600 ವರ್ಷಗಳ ನಂತರ ಜಮ್ಮು-ಕಾಶ್ಮೀರದ ಮಾರ್ತಾಂಡ ಸೂರ್ಯಮಂದಿರದ ಜೀರ್ಣೋದ್ಧಾರ !

ಶ್ರೀನಗರ – 600 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪುರಾತನ ಮಾರ್ತಾಂಡ ಸೂರ್ಯ ಮಂದಿರದ ಜೀರ್ಣೋದ್ಧಾರ ನಡೆಸಲಾಗುವುದು. ಈ ಸಂದರ್ಭದಲ್ಲಿ ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ 1 ಏಪ್ರಿಲ್ 2024 ರಂದು ಜಮ್ಮುವಿನ ನಗರ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ, ಅನಂತನಾಗ್‌ನಲ್ಲಿರುವ ಪ್ರಾಚೀನ ಮಾರ್ತಾಂಡ ಸೂರ್ಯ ಮಂದಿರದ ಜೀರ್ಣೋದ್ಧಾರದ ಯೋಜನೆ ಬಗ್ಗೆ ಚರ್ಚೆ ನಡೆಯಲಿದೆ. ಓಡಿಸ್ಸಾದ ಕೋನಾರ್ಕ ಮತ್ತು ಗುಜರಾತಿನ ಮೊಢೆರಾದಂತೆಯೇ ಕಾಶ್ಮೀರದಲ್ಲಿರುವ ಮಾರ್ತಾಂಡ ಸೂರ್ಯಮಂದಿರವು ಭಗವಾನ ಸೂರ್ಯನಿಗೆ ಸಮರ್ಪಿಸಲ್ಪಟ್ಟ ಭವ್ಯ ಹಿಂದೂ ದೇವಸ್ಥಾನಗಳಲ್ಲಿ ಒಂದಾಗಿದೆ.

1. ಮಾರ್ತಾಂಡ ಸೂರ್ಯ ಮಂದಿರದ ಸಂಕೀರ್ಣದಲ್ಲಿ ದೇವಸ್ಥಾನಗಳ ನಿರ್ಮಾತೃ ಸಾಮ್ರಾಟ ಲಲಿತಾದಿತ್ಯ ಮುಖೋಪಾಧ್ಯಾಯ ಅವರ ಪುತ್ಥಳಿಯನ್ನು ಕೂಡ ಸ್ಥಾಪಿಸುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

2. ಮಹಾರಾಜ ಲಲಿತಾದಿತ್ಯ ಮುಖೋಪಾಧ್ಯಾಯ ಅವರು ಮಾರ್ತಾಂಡ ಸೂರ್ಯ ಮಂದಿರವನ್ನು ನಿರ್ಮಿಸಿದ್ದರು. ಲಲಿತಾದಿತ್ಯ ಮುಖೋಪಾಧ್ಯಾಯರು ಕಾರ್ಕೋಟ ವಂಶದ ರಾಜರಾಗಿದ್ದರು. ಏಳನೆಯ ಶತಮಾನದಲ್ಲಿ ಆಳ್ವಿಕೆ ನಡೆಸಿದ ಅವರ ಮಹಿಮೆಯನ್ನು . ‘ರಾಜತರಂಗಿಣಿ’ ಎಂಬ ಗ್ರಂಥದಲ್ಲಿ ವರ್ಣಿಸಲಾಗಿದೆ.

3. ಸುಲ್ತಾನ ಸಿಕಂದರ ಶಾಹ ಮಿರಿ ಎಂಬವನು ಈ ಮಂದಿರವನ್ನು ಧ್ವಂಸಗೊಳಿಸಿದ್ದನು. ಅವನಿಗೆ ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವ ಕೆಟ್ಟ ಅಭ್ಯಾಸವಿತ್ತು.

4. ಜಮ್ಮು ಮತ್ತು ಕಾಶ್ಮೀರದ ಉಪ ರಾಜ್ಯಪಾಲ ಮನೋಜ ಸಿನ್ಹಾ ಅವರು ಮಾರ್ತಾಂಡ ಸೂರ್ಯಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.