Dr. Jaishankar Snubs China: ಹೆಸರನ್ನು ಬದಲಾಯಿಸಿದ್ದರಿಂದ ಬೇರೆಯವರ ಮನೆ ಸ್ವಂತವಾಗುವುದಿಲ್ಲ ! – ವಿದೇಶಾಂಗ ಸಚಿವ ಡಾ. ಜೈಶಂಕರ

ಅರುಣಾಚಲ ಪ್ರದೇಶದಲ್ಲಿ ಗ್ರಾಮಗಳ ಹೆಸರನ್ನು ಬದಲಾಯಿಸಿದ ಘಟನೆ ಬಗ್ಗೆ ವಿದೇಶಾಂಗ ಸಚಿವ ಡಾ. ಜೈಶಂಕರ ಇವರಿಂದ ಚೀನಾಗೆ ತಪರಾಕಿ

ಸೂರತ (ಗುಜರಾತ) – ಇಂದು ನಾನು ಒಂದು ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುವುದೇ ? ಅರುಣಾಚಲ ಪ್ರದೇಶವು ಭಾರತದ ಒಂದು ರಾಜ್ಯವಾಗಿತ್ತು, ಇದೆ ಮತ್ತು ಇರಲಿದೆ. ಹೆಸರು ಬದಲಾಯಿಸಿದ ಮಾತ್ರಕ್ಕೆ ಏನೂ ವ್ಯತ್ಯಾಸವಾಗುವುದಿಲ್ಲ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಜೈಶಂಕರ್ ಚೀನಾಕ್ಕೆ ತಪರಾಕಿ ನೀಡಿದ್ದಾರೆ. ಚೀನಾ ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರುಗಳನ್ನು ಬದಲಾಯಿಸಿ ಅದು ತನ್ನ ಭಾಗವಾಗಿದೆಯೆಂದು ದಾವೆ ಮಾಡಿತ್ತು. ಇದರಲ್ಲಿ 11 ವಸತಿ ಪ್ರದೇಶಗಳು, 12 ಪರ್ವತಗಳು, 4 ನದಿಗಳು, 1 ಕೆರೆ ಮತ್ತು ಗುಡ್ಡದಿಂದ ಹೋಗುವ 1 ರಸ್ತೆ ಒಳಗೊಂಡಿದೆ. ಈ ವಿಷಯದ ಕುರಿತು ಸೂರತ್ ನಗರದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಡಾ. ಜೈಶಂಕರ ಅವರಿಗೆ ಪ್ರಶ್ನೆಯನ್ನು ಕೇಳಲಾಗಿತ್ತು, ಕಳೆದ 7 ವರ್ಷಗಳಲ್ಲಿ ಚೀನಾ ಅರುಣಾಚಲ ಪ್ರದೇಶದ ಹೆಸರುಗಳನ್ನು ಬದಲಾಯಿಸಿರುವುದು ನಾಲ್ಕನೇ ಬಾರಿಯಾಗಿದೆ.

ಲಡಾಖ್‌ನಲ್ಲಿ ಅತಿಕ್ರಮಣ ಮಾಡಿರುವ ಚೀನಾದ ದಾವೆಯ ಕುರಿತು ವಿದೇಶಾಂಗ ಮಂತ್ರಿಗಳಿಗೆ ಪ್ರಶ್ನಿಸಿದಾಗ, ಇದಕ್ಕೆ ಪ್ರತ್ಯುತ್ತರಿಸುವಾಗ ಅವರು ಪ್ರತ್ಯಕ್ಷ ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಸೇನೆಯನ್ನು ನಿಯೋಜಿಸಲಾಗಿದೆ. ಅವರಿಗೆ ಯಾವಾಗ ಏನು ಮಾಡಬೇಕು ? ಎನ್ನುವುದು ತಿಳಿದಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಚೀನಾಗೆ ಶಬ್ದಗಳ ಭಾಷೆ ಅರ್ಥವಾಗದ ಕಾರಣ, ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಈಗ ಉತ್ತರಿಸಬೇಕಾಗಿದೆ !