Afghanistan Sharia Law : ಅಫ್ಘಾನಿಸ್ತಾನದಲ್ಲಿ ವ್ಯಭಿಚಾರ ನಡೆಸುವ ಮಹಿಳೆಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ !

ತಾಲಿಬಾನ ಸರಕಾರ ಪುರುಷರಿಗೂ ಕೂಡ ಈ ರೀತಿಯ ಶಿಕ್ಷೆ ಏಕೆ ವಿಧಿಸುತ್ತಿಲ್ಲ ?

(ವ್ಯಭಿಚಾರ ಅಂದರೆ ಪತಿಯು ಅಲ್ಲದೆ ಇತರ ಪುರುಷರ ಜೊತೆಗೆ ಲೈಂಗಿಕ ಸಂಬಂಧ ಇಡುವುದು)

ಕಾಬುಲ್ (ಅಪಘಾನಿಸ್ತಾನ) – ಯಾವುದೇ ಸ್ತ್ರೀ ವ್ಯಭಿಚಾರದಲ್ಲಿ ತಪ್ಪಿತಸ್ತೆ ಎಂದು ಕಂಡುಬಂದರೆ ಆಕೆಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ವಿಧಿಸಲಾಗುವುದು, ಎಂದು ಅಪಘಾನಿಸ್ತಾನದಲ್ಲಿನ ತಾಲಿಬಾನ ಸರಕಾರದ ಸರ್ವೋಚ್ಚ ಮುಖಂಡ ಮುಲ್ಲಾ ಹಿಬತುಲ್ಲ ಅಖುಂದಜಾದನು ಆದೇಶ ನೀಡಿದ್ದಾನೆ. ನಾವು ಅಫಘಾನಿಸ್ತಾನದಲ್ಲಿ ಶರಿಯತ್ ಕಾನೂನು ಮತ್ತೊಮ್ಮೆ ಜಾರಿಗೊಳಿಸುವೆವು ಎಂದು ಹೇಳಿದ್ದಾನೆ.

ಶರಿಯತ್ ಕಾನೂನು ಎಂದರೇನು ?

ಶರಿಯದ್ ಕಾನೂನಿನಲ್ಲಿ ಕುಟುಂಬ, ಆರ್ಥಿಕ ಮತ್ತು ವ್ಯವಸಾಯ ಇದಕ್ಕೆ ಸಂಬಂಧಿತ ನಿಯಮಗಳ ಸಮಾವೇಶವಿದೆ. ಮದ್ಯ ಸೇವನೆ, ಮಾದಕ ಪದಾರ್ಥ ಸೇವನೆ ಮಾಡುವುದು ಮತ್ತು ಕಳ್ಳ ಸಾಗಾಣಿಕೆ ಮಾಡುವುದು, ಈ ಕೃತ್ಯಗಳು ಶರೀರತ ಕಾನೂನಿನಲ್ಲಿ ಮುಖ್ಯ ಅಪರಾಧಗಳಲ್ಲಿ ಒಂದಾಗಿವೆ. ಇದರಿಂದ ಈ ಅಪರಾಧಗಳಿಗಾಗಿ ಕಠಿಣ ಶಿಕ್ಷೆಯ ನಿಯಮವಿದೆ.

ತಾಲಿಬಾನ ಸರಕಾರವು ಮಹಿಳೆಯರ ಮೇಲೆ ಹೇರಿರುವ ನಿಷೇಧಗಳು !

ಅಪಘಾನಿಸ್ತಾನದಲ್ಲಿ ತಾಲಿಬಾನವು ಅಧಿಕಾರಕ್ಕೆ ಬಂದ ನಂತರ ‘ಮಹಿಳೆಯರ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ, ಎಂದು ಆಶ್ವಾಸನೆ ನೀಡಿತ್ತು, ಆದರೆ ಇಲ್ಲಿ ಹೆಣ್ಣು ಮಕ್ಕಳ ಮಾಧ್ಯಮಿಕ ಉಚ್ಚ ಮಾಧ್ಯಮಿಕ ಶಿಕ್ಷಣವನ್ನು ನಿಷೇಧಿಸಿದೆ. ಅವರ ಕಾಲೇಜಿನ ಶಿಕ್ಷಣ ನಿಲ್ಲಿಸಲಾಗಿದೆ. ಬಹಳಷ್ಟು ಮಹಿಳೆಯರನ್ನು ನೌಕರಿಯಿಂದ ತೆಗೆದಿದ್ದಾರೆ ಅಥವಾ ಅವರ ಜಾಗದಲ್ಲಿ ಅವರ ಕುಟುಂಬದಲ್ಲಿನ ಪುರುಷರನ್ನು ನೇಮಕಗೊಳಿಸಿದ್ದಾರೆ. ಅಪಘಾನಿಸ್ತಾನದಲ್ಲಿ ಮಹಿಳೆಯರು ‘ಬ್ಯೂಟಿ ಪಾರ್ಲರ್’ ಗೆ ಹೋಗುವುದು, ಆಟ ಆಡುವುದು ಇಂತಹ ಅನೇಕ ಕೃತಿಗಳ ಮೇಲೆ ನಿಷೇದ ಹೇರಿದೆ. (ಇದರ ಬಗ್ಗೆ ಜಗತ್ತಿನಾದ್ಯಂತ ಇರುವ ಮಹಿಳಾ ಸಂಘಟನೆಗಳು ಏಕೆ ಮಾತನಾಡುತ್ತಿಲ್ಲ ? ಇಸ್ಲಾಂ ಅನ್ನು ಹೊಗಳುವವರು ಇದರ ಬಗ್ಗೆ ಮೌನ ಏಕೆ ? – ಸಂಪಾದಕರು)