Mukhtar Ansari Death : ಕುಖ್ಯಾತ ಗೂಂಡಾ ಮುಖ್ತಾರ್ ಅನ್ಸಾರಿಯ ಅಂತ್ಯಯಾತ್ರೆಯಲ್ಲಿ ೩೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಹಾಜರು !

ಗಾಜೀಪುರ (ಉತ್ತರ ಪ್ರದೇಶ) – ಕುಖ್ಯಾತ ರೌಡಿ ಮುಖ್ತಾರ್ ಅನ್ಸಾರಿಯ ಅಂತ್ಯಸಂಸ್ಕಾರ ನಡೆಯಿತು. ಇಲ್ಲಿಯ ಕಾಲಿಬಾಗ್ ಸ್ಮಶಾನದಲ್ಲಿ ಅನ್ಸಾರಿಯ ಶವ ಹೂಳಲಾಯಿತು. ಈ ಸಮಯದಲ್ಲಿ ಕೇವಲ ಅವರ ಕುಟುಂಬದವರಿಗೆ ಅನುಮತಿ ನೀಡಲಾಗಿತ್ತು. ಅವನ ಅಂತ್ಯಯಾತ್ರೆಯಲ್ಲಿ ಮತ್ತು ಕಬ್ರಸ್ತಾನದ ಹೊರಗೆ ೩೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಉಪಸ್ಥಿತರಿದ್ದರು. ಗೂಂಡಾ ಅನ್ಸಾರಿ ಬಾಂದಾದ ಜೈಲಿನಲ್ಲಿರುವಾಗ ಹೃದಯಘಾತವಾಗಿದ್ದರಿಂದ ಅವನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಅಲ್ಲಿ ಅವನನ್ನು ಮೃತಪಟ್ಟ ಎಂದು ಹೇಳಲಾಯಿತು. ಅನ್ಸಾರಿಗೆ ವಿಷ ನೀಡಿ ಕೊಲ್ಲಲಾಗಿದೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು. ಆದರೆ ಪೋಸ್ಟ್ ಮಾರ್ಟಂ ರಿಪೋರ್ಟಿನ ಪ್ರಕಾರ ಅವನ ಸಾವು ಹೃದಯಾಘಾತದಿಂದ ಆಗಿರುವುದು ಸಾಬೀತಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ವಿಚಾರಣೆ ನಡೆಯುವುದು.

ಸಂಪಾದಕೀಯ ನಿಲುವು

  • ೬೭ ದೂರುಗಳು ದಾಖಲಾಗಿರುವ, ೨ ಸಂಸದರ ಹತ್ಯೆಯ ಪ್ರಕರಣದಲ್ಲಿ ಶಿಕ್ಷೆಯಾಗಿರುವ, ಜೀವಾವಧಿ ಶಿಕ್ಷೆ ಭೋಗಿಸುತ್ತಿರುವ ಗೂಂಡಾ ಸತ್ತನಂತರ ಅವನ ಅಂತ್ಯಸಂಸ್ಕಾರಕ್ಕೆ ೩೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಸೇರುತ್ತಾರೆ ಆದರೂ ಢೋಂಗಿ ಜಾತ್ಯತೀತರು ಇದರ ಬಗ್ಗೆ ಏನೂ ಹೇಳುವುದಿಲ್ಲ, ಎಂಬುದನ್ನು ತಿಳಿದುಕೊಳ್ಳಿ !
  • ಮುಂಬಯಿಯಲ್ಲಿ ೧೯೯೩ ರ ಬಾಂಬ್ ಸ್ಫೋಟದ ಸೂತ್ರದಾರ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆಯಾದ ನಂತರ ಅವನ ಶವಯಾತ್ರೆಯಲ್ಲಿ ಕೂಡ ೨೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಸಹಭಾಗಿಯಾಗಿದ್ದರು. ಇದರಿಂದ ಇಂತಹ ಜನರು ಯಾವ ಮಾನಸಿಕತೆಯವರಾಗಿರುತ್ತಾರೆ, ಈಗ ಇದರ ಚರ್ಚೆ ನಡೆಯುವುದು ಆವಶ್ಯಕವಾಗಿದೆ !