ವಿವಾಹ ಮಾಡಿಕೊಳ್ಳದೆ ವಯಸ್ಸಿಗೆ ಬಂದಿರುವ ಇಬ್ಬರು ವ್ಯಕ್ತಿಗಳು ಪರಸ್ಪರ ಒಪ್ಪಿಗೆಯಿಂದ ಸಂಬಂಧ ಬೆಳೆಸಿದರೆ, ಅದು ಅಪರಾಧವಾಗುವುದಿಲ್ಲ ! – ರಾಜಸ್ಥಾನ ಉಚ್ಚ ನ್ಯಾಯಾಲಯ

ಜೈಪುರ್ (ರಾಜಸ್ಥಾನ) – ನಮ್ಮ ಸಮಾಜದಲ್ಲಿ, ಶಾರೀರಿಕ ಸಂಬಂಧ ಕೇವಲ ವೈವಾಹಿಕ ಜೋಡಿಗಳಲ್ಲಿ ಇರುತ್ತದೆ ಎಂದು ನಂಬಲಾಗಿದೆ; ಆದರೆ ವಿವಾಹ ಮಾಡಿಕೊಳ್ಳದೆ ವಯಸ್ಸಿಗೆ ಬಂದಿರುವ ಇಬ್ಬರು ವ್ಯಕ್ತಿಗಳು ಪರಸ್ಪರ ಒಪ್ಪಿಕೊಂಡು ಸಂಬಂಧ ಇಟ್ಟುಕೊಳ್ಳುವುದು, ಇದು ಅಪರಾಧವಾಗುವುದಿಲ್ಲ. ಭಾರತೀಯ ದಂಡ ಸಂಹಿತೆಯ ಕಲಂ ೪೯೪ ಇಲ್ಲಿ ಜಾರಿ ಆಗುವುದಿಲ್ಲ; ಕಾರಣ ಗಂಡ ಮತ್ತು ಹೆಂಡತಿ ಇವರಲ್ಲಿ ಒಬ್ಬರು ಇನ್ನೊಂದು ವಿವಾಹ ಮಾಡಿಕೊಂಡಿಲ್ಲ ಎಂದರೆ ಅಲ್ಲಿಯವರೆಗೆ ‘ಲಿವ್ ಇನ್ ರಿಲೇಶನ್ ಶಿಪ್’ ನಂತಹದು (ಲಿವ್ ಇನ್ ರಿಲೇಶನ್ ಶಿಪ್ ಎಂದರೆ ವಿವಾಹ ಮಾಡಿಕೊಳ್ಳದೆ ಪುರುಷ ಮತ್ತು ಸ್ತ್ರೀಯು ಒಟ್ಟಾಗಿ ವಾಸಿಸುವುದು !)

೪೯೪ ಕಲಂ ಸಂಬಂಧಕ್ಕೆ ಅನ್ವಯಿಸುವುದಿಲ್ಲ, ಎಂದು ರಾಜಸ್ಥಾನದ ಉಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಪತಿಯಿಂದ ಪತ್ನಿಯನ್ನು ಅಪಹರಿಸಿದ ಬಗ್ಗೆ ಅರ್ಜಿ ದಾಖಲಾಗಿತ್ತು. ಅದರ ಬಗ್ಗೆ ಪತ್ನಿಯು ತನ್ನ ಅಪಹರಣವಾಗಿಲ್ಲ, ಆಕೆ ಸ್ವ ಇಚ್ಛೆಯಿಂದ ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದಳು. ನಂತರ ನ್ಯಾಯಾಲಯವು ಮೇಲಿನ ತೀರ್ಪು ನೀಡಿದೆ.

ವಿಚಾರಣೆಯ ಸಮಯದಲ್ಲಿ ಅರ್ಜಿದಾರರ ನ್ಯಾಯವಾದಿ, ಮಹಿಳೆಯು, ಸಂಜೀವ ಎಂಬ ವ್ಯಕ್ತಿಯ ಜೊತೆಗೆ ಆಕೆಯ ವಿವಾಹ ಬಾಹ್ಯ ಸಂಬಂಧ ಇದೆ ಎಂದು ಒಪ್ಪಿಕೊಂಡಿದ್ದಾಳೆ. ಆದ್ದರಿಂದ ಭಾರತೀಯ ದಂಡ ಸಂಹಿತೆಯ ಕಲಂ ೪೯೪ ಮತ್ತು ೪೯೭ ಅಂತರ್ಗತ ಈ ಅಪರಾಧ ಬರುತ್ತದೆ ಎಂದು ದಾವೆ ಮಾಡಿದ್ದಾರೆ. ಸಾಮಾಜಿಕ ನೈತಿಕತೆಯ ರಕ್ಷಣೆಗಾಗಿ ನ್ಯಾಯಾಲಯವು ಅದರ ಅಧಿಕಾರದ ಉಪಯೋಗ ಮಾಡಬೇಕು. ಇದರ ಬಗ್ಗೆ ನ್ಯಾಯಾಲಯವು, ವಯಸ್ಸಿಗೆ ಬಂದಿರುವ ಒಬ್ಬ ಮಹಿಳೆ ಆಕೆ ಇಚ್ಚಿತ ವ್ಯಕ್ತಿಯ ಜೊತೆಗೆ ವಿವಾಹ ಮಾಡಿಕೊಳ್ಳಬಹುದು. ಆಕೆಯ ಇಚ್ಛಿತ ವ್ಯಕ್ತಿಯ ಜೊತೆಗೆ ವಾಸಿಸಬಹುದು. ಈ ಪ್ರಕರಣದಲ್ಲಿ ಮಹಿಳೆಯು ತನ್ನ ಇಚ್ಛೆಯ ಪ್ರಕಾರ ಮನೆ ಬಿಟ್ಟು ಬಂದು ಸಂಜೀವ ಜೊತೆಗೆ ವಾಸಿಸುತ್ತಿದ್ದಾಳೆ ಹಾಗಾಗಿ ಅದು ಅಪರಾಧವಾಗುವುದಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಕಾನೂನಿನ ಭಾಷೆಯಲ್ಲಿ ಇದು ಅಪರಾಧವಾಗದಿದ್ದರೂ, ಸಾಮಾಜಿಕ ದೃಷ್ಟಿಯಿಂದ ಅದನ್ನು ಒಳ್ಳೆಯ ಆಚರಣೆ ಎನ್ನಲಾಗದು, ಇದು ವಸ್ತುಸ್ಥಿತಿಯಾಗಿದೆ !

ಆಂಗ್ಲರದಲ್ಲ ಬದಲಾಗಿ ಭಾರತೀಯ ಸಂಸ್ಕೃತಿಯ ಪ್ರಕಾರ ಕಾನೂನು ರೂಪಿಸುವುದು ಎಷ್ಟು ಅವಶ್ಯಕವಾಗಿದೆ ಎಂಬುದು ಈ ಘಟನೆಯಿಂದ ತಿಳಿದು ಬರುತ್ತದೆ !