ಭರೂಚ್ (ಗುಜರಾತ)ನಲ್ಲಿ ‘ಲವ್ ಜಿಹಾದ್’ ಪ್ರಕರಣದ ಆದಿಲ್ ಅಬ್ದುಲ್ ಪಟೇಲನ ಜಾಮೀನು ಅರ್ಜಿ ವಜಾ !

ಭರೂಚ್ (ಗುಜರಾತ್) – ಭರೂಚ್ ‘ಲವ್ ಜಿಹಾದ್’ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಆದಿಲ್ ಅಬ್ದುಲ್ ಪಟೇಲನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆದಿಲ್ ಅಬ್ದುಲ್ ಪಟೇಲ ಇವನು `ಇನ್ಸ್ಟಾಗ್ರಾಮ್’ನಲ್ಲಿ ನಕಲಿ ಖಾತೆ ತೆರೆದು ಹಿಂದೂ ಹುಡುಗಿಯನ್ನು ಸಿಲುಕಿಸಿದನು. ಅವನು ಮುಸಲ್ಮಾನ ಆಗಿದ್ದರೂ, `ಆರ್ಯ ಪಟೇಲ’ ಎನ್ನುವ ಹಿಂದೂ ಹೆಸರು ಇಟ್ಟುಕೊಂಡು ಸುಮಾರು 4 ವರ್ಷಗಳವರೆಗೆ ಸಂತ್ರಸ್ತೆ ಹಿಂದೂ ಹುಡುಗಿಯೊಂದಿಗೆ ಪ್ರೀತಿ ಸಂಬಂಧವನ್ನು ಇಟ್ಟುಕೊಂಡನು. ಜನವರಿ 2024 ರಲ್ಲಿ ನೊಂದ ಹಿಂದೂ ಹುಡುಗಿಗೆ ಸತ್ಯ ತಿಳಿದಾಗ, ಅವಳು ಆದಿಲ್ ನ ಗ್ರಾಮಕ್ಕೆ ಹೋಗಿ ಅವನನ್ನು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದಳು.

ಇದು ಇಂದಿನ ಪೀಳಿಗೆಯ ಕಣ್ಣು ತೆರೆಸುವ ಪ್ರಕರಣ ! – ನ್ಯಾಯಾಲಯ

ಆದಿಲ್ ಮಾರ್ಚ್ 2024 ರಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದನು. ಸರಕಾರಿ ನ್ಯಾಯವಾದಿಗಳು ಜಾಮೀನಿನ ಅರ್ಜಿಯನ್ನು ವಿರೋಧಿಸಿ, `ಇಂತಹ ಅಪರಾಧಿ ಜಾಮೀನಿನ ಮೇಲೆ ಬಿಡುಗಡೆಯಾದರೆ,ಅವನು ಪುನಃ ಈ ಕೃತ್ಯಗಳನ್ನು ಪುನರಾವರ್ತಿಸಬಹುದು ಮತ್ತು ಇತರ ಅಮಾಯಕ ಹುಡುಗಿಯರು ಬಲಿಯಾಗಬಹುದು’, ಎಂದು ವಾದಿಸಿದರು. ನ್ಯಾಯಾಲಯವು ಈ ವಾದವನ್ನು ಪುರಸ್ಕರಿಸಿ `ಇದು ಇಂದಿನ ಪೀಳಿಗೆಗೆ ಕಣ್ಣು ತೆರೆಸುವ ಪ್ರಕರಣವಾಗಿದೆ. ಆದಿಲ್ ಜಾಮೀನಿನ ಮೇಲೆ ಬಿಡುಗಡೆಯಾದರೆ ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ’, ಎಂದು ಹೇಳುತ್ತಾ, ಅವನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.