ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ ಪ್ರಕರಣದಲ್ಲಿ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ಇವರ ಹೇಳಿಕೆ !
ಓಟಾವಾ (ಕೆನಡಾ) – ಕೆನಡಾದ ನೇಲದಲ್ಲಿ ನಮ್ಮ ಒಬ್ಬ ನಾಗರಿಕನ ಹತ್ಯೆ ಆಗುವುದು, ಇದು ಗಂಭೀರ ವಿಷಯವಾಗಿದೆ. ಕೆನಡಾ ಸರಕಾರ ಈ ಪ್ರಕರಣದ ತನಿಖೆ ನಿಷ್ಪಕ್ಷ ಮತ್ತು ಯೋಗ್ಯ ರೀತಿಯಲ್ಲಿ ಮಾಡುತ್ತಿದೆ. ಕಾನೂನು ಬದ್ಧವಾಗಿ ಆಡಳಿತ ನಡೆಸಲು ಸರಕಾರ ಕಟಿಬದ್ಧವಾಗಿದೆ. ನಾವು ಭಾರತ ಸರಕಾರದ ಜೊತೆಗೆ ಸೇರಿ ತನಿಖೆ ಮುಂದುವರೆಸುವೆವು ಮತ್ತು ಪ್ರಕರಣದ ಆಳದವರೆಗೆ ಹೋಗುವೆವು. ಭವಿಷ್ಯದಲ್ಲಿ ಯಾವುದೇ ನಾಗರಿಕ ವಿದೇಶಿ ಹಸ್ತಕ್ಷೇಪಕ್ಕೆ ಬಲಿಯಾಗಬಾರದು. ಇದರ ಕಾಳಜಿ ಕೂಡ ನಾವು ವಹಿಸುವೆವು, ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ಇವರು ಹೇಳಿಕೆ ನೀಡಿದರು. ಟ್ರುಡೋ ಇವರು ‘ಹರದೀಪ ಸಿಂಹ ನಿಜ್ಜರ ಇವನ ಹತ್ಯೆಯ ತನಿಖೆಯಲ್ಲಿ ಭಾರತದ ಸಹಕಾರ ಹೇಗೆ ನಡೆಯುತ್ತಿದೆ ? ಭಾರತದಿಂದ ಕೆನಡಾಗೆ ಮೊದಲು ಅವರ ತನಿಖೆ ಪೂರ್ಣಗೊಳಿಸಲು ಹೇಳಿತ್ತೆ ?’ ಎಂದು ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಅವರು ಮೇಲಿನ ಉತ್ತರ ನೀಡಿದರು.