ಅರುಣಾಚಲ ಪ್ರದೇಶದ ತನ್ನದೆಂದು ಚೀನಾದಿಂದ ಪುನಃ ದಾವೆ !

ಬೀಜಿಂಗ್ (ಚೀನಾ) – ಚೀನಾ ಮತ್ತೊಮ್ಮೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವೆಂದು ಹೇಳಿಕೊಂಡಿದೆ. ಚೀನಾದ ಹೇಳಿಕೆಯನ್ನು ಭಾರತ ಮತ್ತೆ ತಿರಸ್ಕರಿಸಿದೆ. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ತಮ್ಮ ಸಿಂಗಾಪುರ ಪ್ರವಾಸದಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಯಿಂದಾಗಿ ಅರುಣಾಚಲ ಪ್ರದೇಶದ ಮೇಲೆ ಚೀನಾ ಪುನಃ ತನ್ನ ಹಕ್ಕು ಇದೆಯೆಂದು ಹೇಳಿದೆ.

1. ಅರುಣಾಚಲ ಪ್ರದೇಶದ ವಿಷಯದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಡಾ.ಜೈಶಂಕರ ಇವರು, ಇದೇನು ಹೊಸ ವಿಷಯವಲ್ಲ, ಚೀನಾ ಹೇಳುತ್ತಿದೆ ಮತ್ತು ಅದನ್ನು ಮುಂದಕ್ಕೆ ಒಯ್ದಿದೆ. ಈ ಹೇಳಿಕೆ ಅಸಂಬದ್ಧ ಮತ್ತು ಅರ್ಥಹೀನವಾಗಿವೆ ಎಂದು ನನಗೆ ಅನಿಸುತ್ತದೆ. ನಾವು ಈ ವಿಷಯದಲ್ಲಿ ಅತ್ಯಂತ ಸ್ಪಷ್ಟವಾಗಿದ್ದೇವೆ ಮತ್ತು ನಮಗೆ ಸಮಾನ ನಿಲುವು ಇದೆ.

2. ಈ ಕುರಿತು ಪ್ರತಿಕ್ರಿಯಿಸುವಾಗ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ ಜಿಯಾನ ಇವರು ಮಾತನಾಡಿ, ಭಾರತ ಮತ್ತು ಚೀನಾ ನಡುವೆ ಗಡಿಯ ಬಗ್ಗೆ ಯಾವತ್ತೂ ಒಮ್ಮತ ಆಗಿಲ್ಲ. 1987 ರಲ್ಲಿ, ಭಾರತವು ಅನಧಿಕೃತವಾಗಿ ವಶಕ್ಕೆ ಪಡೆದಿರುವ ಪ್ರದೇಶವನ್ನು `ತಥಾಕಥಿತ ಅರುಣಾಚಲ ಪ್ರದೇಶ’ ಎಂದು ಹೇಳುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಹಲವಾರು ಬಾರಿ ಸ್ಪಷ್ಟ ಪಡಿಸಿದ್ದರೂ, ಅರುಣಾಚಲ ಪ್ರದೇಶದ ಮೇಲೆ ಪದೇ ಪದೇ ತನ್ನ ಹಕ್ಕು ಸಾಧಿಸುವ ಚೀನಾಕ್ಕೆ ಭಾರತವು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು, ಎನ್ನುವುದೂ ಅಷ್ಟೇ ಸತ್ಯವಾಗಿದೆ !