‘ಯೋಗೇಶ್ವರ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಟ್ರಸ್ಟ್’ನಿಂದ ನ್ಯಾಯಾಲಯದಲ್ಲಿ ದಾವೆ
ಆಗ್ರಾ – ‘ಯೋಗೇಶ್ವರ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಟ್ರಸ್ಟ್’ ಆಗ್ರಾ ಸಿವಿಲ್ ನ್ಯಾಯಾಲಯದಲ್ಲಿ ‘ತಾಜಮಹಾಲ ಇದು ತೇಜೋಲಿಂಗ ಮಹಾದೇವನ ದೇವಸ್ಥಾನ ಆಗಿದೆ’ ಎಂದು ದಾವೆ ಹೂಡಿದೆ. ಅರ್ಜಿದಾರರ ಪಕ್ಷದ ನ್ಯಾಯವಾದಿ ಅಜಯ ಪ್ರತಾಪ ಸಿಂಹನು ಬಾಬರನಾಮಾ, ಹುಮಾಯುನ ನಾಮಾ, ರಾಯಲ ಏಷ್ಯಾಟಿಕ ಸೊಸಾಯಟಿ ಆಫ್ ಬಂಗಾಲ, ‘ಬುಲೆಟಿನ ಆಫ್ ಎ.ಎಸ್.ಐ., ಏಪಿಗ್ರಾಫಿಕಾ ಇಂಡಿಕಾ, ವಿಶ್ವಕರ್ಮ ಪ್ರಕಾಶ, ಪುರಾಣ ಇತ್ಯಾದಿ ಗ್ರಂಥಗಳನ್ನು ಉಲ್ಲೇಖಿಸಿ ತಾಜಮಹಲ ಇದು ಮಹಾದೇವನ ದೇವಸ್ಥಾನ ಅಂದರೆ ತೇಜೋಮಹಾಲಯ ಆಗಿದೆಯೆಂದು ಸ್ಪಷ್ಟವಾಗುತ್ತಿದೆಯೆಂದು ಅವರು ಹೇಳಿದ್ದಾರೆ.
1. ‘ಎಪಿಗ್ರಾಫಿಕಾ ಇಂಡಿಕಾ’ ದಲ್ಲಿನ ಬಟೇಶ್ವರ ಶಿಲಾಶಾಸನದ ಪ್ರಕಾರ, ರಾಜ ಪರಮಲ ದೇವನು 1194 ರಲ್ಲಿ ಸ್ಫಟಿಕದಂತಹ ಬಿಳಿಯ ಶುಭ್ರ ಕಲ್ಲನ್ನು ಬಳಸಿ ಶಿವನ ದೇವಸ್ಥಾನವನ್ನು ನಿರ್ಮಿಸಿದ್ದನು. ಅದರ ಮೂಲ ಹೆಸರು ಚಾರಬಾಗ ಆಗಿದೆ. ಈ ಕಟ್ಟಡದ ವರ್ಣನೆಯನ್ನು ಬಾಬರನು ತನ್ನ `ಬಾಬರನಾಮಾ’ ಪುಸ್ತಕದಲ್ಲಿ ಮಾಡಿದ್ದಾನೆ.
2. ಆಗ್ರಾ ಗೆಜೆಟಿಯರ್, ಎ.ಎಸ್.ಐ. ಬುಲೆಟಿನ್ ಮತ್ತು ರಾಯಲ ಏಷ್ಯಾಟಿಕ ಸೊಸೈಟಿ ಆಫ್ ಬಂಗಾಳದ ವರದಿಯ ಪ್ರಕಾರ, ತಾಜಮಹಲ ಈ ಕಟ್ಟಡವನ್ನು ಯಾರು ನಿರ್ಮಿಸಿದರು ಎನ್ನುವ ವಿಷಯದಲ್ಲಿ ವಿವಾದವಿದೆ. ಪುರಾತತ್ವ ಇಲಾಖೆಯು 1946 ರಲ್ಲಿ ಇಲಾಖೆಯ ಪ್ರಧಾನ ನಿರ್ದೇಶಕ ಮಾಧೋಸ್ವರೂಪ ವತ್ಸ ಅವರ ‘ತಾಜಮಹಲನ ದುರಸ್ತಿ’ ಎಂಬ ಲೇಖನ ಪ್ರಸಿದ್ಧವಾಗಿತ್ತು. ಈ ಲೇಖನದಲ್ಲಿ ‘ತಾಜಮಹಲನ ವಾಸ್ತುಶಿಲ್ಪಿ ಯಾರು ?’ ಇದು ವಿವಾದಿತ ವಿಷಯವಾಗಿದೆಯೆಂದು ಬರೆದಿದ್ದರು.
The Tajmahal predates Shah Jahan and is in fact Tejo Mahalaya !
– Yogeshwar Shree Krishna Janmasthan Sewa Sangh Trust’s petition in the courtIt is a fact that Mu$|!m invaders destroyed religious sites of Hindus and built I$|@m!c structures there.
Hence the Union Government… pic.twitter.com/K9TjOqUfaQ
— Sanatan Prabhat (@SanatanPrabhat) March 28, 2024
3. ‘ಈಸ್ಟ್ ಇಂಡಿಯಾ ಕಂಪನಿ’ಯ ಉದ್ಯೋಗಿ ಪೀಟರ್ ಮುಂಡಿ ಅವರು 1632 ರಲ್ಲಿ ತಾಜಗಂಜ್‌ನ ಮಾರುಕಟ್ಟೆಯನ್ನು ಉಲ್ಲೇಖಿಸಿದ್ದಾರೆ. ಅಲೆಕ್ಸಾಂಡರ ಕನ್ನಿಂಗ್ ಹ್ಯಾಂ ಇವರ ವರದಿಯಲ್ಲಿ, ‘ತಾಜಮಹಲ ಒಳಗೆ ಒಂದು ಕಪ್ಪು ಬಣ್ಣದ ಬಸಾಲ್ಟ್ ಸ್ತಂಭ ಕಂಡುಬಂದಿದೆ, ಅದರ ಮೇಲೆ ಒಂದು ಆಮೆಯನ್ನು ಕೆತ್ತಲಾಗಿತ್ತು. ಅದು ಜೈನ ಧರ್ಮದ ತೀರ್ಥಂಕರ ಮುನೀಶ್ವರನಾಥರ ಪ್ರತೀಕವಾಗಿದೆ’, ಎಂದು ಹೇಳಿದ್ದರು. ತಾಜಮಹಾಲ ಇದು ಮುಮತಾಜ ಮಹಲನ ಪ್ರೀತಿಯ ನೆನಪಿಗಾಗಿ ಶಹಜಹಾನನು ಕಟ್ಟಿಸಿದ್ದಾನೆಂದು ಹೇಳಲಾಗುತ್ತದೆ; ಆದರೆ ಆಗ್ರಾ ಗೆಝೆಟಿಯರ ಮತ್ತು ಬುರಹಾನಪೂರ ಗೆಝೆಟಿಯರನಲ್ಲಿ ಮುಮತಾಜ ಮಹಲಳ ಸಾವಿನ ವರ್ಷದಲ್ಲಿ ವ್ಯತ್ಯಾಸ ಕಂಡುಬಂದಿದೆ.
4. ನ್ಯಾಯವಾದಿ ಅಜಯ್ ಪ್ರತಾಪ ಸಿಂಹ ಮಾತನಾಡಿ, ಪ್ರತಿಯೊಂದು ವಿಷಯವನ್ನು ವಿಶ್ಲೇಷಿಸಿದ ನಂತರ ತಾಜಮಹಲ ಷಹಜಹಾನನಗಿಂತ ಮೊದಲಿನಿಂದಲೂ ಅಸ್ತಿತ್ವದಲ್ಲಿತ್ತು ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ. ಮೂಲದಲ್ಲಿ ಇದು ತೇಜೋಲಿಂಗ ಮಹಾದೇವನ ದೇವಸ್ಥಾನವಾಗಿದೆ. ಅದನ್ನು ತೇಜೋಮಹಾಲಯ ಎಂದು ಹೇಳುತ್ತಾರೆ.
5. ಈ ಪ್ರಕರಣದಲ್ಲಿ ಭಗವಾನ ಶ್ರೀ ತೇಜೋಮಹದೇವ, ಯೋಗೇಶ್ವರ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಟ್ರಸ್ಟ್, ಕ್ಷತ್ರಿಯ ಶಕ್ತಿಪೀಠ ವಿಕಾಸ ಟ್ರಸ್ಟ ಮತ್ತು ವಕೀಲ ಅಜಯ ಪ್ರತಾಪ ಸಿಂಗ ಅವರು ವಾದಿಸುವವರಿದ್ದಾರೆ. ಭಾರತ ಸರಕಾರದ ಸಾಂಸ್ಕೃತಿಕ ಸಚಿವಾಲಯ, ‘ಎಎಸ್‌ಐ’ನ ಮಹಾನಿರ್ದೇಶಕರು, ‘ಎಎಸ್‌ಐ’ ಆಗ್ರಾ ಸರ್ಕಲ್‌ನ ಪುರಾತತ್ವಶಾಸ್ತ್ರಜ್ಞ, ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಮಹಾನಿರ್ದೇಶಕರು ಪ್ರತಿವಾದಿಗಳಾಗಿದ್ದಾರೆ.
ಸಂಪಾದಕೀಯ ನಿಲುವುಮುಸ್ಲಿಂ ದಾಳಿಕೋರರು ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ, ಅಲ್ಲಿ ಇಸ್ಲಾಮಿಕ ಕಟ್ಟಡಗಳನ್ನು ನಿರ್ಮಿಸಿದರು ಎನ್ನುವುದು ನಿಜವಾಗಿದೆ. ಆದುದರಿಂದ ಈಗ ಕೇಂದ್ರ ಸರಕಾರವೇ ಮುಂದಾಳತ್ವ ವಹಿಸಿ ಭಾರತದಾದ್ಯಂತದ ಇಂತಹ ಇಸ್ಲಾಮಿಕ್ ಕಟ್ಟಡಗಳ ಸಮೀಕ್ಷೆ ನಡೆಸಿ ಹಿಂದೂಗಳ ವಶಕ್ಕೆ ಕೊಡುವುದು ಆವಶ್ಯಕವಾಗಿದೆ ! |