ನವ ದೆಹಲಿ – ಮದ್ಯ ನೀತಿ ಪ್ರಕರಣದಲ್ಲಿ ಮಾರ್ಚ್ 21 ರಿಂದ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ‘ಇ.ಡಿ’ಯ ಕಸ್ಟಡಿ ಮುಗಿದಿದ್ದೂ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಏಪ್ರಿಲ್ 1 ರಂದು ಇಲ್ಲಿನ ರೌಜ್ ಅವೆನ್ಯೂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಕೇಜ್ರಿವಾಲ್ ಅವರನ್ನು ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯ ಮೇಲಿನ ಆದೇಶ ನೀಡಿದೆ. ಮಾರ್ಚ್ 21 ರಂದು ಅವರನ್ನು ಬಂಧಿಸಿ ಮಾರ್ಚ್ 22 ರಿಂದ 28 ರವರೆಗೆ ಇ.ಡಿ ಕಸ್ಟಡಿಗೆ ಕಳುಹಿಸಲಾಗಿತ್ತು. ಮರು ವಿಚಾರಣೆಯಲ್ಲಿ ಅವರ ಬಂಧನವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಕೇಜ್ರಿವಾಲ್ ಜೈಲಿನಲ್ಲಿ ‘ಶ್ರೀಮದ್ ಭಗವದ್ಗೀತೆ’ ಮತ್ತು ‘ರಾಮಾಯಣ’ ಗ್ರಂಥಗಳ ಜೊತೆಗೆ ‘ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್’ ಎಂಬ ಪುಸ್ತಕವನ್ನು ಓದಲು ಕೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸುರ್ಜಿತ್ ಸಿಂಗ್ ಯಾದವ್ ಕೇಜ್ರಿವಾಲ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಮೂಲಕ ಕೇಜ್ರಿವಾಲ್ ಜೈಲಿನಿಂದ ಸರಕಾರಿ ಆದೇಶ ಹೊರಡಿಸುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಲಾಗಿತ್ತು. ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.