ಧಾರ (ಮಧ್ಯಪ್ರದೇಶ) – ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಡೆಸಲಾಗುತ್ತಿದ್ದ ಭೋಜಶಾಲೆಯ ಸಮೀಕ್ಷೆಯನ್ನು ಸ್ಥಗಿತಗೊಳಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಮಧ್ಯಪ್ರದೇಶ ಉಚ್ಚನ್ಯಾಯಾಲಯದ ಸಮೀಕ್ಷೆಯ ಆದೇಶದ ವಿರುದ್ಧ ಮುಸಲ್ಮಾನ ಪಕ್ಷದವರು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೆ ನ್ಯಾಯಾಲಯವು `ಈ ಸ್ಥಳದಲ್ಲಿ ಮೂಲಸ್ವರೂಪಕ್ಕೆ ಧಕ್ಕೆಯಾಗುವಂತೆ, ಯಾವುದೇ ರೀತಿಯ ಉತ್ಖನನ ನಡೆಸಬಾರದು’ ಎಂದು ಸ್ಪಷ್ಟಪಡಿಸಿದೆ. ಉಚ್ಚ ನ್ಯಾಯಾಲಯದ ಅದೇಶದ ಮೇರೆಗೆ ಮಾರ್ಚ 22 ರಿಂದ ಇಲ್ಲಿ ಸಮೀಕ್ಷೆ ಆರಂಭಿಸಲಾಗಿದೆ.
ಸೌಜನ್ಯ : IBC24
ಸರ್ವೋಚ್ಚ ನ್ಯಾಯಾಲಯವು, ಪೂಜೆ ಮಾಡುವ ಸ್ಥಳ ಮತ್ತು ಮುಸಲ್ಮಾನರಿಂದ ನಮಾಜಪಠಣ ಮಾಡುವ ಸ್ಥಳಕ್ಕೆ ಹೋಗುವ ಪ್ರವೇಶದ್ವಾರ ಪ್ರತ್ಯೇಕವಾಗಿದೆ. ಇಲ್ಲಿ ಮುಸಲ್ಮಾನರು ಯಾವುದೇ ಅಡೆತಡೆಯಿಲ್ಲದೇ ನಮಾಜಪಠಣವನ್ನು ಮಾಡುತ್ತಿದ್ದಾರೆ ಎಂದು ಹೇಳಿದೆ.