ಶ್ರೀಲಂಕಾದ ಮಂತ್ರಿ ಜೀನ ತೊಂಡಮನ ಅವರ ಹೇಳಿಕೆ
ಕೊಲಂಬೊ (ಶ್ರೀಲಂಕಾ) – ಕಚ್ಚಾತಿವು ದ್ವೀಪ ಶ್ರೀಲಂಕಾ ಗಡಿಯಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಇಲ್ಲಿಯವರೆಗೆ, ಕಚ್ಚಾತಿವು ದ್ವೀಪವನ್ನು ಮರಳಿಸುವ ಸಂದರ್ಭದಲ್ಲಿ ಭಾರತ ಯಾವುದೇ ಅಧಿಕೃತ ನಿಲುವನ್ನು ನಮ್ಮಲ್ಲಿ ಮಂಡಿಸಿಲ್ಲ. ಒಂದು ವೇಳೆ ಇಂತಹ ನಿಲುವನ್ನು ಭಾರತ ಮಂಡಿಸಿದರೆ, ಅದಕ್ಕೆ ನಮ್ಮ ವಿದೇಶಾಂಗ ಸಚಿವಾಲಯ ಉತ್ತರ ನೀಡುವುದು, ಎಂದು ಶ್ರೀಲಂಕಾ ಸಚಿವ ಜೀನ ತೊಂಡಮನ ಇವರು ಪ್ರತಿಕ್ರಿಯಿಸಿದ್ದಾರೆ. 3 ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ಸಭೆಯಲ್ಲಿ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಶ್ರೀಲಂಕೆಯ ಹತ್ತಿರವಿರುವ ಭಾರತದ ಕಚ್ಚಾತಿವು ದ್ವೀಪವನ್ನು ಶ್ರೀಲಂಕೆಗೆ ಉಡುಗೊರೆಯಾಗಿ ನೀಡಿರುವ ಆರೋಪವನ್ನು ಮಾಡಿದ್ದರು. ಈ ಬಗ್ಗೆ ತೋಂಡಮಾನರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು.
ಸರಕಾರ ಬದಲಾದ ಮಾತ್ರಕ್ಕೆ ಗಡಿ ಬದಲಾಗುವುದಿಲ್ಲ ! – ಮತ್ತೊಬ್ಬ ಸಚಿವರ ಹೇಳಿಕೆ
ಮತ್ತೊಬ್ಬ ಸಚಿವರು ಭಾರತದ ಒಂದು ಆಂಗ್ಲ ಸುದ್ದಿ ಪತ್ರಿಕೆಯ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಹೆಸರು ಪ್ರಕಟಿಸದಿರುವ ಷರತ್ತಿನ ಮೇಲೆ ಉತ್ತರಿಸುವಾಗ, ಅದೇನೆ ಇರಲಿ; ಆದರೆ ಈಗ ಕಚ್ಚಾತಿವು ಶ್ರೀಲಂಕೆಯ ಗಡಿಯಲ್ಲಿದೆ. ಒಮ್ಮೆ ಈ ಗಡಿ ನಿರ್ಧಾರವಾದ ಬಳಿಕ ಯಾವುದೇ ದೇಶದ ಸರಕಾರ ಬದಲಾದ ಮಾತ್ರಕ್ಕೆ ಅದನ್ನು ಬದಲಾಯಿಸಲು ಬರುವುದಿಲ್ಲ. ಶ್ರೀಲಂಕೆಯ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಸಂದರ್ಭದಲ್ಲಿ ಭಾರತ ನಮ್ಮೊಂದಿಗೆ ಸಂಪರ್ಕಿಸಿಲ್ಲ ಎಂದು ಹೇಳಿದರು.
ಈ ಸಚಿವರು ಮಾತನ್ನು ಮುಂದುವರಿಸಿ, ಒಂದು ವೇಳೆ ಕಚ್ಚಾತಿವು ವಿಷಯ ತಮಿಳು ಸಮುದಾಯದ ಸಂದರ್ಭದಲ್ಲಿದ್ದರೆ, ತಮಿಳು ಜನತೆ ಎರಡೂ ದೇಶದಲ್ಲಿದ್ದಾರೆ. ಒಂದು ವೇಳೆ ಇದು ತಮಿಳು ಮೀನುಗಾರರ ವಿಷಯಕ್ಕೆ ಸಂಬಂಧಿಸಿದ್ದರೆ, ಇದರಲ್ಲಿ ಎರಡು ವಿಷಯಗಳನ್ನು ಜೋಡಿಸುವುದು ತಪ್ಪಾಗುತ್ತದೆ; ಕಾರಣ ಭಾರತೀಯ ಮೀನುಗಾರರ ಸಂದರ್ಭದಲ್ಲಿ ನಿಜವಾದ ಸಮಸ್ಯೆ ಏನೆಂದರೆ, ಅವರು ಭಾರತೀಯ ಸಮುದ್ರ ಗಡಿಯ ಹೊರಗೆ ‘ಬಾಟಮ ಟ್ರಾಲರ್ಸ’ (ಮೀನುಗಾರರ ಹಡಗು) ಉಪಯೋಗಿಸುವ ಸಂದರ್ಭದಲ್ಲಿದೆ. ಅಂತರರಾಷ್ಟ್ರೀಯ ಸಮುದ್ರ ಕಾನೂನಿನ ಅನುಸಾರ ಇದು ಅನಧಿಕೃತವಾಗಿದೆಯೆಂದು ಹೇಳಿದರು.