ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ
ನವದೆಹಲಿ – ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 3 ತಿಂಗಳಲ್ಲಿ ದೇಶದಲ್ಲಿ ಶೇಕಡಾ 85 ಭಾಗದಲ್ಲಿ ತೀವ್ರ ಉಷ್ಣತೆಯ ಅಲೆಯು ಸಂಭವಿಸುತ್ತದೆ. 2023 ರಲ್ಲಿ, ಈ ಅಂಕಿ ಅಂಶವು ಶೇ. 60 ರಷ್ಟರವರೆಗೆ ಇತ್ತು. ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ದ ಉಷ್ಣತೆಯ ಅಲೆಯ ಮಾರ್ಗಸೂಚಿಗಳ ಪ್ರಕಾರ, 23 ರಾಜ್ಯಗಳು ಮತ್ತು 200 ಕ್ಕೂ ಹೆಚ್ಚು ನಗರಗಳಲ್ಲಿ ಇದರ ನೀಲನಕ್ಷೆಯನ್ನು (ಕ್ರಿಯಾ ಯೋಜನೆಗಳನ್ನು) ಸಿದ್ದಪಡಿಸಿದ್ದಾರೆ.
ಮುಂದಿನ ವಾರದಲ್ಲಿ ತಾಪಮಾನವು 3 ರಿಂದ 5 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಎಲ್ಲಕ್ಕಿಂತ ಅಧಿಕ ಪರಿಣಾಮ ಏಪ್ರಿಲ್ ತಿಂಗಳ ಕೊನೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಬೀರಲಿದೆ. ಈ ಪರಿಸ್ಥಿತಿಯು ಜೂನ್ ವರೆಗೆ ಇರುತ್ತದೆ. ಈ ಕಾಲಾವಧಿಯಲ್ಲಿ ಉಷ್ಣತೆಯ ಅಲೆಯು ಸತತ 20 ದಿನಗಳವರೆಗೆ ಇರುತ್ತದೆ.
#India #heatwave to be ‘above-normal’ in April-June, #IMD says https://t.co/ncUCds2WTt
— Economic Times (@EconomicTimes) April 1, 2024