ವಾಷಿಂಗ್ಟನ – ‘ಓವ್ಹರಸೀಜ ಫ್ರೆಂಡ್ಸ ಆಫ್ ಬಿಜೆಪಿ ಇನ್ ಅಮೇರಿಕಾ’ ಈ ಸಂಘಟನೆ (ಓ.ಎಫ್.ಬಿಜೆಪಿ-ಯು.ಎಸ್.ಎ.) ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ, ಅಮೇರಿಕಾದ 20 ವಿವಿಧ ನಗರಗಳಲ್ಲಿ ವಾಹನಫೇರಿಯನ್ನು ಆಯೋಜಿಸಿದೆ. ಮುಂಬರುವ ಚುನಾವಣೆಯಲ್ಲಿ ಭಾಜಪ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಒಕ್ಕೂಟಕ್ಕೆ(ರಾಲೋಆ’ ಕ್ಕೆ) 400 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಭಾರೀ ಬಹುಮತದಿಂದ ಗೆಲ್ಲಿಸಲು ಅವರು ಭಾರತದ ಜನತೆಗೆ ಕರೆ ನೀಡಿದರು.
#WATCH प्रधानमंत्री नरेंद्र मोदी के समर्थन में बीजेपी के प्रवासी समर्थकों ने 31 मार्च को अटलांटा में एक कार रैली का आयोजन किया।
रैली में लगभग 150 कारों ने भाग लिया, सभी कारें भाजपा और भारतीय झंडों से सजी हुई थीं और उन्होंने ‘अबकी बार 400 पार’, ‘मैं हूं मोदी परिवार’ लिखी तख्तियां… pic.twitter.com/xNgMIR7ahZ
— ANI_HindiNews (@AHindinews) April 1, 2024
1. `ಓವ್ಹರಸೀಜ ಫ್ರೆಂಡ್ಸ ಆಫ್ ಬಿಜೆಪಿ ಇನ್ ಅಮೇರಿಕಾ’ ನ ಅಧ್ಯಕ್ಷ ಅಡಾಪಾ ಪ್ರಸಾದ ಮಾತನಾಡಿ, ‘ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾಜಪ ಮತ್ತು ‘ರಾಲೋಆ’ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಅಂದಾಜಿಸಲಾಗಿದೆ. ಇದರಿಂದ ಅಮೇರಿಕಾದ ಭಾರತೀಯ ಸಮುದಾಯ ತುಂಬಾ ಉತ್ಸುಕವಾಗಿದೆ.
2. ‘ಓವ್ಹರಸೀಜ ಫ್ರೆಂಡ್ಸ ಆಫ್ ಬಿಜೆಪಿ ಇನ್ ಅಮೇರಿಕಾ’ದ ಅಧ್ಯಕ್ಷ ವಾಸುದೇವ ಪಟೇಲ ಮಾತನಾಡಿ, ಅಮೇರಿಕಾದ ರಾಜಧಾನಿಯಲ್ಲಿಯೂ ಜನರು ಪ್ರಧಾನಮಂತ್ರಿ ಮೋದಿ ಅವರನ್ನು ಬೆಂಬಲಿಸಿ ವಾಹನಫೇರಿಯನ್ನು ಆಯೋಜಿಸಿದ್ದರು. ಭಾಜಪ ಗೆಲುವು ಕೇವಲ ಭಾರತಕ್ಕೆ ಮಾತ್ರವಲ್ಲ, ವಿಶ್ವದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಸಹ ಮುಖ್ಯವಾಗಿದೆ ಎಂದು ಹೇಳಿದರು.