ಭಾಗ್ಯನಗರ (ತೆಲಂಗಾಣ) ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಅವರ ಹೇಳಿಕೆ
ಭಾಗ್ಯನಗರ(ತೆಲಂಗಾಣ) – ನನ್ನ ವಿಧಾನಸಭಾ ಕ್ಷೇತ್ರದಲ್ಲಿರುವ ಒಂದೇ ಒಂದು ಮುಸಲ್ಮಾನನ ಮತ ಕೂಡ ನನಗೆ ಬೇಕಿಲ್ಲ. ನಮ್ಮ ಹೋರಾಟ ಕೇವಲ ಅವರ ವಿರುದ್ಧವಾಗಿದ್ದು ತೆಲಂಗಾಣದಲ್ಲಿ ನಾವು ಗೋ ಹತ್ಯೆಯ ಮತ್ತು ಲವ್ ಜಿಹಾದಿನ ವಿರುದ್ಧ ಹೋರಾಡುತ್ತೇವೆ. ಆದ್ದರಿಂದ ಮುಸಲ್ಮಾನರು ನನಗೆ ಮತ ನೀಡುವುದಿಲ್ಲ. ನನಗೆ ಅವರ ಮತಗಳೂ ಸಿಗುವುದಿಲ್ಲ. ಆದ್ದರಿಂದ ನನಗೆ ಅವರಿಂದ ಯಾವುದೇ ಅಪೇಕ್ಷೆ ಕೂಡ ಇಲ್ಲ. ನನಗೆ ಗೋವುಗಳ ಹತ್ಯೆ ಮಾಡುವವರ ಮತಗಳು ಬೇಕಿಲ್ಲ. ಇಂದು ಬೇಡ ಮತ್ತು ಭವಿಷ್ಯದಲ್ಲಿ ಕೂಡ ಬೇಡ, ಎಂದು ಗೋಷಾಮಹಲ್ ಮತದಾರ ಕ್ಷೇತ್ರದ ಬಿಜೆಪಿ ಸಂಸದ ಟಿ.ರಾಜಾಸಿಂಗ್ ಅವರು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದರು. ಮುಸಲ್ಮಾನರಿಗಾಗಿ ಖರ್ಚು ಮಾಡುವ ಶಕ್ತಿಯನ್ನು ನೀವು ಹಿಂದುಗಳ ಮೇಲೆ ಮಾಡಿದರೆ ಹೆಚ್ಚು ಲಾಭವಾಗುವುದು ಎಂಬ ವಿಷಯವನ್ನು ಬಿಜೆಪಿ ನಾಯಕರು ನೆನಪಿನಲ್ಲಿಟ್ಟುಕೊಳ್ಳಬೇಕು, ಎಂದು ಕೂಡ ರಾಜಾಸಿಂಗ್ ಸಲಹೆ ನೀಡಿದರು.
ಭಾಗ್ಯನಗರದ ಲೋಕಸಭಾ ಮತದಾರ ಕೇಂದ್ರದ ಪ್ರಸಾರದ ಜವಾಬ್ದಾರಿ ರಾಜಾಸಿಂಗ್ ಅವರ ಬಳಿ ಇದೆ. ನಗರದಲ್ಲಿ ಶೇಕಡ ೬೦ ರಷ್ಟು ಮುಸಲ್ಮಾನ ಮತದಾರರಿದ್ದಾರೆ. ಪ್ರಸ್ತುತ ಎಂ.ಐ.ಎಂ. ಅಧ್ಯಕ್ಷ ಅಸುದ್ದುದ್ದೀನ್ ಓವೈಸಿ ಭಾಗ್ಯನಗರದ ಸಂಸದನಾಗಿದ್ದು, ಅವನು ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾನೆ.
ಸಂದರ್ಶನದಲ್ಲಿ ರಾಜಾಸಿಂಗ್ ಮಂಡಿಸಿದ ಕೆಲ ಅಂಶಗಳು:
೧. ಮುಸಲ್ಮಾನರಿಂದ ಈಗ ಕಾಶಿ ಮಥುರ ಮತ್ತು ತೇಜೋ ಮಹಲ್ ಪಡೆಯುವದು ಬಾಕಿ ಇದೆ. ನಮ್ಮ ವಿಷ್ಣು ಸ್ತಂಭ ಇನ್ನು ಉಳಿದಿದೆ. ಇವರು ಭೋಜಶಾಲೆಯಲ್ಲಿನ ಸರಸ್ವತಿ ಮಾತೆಯ ದೇವಸ್ಥಾನ ದ್ವಂಸಗೊಳಿಸಿ ನಮಾಜ ಪಠಣೆ ಮಾಡುತ್ತಾರೆ. ಅವೆಲ್ಲವನ್ನೂ ಹಿಂಪಡೆಯುವುದು ಬಾಕಿ ಇದೆ.
೨. ನಾನು ಹೋದಲ್ಲೆಲ್ಲಾ ನನ್ನ ಧರ್ಮದ ಬಗ್ಗೆ ಮಾತನಾಡುತ್ತೇನೆ. ಯಾರು ನನ್ನ ಧರ್ಮವನ್ನು ನಾಶ ಮಾಡುವ ಹುನ್ನಾರ ರೂಪಿಸಿದ್ದಾರೆ, ಲವ್ ಜಿಹಾದಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ, ಜನರನ್ನು ಮತಾಂತರ ಮಾಡಿದ್ದಾರೆ, ನಮ್ಮ ಮಠ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ, ಅಂತವರ ಇತಿಹಾಸವನ್ನು ನಾನು ಖಂಡಿತ ಹೇಳುತ್ತೇನೆ.
೩. ಈಗಿನ ಕಾಲದ ಹಿಂದೂ ಹೊಡೆತಾ ತಿನ್ನಲಾರ, ಈ ಹಿಂದೆ ಇದ್ದ ಸರಕಾರ ಹಿಂದುಗಳ ಪರವಾಗಿ ನಿಲ್ಲದೇ ಇದ್ದ ಕಾರಣ ಜನರು ಏಟು ತಿಂದು ಮನೆಯಲ್ಲಿರುತ್ತಿದ್ದರು. ಏನಾದರೂ ಹೇಳಿದರೆ ಅಥವಾ ಮಾಡಿದರೆ ನಮ್ಮ ವಿರುದ್ಧವೇ ದೂರು ದಾಖಲಾಗುವುದು ಎಂಬ ಭಯ ಆಗ ಜನರಲ್ಲಿತ್ತು.
೪. ಚುನಾವಣೆ ಪ್ರಚಾರಕ್ಕಾಗಿ ನಾನು ಪ್ರತಿಯೊಂದು ರಾಜ್ಯಕ್ಕೆ ಹೋಗುತ್ತೆನೆ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದೇ ನನ್ನ ಧ್ಯೇಯವಾಗಿದೆ. ಇದೇ ಸಂಕಲ್ಪವನ್ನಿಟ್ಟುಕೊಂಡು ನಾನು ಅಭಿಯಾನ, ಸಭೆ ನಡೆಸುತ್ತೇನೆ. ಇಂದಿನವರೆಗೆ ನನ್ನ ಸಭೆಯ ಮೊದಲು ಅಥವಾ ನಂತರ ಒಂದೇ ಒಂದು ಗಲಭೆ ನಡೆದಿಲ್ಲ.
೫. ನಮ್ಮ ಹಿಂದೂ ರಾಷ್ಟ್ರದಲ್ಲಿ ದೇಶಭಕ್ತ ಮುಸಲ್ಮಾನರಿಗೆ ಖಂಡಿತ ಸ್ಥಾನ ಇರುವುದು. ಯಾರು ದೇಶದಲ್ಲಿದ್ದು ದೇಶ ಒಡೆಯುವ ಯೋಚನೆ ಮಾಡುತ್ತಾರೆ, ಭಯೋತ್ಪಾದಕರಿಗೆ ಸಹಾಯ ಮಾಡುತ್ತಾರೆ, ಯಾರ ಮನೋ ಪ್ರವೃತ್ತಿ ಭಯೋತ್ಪಾದನೆಯದ್ದಾಗಿದೆ, ಅಂತಹವರಿಗೆ ಹಿಂದೂ ರಾಷ್ಟ್ರದಲ್ಲಿ ಸ್ಥಾನವಿರಲು ಸಾಧ್ಯವಿಲ್ಲ.
೬. ಕರ್ನಾಟಕ ಇರಲಿ, ಕೇರಳ ಇರಲಿ ಅಥವಾ ತೆಲಂಗಾಣವಿರಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ.
೭. ಅಸದ್ದುದ್ದೀನ್ ಓವೈಸಿ ಮತ್ತು ಅವನ ಸಹೋದರ ಅಕ್ಬರುದ್ದೀನ್ ಇವರಿಬ್ಬರು ಸಾಮಾಜಿಕ ಶಾಂತಿಗೆ ಎಲ್ಲಕ್ಕಿಂತ ದೊಡ್ಡ ಅಪಾಯವಾಗಿದ್ದಾರೆ. ಇವರಿಬ್ಬರು ಭಾಷಣ ಮಾಡಿ ಹಿಂತಿರುಗಿದ ಪ್ರದೇಶದ ಮುಸಲ್ಮಾನರು ತಮ್ಮ ಕೆಲಸವನ್ನು ಬಿಟ್ಟು ಭಯೋತ್ಪಾದನೆಯ ವಿಚಾರ ಮಾಡಲು ಆರಂಭಿಸುತ್ತಾರೆ. ಕಾನೂನಿನ ಪ್ರಕಾರ ಓವೈಸಿಯ ಸನಾತನ ಧರ್ಮ ವಿರೋಧಿ ಸಭೆಗಳನ್ನು ನಿಷೇಧಿಸಬೇಕು.