US Kejriwal Arrest : ‘ನಮ್ಮ ನಿಲುವಿನಲ್ಲಿ ನಾವು ದೃಢವಾಗಿದ್ದು ನ್ಯಾಯಯುತ ತನಿಖೆ ನಡೆಯಬೇಕಂತೆ !’ – ಅಮೇರಿಕಾ

ಕೇಜ್ರಿವಾಲ್ ಬಂಧನದ ಬಗ್ಗೆ ಮತ್ತೆ ಬೊಟ್ಟು ಮಾಡಿದ ಅಮೆರಿಕ !

ವಾಷಿಂಗ್ಟನ್ (ಅಮೇರಿಕಾ) – ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಕುರಿತು ಅಮೆರಿಕದ ಹೇಳಿಕೆಗೆ ಸಂಬಂಧಿಸಿದಂತೆ ಭಾರತದ ಆಂತರಿಕ ಮೂಲಗಳೊಂದಿಗೆ ಮಧ್ಯಪ್ರವೇಶಿಸದಂತೆ ಭಾರತವು ಯುಎಸ್ ರಾಜತಾಂತ್ರಿಕ ಗ್ಲೋರಿಯಾ ಬರ್ನಾ ಅವರನ್ನು ಸಚಿವಾಲಯಕ್ಕೆ ಕರೆಸಿ ಎಚ್ಚರಿಕೆ ನೀಡಿತ್ತು; ಆದರೆ ಆ ಬಳಿಕವೂ ಅಮೆರಿಕ ಮತ್ತೊಮ್ಮೆ ಈ ಪ್ರಕರಣದ ಬಗ್ಗೆ ಹೇಳಿಕೆ ನೀಡಿದೆ. ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾವು ನಮ್ಮ ನಿಲುವಿಗೆ ಬದ್ಧರಾಗಿದ್ದೇವೆ ಮತ್ತು ಅದರಿಂದ ಯಾರಿಗೂ ಯಾವುದೇ ತೊಂದರೆ ಉಂಟಾಗಬಾರದು ಎಂದು ಹೇಳಿದರು. ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯು ನ್ಯಾಯಯುತ, ಪಾರದರ್ಶಕ ಮತ್ತು ಸಮಯಕ್ಕೆ ಪೂರ್ಣಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ, ಎಂದವರು ಹೇಳಿದರು.

1. ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಕುರಿತು ಅಮೆರಿಕಾವು, ‘ತೆರಿಗೆ ಅಧಿಕಾರಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಹೀಗಾಗಿ ಚುನಾವಣಾ ಪ್ರಚಾರದಲ್ಲಿ ಅವರಿಗೆ ತೊಂದರೆಯಾಗಬಹುದು’ ಎಂದು ಕೂಡ ಅಮೆರಿಕ ಹೇಳಿಕೆ ನೀಡಿದೆ.

2. ಗ್ಲೋರಿಯಾ ಬರ್ನಾ ಅವರನ್ನು ಭಾರತ ಸರ್ಕಾರ ಪ್ರಶ್ನಿಸಿದ ಬಗ್ಗೆ ಸುದ್ದಿಗಾರರು ಕೇಳಿದಾಗ, ಮಿಲ್ಲರ್, “ಆ ಚರ್ಚೆಯ ಬಗೆಗಿನ ಮಾಹಿತಿ ನಾನು ನೀಡಲು ಸಾಧ್ಯವಿಲ್ಲ” ಎಂದು ಹೇಳಿದರು.

3. ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಸಂಬಂಧಿಸಿದಂತೆ, ಮಾರ್ಚ್ 26 ರ ರಾತ್ರಿ ಅಮೆರಿಕ, ‘ಅರವಿಂದ್ ಕೇಜ್ರಿವಾಲ್ ಬಂಧನ ಪ್ರಕರಣದ ಮೇಲೆ ನಮ್ಮ ಸರಕಾರ ಕಣ್ಣಿಟ್ಟಿದೆ. ಇದರ ನ್ಯಾಯಯುತ ತನಿಖೆಯಾಗಬೇಕು. ಈ ಅವಧಿಯಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಸರಿಸಬೇಕು’ ಎಂದು ಹೇಳಿತ್ತು.

ಸಂಪಾದಕೀಯ ನಿಲುವು

ಭಾರತ ಸರ್ಕಾರ ಎರಡು ಬಾರಿ ಹೇಳಿದರೂ ಅಮೆರಿಕಕ್ಕೆ ಅರ್ಥವಾಗುತ್ತಿಲ್ಲ ಎಂದಲ್ಲ, ಕೇಜ್ರಿವಾಲ್ ಪ್ರಕರಣದಲ್ಲಿ ಅಮೆರಿಕ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ. ಇದರ ಹಿಂದೆ ಖಲಿಸ್ತಾನಿಗಳು ಇದ್ದಾರೆಯೇ ? ಈ ಬಗ್ಗೆ ತನಿಖೆ ನಡೆಸಿ ಅಮೆರಿಕಾಗೆ ಬುದ್ಧಿ ಹೇಳಬೇಕಿದೆ !

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬಂಧನದ ವೇಳೆ ಮೌನವಾಗಿದ್ದ ಅಮೆರಿಕ ದೆಹಲಿ ಮುಖ್ಯಮಂತ್ರಿ ಬಂಧನಕ್ಕೆ ಭಾರತಕ್ಕೇ ಮರು ಪ್ರಶ್ನೆ ಎಸೆಯುತ್ತಿದೆ. ‘ಕೇಜ್ರಿವಾಲ್ ಬಂಧನದಿಂದ ಅಮೆರಿಕ ಇಷ್ಟೊಂದು ಅಸ್ವಸ್ಥವಾಗಲು ಕಾರಣವೇನು? ಇದರ ತನಿಖೆಯಾಗಬೇಕು !