾಶ್ಚಿಮಾತ್ಯ ದೇಶದಲ್ಲಿನ ಜನರು ವಿಶೇಷವಾಗಿ ಜರ್ಮನಿಯಿಂದ ಅನೇಕ ಜನರು ಆನೆಯ ಬೇಟೆಗಾಗಿ ಬೋಟ್ಸ್ ವಾನಾಗೆ ಬರುತ್ತಾರೆ. ಬೋಟ್ಸ್ ವಾನಾ ಸರಕಾರ ಇದಕ್ಕಾಗಿ ಅವರಿಂದ ಶುಲ್ಕ ಪಡೆಯುತ್ತದೆ. ಈ ಹಣ ಸ್ಥಳೀಯ ಜನರ ಜೀವನೋಪಾಯಕ್ಕೆ ಬಳಸುತ್ತಾರೆ. ಆನೆಯ ಬೇಟೆಯಾಡಿದ ನಂತರ, ವಿದೇಶಿ ಜನರು ಆನೆಯ ತಲೆ ಮತ್ತು ಚರ್ಮವನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅನೇಕ ಪ್ರಾಣಿ ಹಕ್ಕುಗಳ ಸಂಘಟನೆಗಳು ಈ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದು ಅದನ್ನು ನಿಷೇಧಿಸಲು ಒತ್ತಾಯಿಸುತ್ತಿವೆ.

ಸಂಪಾದಕೀಯ ನಿಲುವು

ಪರಿಸರದ ಸಮತೋಲನ ಹಾಳಾಗಿರುವುದರಿಂದ ಕೆಲವು ದೇಶಗಳಲ್ಲಿ ಆನೆಯ ಸಂಖ್ಯೆ ಹೆಚ್ಚಾಗಿದೆ ಹಾಗೂ ಕೆಲವು ದೇಶದಲ್ಲಿ ಅದು ಅಳಿವಿನ ಅಂಚಿನಲ್ಲಿದೆ. “ಈ ಪರಿಸ್ಥಿತಿ ಏಕೆ ಉದ್ಭವಿಸಿದೆ’, ಇದು ಪ್ರತಿಯೊಂದು ದೇಶವು ಯೋಚನೆ ಮಾಡಬೇಕಾದ ಸಮಯ ಬಂದಿದೆ !