Feeding Meat near Temple: ಮುಂಬಯಿಯ ದೇವಸ್ಥಾನದ ಬಳಿ ಬೀದಿ ನಾಯಿಗಳಿಗೆ ಮಾಂಸ ನೀಡಿದ ಇಬ್ಬರು ಮಹಿಳೆಯರ ವಿರುದ್ಧ ದೂರು ದಾಖಲು !

ಮುಂಬಯಿ – ಇಲ್ಲಿಯ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಬೀದಿ ನಾಯಿಗಳಿಗೆ ಮಾಂಸ ಹಾಕಿದ್ದ ಇಬ್ಬರು ಮಹಿಳೆಯರ ವಿರುದ್ಧ ಗಾವದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರ ಮೇಲೆ ಧಾರ್ಮಿಕ ಸ್ಥಳಗಳ ವಿಡಂಬನೆ ಮಾಡಿರುವ ಆರೋಪ ಮಾಡಲಾಗಿದೆ. ನಂದಿನಿ ಬೆಲೆಕರ ಮತ್ತು ಪಲ್ಲವಿ ಪಾಟೀಲ ಎಂದು ಈ ಮಹಿಳೆಯರ ಹೆಸರುಗಳಾಗಿವೆ.

೧. ನಂದಿನಿ ಬೆಲೆಕರ ಇವರು ಅನೇಕ ಬಾರಿ ಮಹಾಲಕ್ಷ್ಮಿ ದೇವಸ್ಥಾನದ ಪರಿಸರದಲ್ಲಿನ ಬೀದಿ ನಾಯಿಗಳಿಗೆ ಮಾಂಸದ ತುಂಡು ಹಾಕುತ್ತಿದ್ದರು, ಎಂದು ಇಲ್ಲಿಯ ಭಕ್ತರು ಅನೇಕ ದಿನದಿಂದ ದೂರತ್ತಿದ್ದರು. ಇದರ ನಂತರ ಮಂದಿರ ಸಮಿತಿಯಿಂದ ಮಾಂಸ ಹಾಕದೆ ಇತರ ತಿನಸುಗಳು ಹಾಕಬೇಕೆಂದು ಬೇಲೆಕರ ಇವರಿಗೆ ಹೇಳಲಾಗಿತ್ತು. ಆದರೆ ಅವರು ಕೇಳಲಿಲ್ಲ, ಆದ್ದರಿಂದ ಅವರ ವಿರುದ್ಧ ಶೀಲಾ ಶಾಹ ಇವರು ದೂರು ದಾಖಲಿಸಿದ್ದರು.

೨. ಇದರ ಪ್ರಕಾರ ನಂದಿನಿ ಬೆಲೆಕರ ಇವರ ವಿರುದ್ಧ ಧಾರ್ಮಿಕ ಭಾವನೆ ನೋಯಿಸಿರುವ ಪ್ರಕರಣದಲ್ಲಿ ಹಾಗೂ ಪಲ್ಲವಿ ಪಾಟೀಲ ಇವರ ವಿರುದ್ಧ ಶಾಂತಿಭಂಗ ಮಾಡಿರುವ ಪ್ರಕರಣದಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿನ ಆರೋಪಿಗಳನ್ನು ಇಲ್ಲಿಯವರೆಗೆ ಬಂಧಿಸಲಾಗಿಲ್ಲ.

ಸಂಪಾದಕೀಯ ನಿಲುವು

ಈ ರೀತಿ ಇತರ ಧರ್ಮಿಯರ ಪ್ರಾರ್ಥನಾ ಸ್ಥಳದ ಹತ್ತಿರ ಹೋಗುವ ಧೈರ್ಯ ಈ ಮಹಿಳೆಯರು ಮಾಡುತ್ತಾರೆಯೆ ? ಹಿಂದೂಗಳ ಭಾವನೆಯನ್ನು ನೋಯಿಸುವ ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !