ಸೂರತ (ಗುಜರಾತ) – ಭಾರತವು ಖಂಡಿತವಾಗಿಯೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವವನ್ನು ಪಡೆಯಲಿದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಜೈಶಂಕರ ಅವರು ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೇಳಿದರು. ಅಲ್ಲಿ ಉಪಸ್ಥಿತರಿದ್ದವರು ಡಾ. ಜೈಶಂಕರ ಅವರಿಗೆ ಈ ವಿಷಯದ ಬಗ್ಗೆ ಪ್ರಶ್ನಿಸಿದಾಗ ಅವರು ಮೇಲಿನ ಮಾಹಿತಿಯನ್ನು ನೀಡಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕಾಗಿ ಭಾರತ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಇತರ ಅನೇಕ ದೇಶಗಳು ಭಾರತಕ್ಕೆ ಬೆಂಬಲವನ್ನು ನೀಡಿವೆ; ಆದರೆ ಚೀನಾ ಈ ವಿಷಯದಲ್ಲಿ ಅಡ್ಡಗಾಲು ಹಾಕುತ್ತಿದೆಯೆಂದು ಹೇಳಿದರು.
ಡಾ. ಜೈಶಂಕರ ಅವರು ತಮ್ಮ ಮಾತನ್ನು ಮುಂದುವರಿಸಿ,
1. ವಿಶ್ವಸಂಸ್ಥೆಯು ಸುಮಾರು 80 ವರ್ಷಗಳ ಹಿಂದೆ ಸ್ಥಾಪನೆಯಾಗಿತ್ತು. ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೇರಿಕ ಈ 5 ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಲು ನಿರ್ಧರಿಸಿದ್ದವು. ಆಗ ಜಗತ್ತಿನ 50 ದೇಶಗಳು ಸ್ವತಂತ್ರವಾಗಿದ್ದವು. ನಂತರ ದೇಶಗಳ ಸಂಖ್ಯೆ 193ಕ್ಕೆ ಏರಿತು; ಆದರೆ ಈ 5 ದೇಶಗಳು ವಿಶ್ವಸಂಸ್ಥೆಯ ಮೇಲೆ ತಮ್ಮ ನಿಯಂತ್ರಣವನ್ನು ಇನ್ನೂ ಖಾಯಂ ಉಳಿಸಿಕೊಂಡಿವೆ; ಆದರೆ ಈಗ ಅದರಲ್ಲಿ ಬದಲಾವಣೆ ಮಾಡಲು ಅವರಿಗೆ ಹೇಳಬೇಕಾಗುತ್ತಿದೆಯೆನ್ನುವದೇ ವಿಚಿತ್ರ ವಿಷಯವಾಗಿದೆ.
2. ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವ ವಿಷಯದಲ್ಲಿ ಕೆಲವು ದೇಶಗಳು ಸಮ್ಮತಿಸಿವೆ. ಕೆಲವು ಜನರು ಪ್ರಾಮಾಣಿಕವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ; ಆದರೆ ಕೆಲವು ದೇಶಗಳು ಬೆನ್ನ ಹಿಂದೆ ಕೆಲವು ವಿಷಯಗಳನ್ನು ಮಾಡುತ್ತವೆ. ಇದು ಅನೇಕ ವರ್ಷಗಳಿಂದ ನಡೆಯುತ್ತಿದೆ. ಈಗ ಬದಲಾವಣೆಯಾಗಬೇಕಾಗಿದೆ. ‘ಭಾರತಕ್ಕೆ ಖಾಯಂ ಸದಸ್ಯತ್ವ ಸಿಗಬೇಕು’ ಎಂಬ ಭಾವನೆ ಜಗತ್ತಿನಾದ್ಯಂತ ನಿರ್ಮಾಣವಾಗಿದೆ. ಈ ಭಾವನೆ ಹೆಚ್ಚುತ್ತಲೇ ಇದೆ. ನಾವು ಖಂಡಿತವಾಗಿಯೂ ಅದನ್ನು ಸಾಧಿಸುತ್ತೇವೆ; ಆದರೆ ಕಠಿಣ ಪರಿಶ್ರಮವಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ. ನಾವು ಕಠಿಣ ಪರಿಶ್ರಮವನ್ನು ಮಾಡಬೇಕಾಗುತ್ತದೆ.
3. ಭಾರತ, ಜಪಾನ, ಜರ್ಮನಿ ಮತ್ತು ಈಜಿಪ್ಟ ಈ ದೇಶಗಳು ಜಂಟಿಯಾಗಿ ವಿಶ್ವಸಂಸ್ಥೆಗೆ ಒಂದು ಪ್ರಸ್ತಾವನೆ ಮಂಡಿಸಿವೆ. ಆದ್ದರಿಂದ, ಈಗ ಈ ವಿಷಯ ಮತ್ತಷ್ಟು ಮುಂದುವರಿಯಬಹುದು; ಆದರೆ ನಾವು ಒತ್ತಡವನ್ನು ಹೇರಬೇಕು.
4. ಉಕ್ರೇನ ಯುದ್ಧ ಮತ್ತು ಗಾಝಾ ಮೇಲಿನ ದಾಳಿಯಿಂದ ವಿಶ್ವಸಂಸ್ಥೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಈ ವಿಷಯದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿರುವುದಿಲ್ಲ. ಈ ಭಾವನೆ ಹೆಚ್ಚಾದಂತೆ ನಮಗೆ ಖಾಯಂ ಸ್ಥಾನ ಸಿಗುವ ಸಾಧ್ಯತೆಯೂ ಹೆಚ್ಚಾಗುತ್ತದೆಯೆಂದು ಅನಿಸುತ್ತದೆ.
ಪ್ರಧಾನಮಂತ್ರಿ ನೆಹರೂರವರು ಭಾರತಕ್ಕಿಂತ ಚೀನಾದ ಹಿತಾಸಕ್ತಿಗಳನ್ನು ಮುಂದಿಟ್ಟರು ! – ಡಾ. ಜೈಶಂಕರ
ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ ನೆಹರು ಅವರು ಭಾರತಕ್ಕಿಂತ ಚೀನಾದ ಹಿತಕ್ಕೆ ಆದ್ಯತೆ ನೀಡಿದರು ಎಂದು ವಿದೇಶಾಂಗ ಸಚಿವ ಡಾ. ಜೈಶಂಕರ ಇವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
1. ಡಾ.ಜೈಶಂಕರ ಮಾತನಾಡಿ, 1950ರಲ್ಲಿ ಆಗಿನ ಗೃಹ ಸಚಿವ ಸರ್ದಾರ ಪಟೇಲ ಅವರು ನೆಹರೂ ಅವರಿಗೆ ಚೀನಾದ ಬಗ್ಗೆ ಎಚ್ಚರಿಕೆ ನೀಡಿದ್ದರು. ಪಟೇಲರು ನೆಹರೂ ಅವರಿಗೆ, ‘ನಾವು ಮೊದಲ ಬಾರಿಗೆ ಚೀನಾ ಮತ್ತು ಪಾಕಿಸ್ತಾನದ ದ್ವಂದ್ವನೀತಿಯನ್ನು ಎದುರಿಸುತ್ತಿದ್ದೇವೆ. ಅಂತಹ ಪರಿಸ್ಥಿತಿ ಹಿಂದೆಂದೂ ಸಂಭವಿಸಿರಲಿಲ್ಲ’ ಎಂದು ಹೇಳಿದ್ದರು.
2. ಪಟೇಲರು ನೆಹರೂರವರಿಗೆ ಚೀನಾದ ಜನರು ಹೇಳುವುದರ ಮೇಲೆ ಅವರಿಗೆ ವಿಶ್ವಾಸವಿಲ್ಲ. ಚೀನಿ ಜನರ ಉದ್ದೇಶ ಬೇರೆಯದೇ ಆಗಿದೆಯೆಂದು ಕಂಡು ಬರುತ್ತಿದೆ ಮತ್ತು ನಾವು ಈ ವಿಷಯದಲ್ಲಿ ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಿದ್ದರು.
3. ಇದಕ್ಕೆ ನೆಹರೂರವರು ಪಟೇಲರಿಗೆ, ಅವರು ಚೀನಾದ ಜನರ ಮೇಲೆ ವಿನಾಕಾರಣ ಸಂಶಯ ಪಡುತ್ತಾರೆ. ಹಿಮಾಲಯದಿಂದ ಭಾರತದ ಮೇಲೆ ದಾಳಿ ಮಾಡುವುದು ಯಾರಿಗೂ ಸಾಧ್ಯವಿಲ್ಲ. ನೆಹರೂ ಚೀನಾದ ಅಪಾಯವನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ತದನಂತರ ಏನಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ.
ನೆಹರೂ ಅವರಿಂದಾಗಿ ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಸಿಕ್ಕಿತು !
ಡಾ. ಜೈಶಂಕರ್ ಅವರು ಮಾತನಾಡಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸ್ಥಾನದ ಬಗ್ಗೆ ಚರ್ಚೆ ನಡೆದಾಗ ಆ ಸ್ಥಾನವನ್ನು ಭಾರತಕ್ಕೆ ನೀಡಲಾಗಿತ್ತು. ಆಗ ನೆಹರೂರವರು ನಮಗೂ ಈ ಸ್ಥಾನದ ಮೇಲೆ ಹಕ್ಕಿದೆ; ಆದರೆ ಮೊದಲು ಚೀನಾಗೆ ಸಿಗಬೇಕು ಎಂದು ನಿಲುವು ಹೊಂದಿದ್ದರು.
ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಒಯ್ಯುವುದಕ್ಕೆ ಪಟೇಲರು ವಿರೋಧಿಸಿದ್ದರು !
ಡಾ. ಜೈಶಂಕರ ಅವರು ಕಾಶ್ಮೀರ ಪ್ರಶ್ನೆಯ ಕುರಿತು ಮಾತನಾಡಿ, ಸರದಾರ ಪಟೇಲರು ಕಾಶ್ಮೀರದ ವಿವಾದವನ್ನು ವಿಶ್ವಸಂಸ್ಥೆಯಲ್ಲಿ ಒಯ್ಯುವ ಇಚ್ಛೆ ಇರಲಿಲ್ಲ; ಆದರೆ ನೆಹರೂ ಮಾತ್ರ ಅದನ್ನೇ ಮಾಡಿದರು. ಸರದಾರ ಪಟೇಲರಿಗೆ ವಿಶ್ವಸಂಸ್ಥೆ ಪಕ್ಷಪಾತಿ ಎಂದು ತಿಳಿದಿತ್ತು ಎಂದು ಹೇಳಿದರು.