ಸರ್ವೋಚ್ಚ ನ್ಯಾಯಾಲಯದಿಂದ ಚುನಾವಣಾ ಆಯೋಗಕ್ಕೆ ಆದೇಶ !
(VVPAT ಎಂದರೆ ವೋಟರ್ ವೇರಿಫೈಯೇಬಲ್ ಪೇಪರ್ ಆಡಿಟ್ ಟ್ರೈಲ್ ಯಂತ್ರ. ಇದರಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರದ ಮೂಲಕ ನೀಡಿರುವ ಮತಗಳು ಸದರಿ ಅಭ್ಯರ್ಥಿಗೆ ಹೋಗಿರುವುದು ಕಾಣುತ್ತದೆ.)
ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಮತ ಎಣಿಕೆಯ ಸಮಯದಲ್ಲಿ ವೋಟರ್ ವೆರಿಫೈಬಲ್ ಆಡಿಟ್ ಟ್ರೈಲ್ (VVPAT) ನಲ್ಲಿ ಎಲ್ಲಾ ಪಾವತಿಯ ಎಣಿಕೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. ಈ ಮೊದಲು ಲೋಕಸಭಾ ಮತದಾರ ಕೇಂದ್ರದಲ್ಲಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ೫ ಎಲೆಕ್ಟ್ರಾನಿಕ್ ಮತದಾನ ಯಂತ್ರ ಮತ್ತು VVPAT ನಲ್ಲಿನ ಪಾವತಿಯ ಪರಿಶೀಲನೆ ಮಾಡಲಾಗುತ್ತಿತ್ತು. ಎಲ್ಲಾ VVPAT ಗಳ ಪಾವತಿಯ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಾಗಿತ್ತು.
ಒಂದೊಂದೆ VVPAT ಪಾವತಿಯ ಎಣಿಕೆ ಮಾಡಿದರೆ ವಿಳಂಬವಾಗಬಹುದು ಎಂಬುದು ಚುನಾವಣಾ ಆಯೋಗದ ವಾದವಾಗಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಾಲಯವು ಮೇಲಿನ ಆದೇಶ ನೀಡಿದೆ. ಪ್ರತಿಯೊಂದು ವಿಧಾನಸಭಾ ಮತದಾರ ಕೇಂದ್ರದಲ್ಲಿ ಮತ ಎಣಿಕೆಗಾಗಿ ಹೆಚ್ಚು ಅಧಿಕಾರಿಗಳನ್ನು ನೇಮಿಸಿದರೆ ಮತ್ತು ಏಕ ಕಾಲದಲ್ಲಿ VVPAT ನಲ್ಲಿನ ಪಾವತಿ ಎಣಿಕೆ ಮಾಡಿದರೆ, ಆಗ ಸಂಪೂರ್ಣ VVPAT ಪರಿಶೀಲನೆ ಕೇವಲ ೫-೬ ಗಂಟೆಗಳಲ್ಲಿ ಪೂರ್ಣವಾಗುತ್ತದೆ ಎಂದು ಅರ್ಜಿದಾರರು ವಾದ ಮಂಡಿಸಿದ್ದರು.
VVPAT ಯಂತ್ರ ಅಂದರೆ ಏನು ?
VVPAT ಯಂತ್ರವನ್ನು ಎಲೆಕ್ಟ್ರಾನಿಕ್ ಮತದಾನ ಯಂತ್ರದ ಬ್ಯಾಲೆಟ್ ಯೂನಿಟ್ ಗೆ ಜೋಡಿಸಲಾಗಿರುತ್ತದೆ. ಮತದಾರ ಮತದಾನ ಯಂತ್ರದ ಮೂಲಕ ಮತದಾನ ಮಾಡಿದಾಗ, ಅವನ ಮತ ಪತ್ರಿಕೆ VVPAT ನಲ್ಲಿ ಜಮೆ ಆಗುತ್ತದೆ. ಮತದಾರರು ಮತ ನೀಡಿರುವ ಅಭ್ಯರ್ಥಿಯ ಚುನಾವಣಾ ಚಿಹ್ನೆ VVPAT ಯಂತ್ರದ ಮೂಲಕ ಕಾಣುತ್ತದೆ. ಹಾಗಾಗಿ ಅವರ ಮತ ಅವರ ಅಭ್ಯರ್ಥಿಗೆ ಹೋಗಿದೆ ಎಂಬುದು ಮತದಾರರಿಗೆ ಖಾತ್ರಿ ಆಗಬೇಕೆಂದು VVPAT ಯಂತ್ರ ಇರುತ್ತದೆ. ಮತದಾರರಿಗೆ VVPAT ಯಂತ್ರದಲ್ಲಿ ಮತಪತ್ರಿಕೆ ಕೇವಲ ನೋಡಲು ಸಾಧ್ಯವಾಗುತ್ತದೆ. ೭ ಸೆಕೆಂಡ್ ನಂತರ ಈ ಮತ ಪತ್ರಿಕೆ ತನ್ನಿಂದ ತಾನೇ VVPAT ಯಂತ್ರದಲ್ಲಿ ಜಮಾ ಆಗುತ್ತದೆ.
Supreme Court seeks #ECI, Centre’s response on plea to count all #VVPAT slips https://t.co/3ERLqOhfAA pic.twitter.com/KkHVNKBPvR
— Hindustan Times (@htTweets) April 2, 2024