Karnataka Temple Tax Bill : ದೇವಸ್ಥಾನಗಳ ಮೇಲೆ ಶೇ. ೧೦ರಷ್ಟು ಕರ ಹೇರುವ ವಿಧೇಯಕ ಪಕ್ಷಪಾತ’ದಿಂದ ಕೂಡಿರುವುದಾಗಿ` ಹೇಳುತ್ತ ಸರಕಾರಕ್ಕೆ ಹಿಂದಕ್ಕೆ ಕಳುಹಿಸಿದ ರಾಜ್ಯಪಾಲ ಗೆಹ್ಲೋಟ್ !

ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರಕ್ಕೆ ಛಿಮಾರಿ !

ಬೆಂಗಳೂರು – ಕರ್ನಾಟಕದ ರಾಜ್ಯಪಾಲರಾದ ಥಾವರಚಂದ ಗೆಹಲೋಟ ರವರು ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರದ ದೇವಸ್ಥಾನಗಳ ಮೇಲೆ ಕರವನ್ನು ಹೊರಿಸುವ ವಿಧೇಯಕವನ್ನು ಸರಕಾರಕ್ಕೆ ಹಿಂದೆ ಕಳುಹಿಸಿದ್ದಾರೆ. ರಾಜ್ಯಪಾಲರು `ಈ ಕಾನೂನಿನಲ್ಲಿರುವ ಅನೇಕ ಕಲಮುಗಳು ಪಕ್ಷಪಾತದಿಂದ ಕೂಡಿವೆ’ ಎಂದು ಹೇಳುತ್ತ ಈ ವಿಧೇಯಕವನ್ನು ಸರಕಾರಕ್ಕೆ ಹಿಂದೆ ಕಳುಹಿಸಿದ್ದಾರೆ. ರಾಜ್ಯಪಾಲರು ಹೆಚ್ಚಿನ ಸ್ಪಷ್ಟಿಕರಣದೊಂದಿಗೆ ವಿಧೇಯಕವನ್ನು ಪುನಃ ಸಾದರಪಡಿಸಲು ಸೂಚಿಸಿದ್ದಾರೆ.

೧. ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿನ ದೇವಸ್ಥಾನಗಳ ಮೇಲೆ ಕರವನ್ನು ಜ್ಯಾರಿಗೊಳಿಸಲು `ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ಚಾರಿಟೇಬಲ್ ಎಂಡೋಮೆಂಟ್ಸ (ಸುಧಾರಣಾ) ವಿಧೇಯಕ ೨೦೨೪’ನ್ನು ವಿಧಾನಸಭೆಯಲ್ಲಿ ಸಮ್ಮತಿ ನೀಡಿತ್ತು. ಅದನ್ನು ವಿಧಾನ ಪರಿಷತ್ತಿನಲ್ಲಿ ತಿರಸ್ಕರಿಸಲಾದ ನಂತರ ಪುನಃ ವಿಧಾನ ಸಭೆಯಲ್ಲಿ ಸಮ್ಮತಿಗೊಳಿಸಿ ವಿಧಾನ ಪರಿಷತ್ತಿನಲ್ಲಿಯೂ ಸಮ್ಮತಿಗೊಳಿಸಲಾಯಿತು. ಅನಂತರ ಅದನ್ನು ರಾಜ್ಯಪಾಲರ ಹಸ್ತಾಕ್ಷರಕ್ಕಾಗಿ ಕಳುಹಿಸಲಾಗಿತ್ತು.

೨. ಈ ವಿಧೇಯಕರ ಅನ್ವಯ ರಾಜ್ಯದಲ್ಲಿನ ವರ್ಷಕ್ಕೆ ೧೦ ಲಕ್ಷದಿಂದ ೧ ಕೋಟಿ ರೂಪಾಯಿಗಳಷ್ಟು ಉತ್ಪನ್ನವಿರುವ ದೇವಟ್ಷಣಗಳಿಂದ ಸರಕಾರವು ಶೇ. ೫ ರಷ್ಟು ಕರ ವಸೂಲಿ ಮಾಡಲಿದೆ. ವರ್ಷಕ್ಕೆ ೧ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಉತ್ಪನ್ನವಿರುವ ದೇವಸ್ಥಾನಗಳಿಂದ ಸರಕಾರವು ಶೇ. ೧೦ರಷ್ಟು ಕರ ವಸೂಲಿ ಮಾಡಲಿದೆ. ಹಾಗೆಯೆ ಈ ಹಣವನ್ನು `ಸಿ’ ವರ್ಗದಲ್ಲಿನ ದೇವಸ್ಥಾನಗಳಿಗಾಗಿ ಬಳಸಲಾಗುವುದು. ದೇವಸ್ಥಾನದ ಕಾರ್ಯಕಾರಿ ಸಮಿತಿಯ ೪ ಸದಸ್ಯರ ಪೈಕಿ ಒಬ್ಬ ಸದಸ್ಯನು ವಿಶ್ವಕರ್ಮ ಸಮುದಾಯದವನಾಗಿರಬೇಕು. ಧಾರ್ಮಿಕ ದತ್ತಿ ವಿಭಾಗದ ಅಧೀನದಲ್ಲಿರುವ ದೇವಸ್ಥಾನಗಳ ಭೂಮಿಯಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲು ಕಾರ್ಯ ಸಮಿತಿಯನ್ನು ನೇಮಿಸುವ ಪ್ರಸ್ತಾಪವಿದೆ.

ಸುಧಾರಿತ ಕಾನೂನನ್ನು ಹಿಂದಕ್ಕೆ ಕಳುಹಿಸುವ ರಾಜ್ಯಪಾಲರ ನಿರ್ಣಯವನ್ನು ಸ್ವಾಗತಿಸುತ್ತೇವೆ ! – ಕರ್ನಾಟಕ ದೇವಸ್ಥಾನ ಮಹಾಸಂಘ

ಇದು ಕರ್ನಾಟಕ ದೇವಸ್ಥಾನ ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ದೊರೆತಿರುವ ವಿಜಯವಾಗಿದೆ. ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಕಾನೂನನ್ನು ಖಂಡಿಸಿ ಸಂಪೂರ್ಣ ರಾಜ್ಯದಲ್ಲಿ ೧೫ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಆಂದೋಲನಗಳನ್ನು ಮಾಡಿ ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು. ಮಾನ್ಯ ರಾಜ್ಯಪಾಲರಾದ ಥಾವರಚಂದ ಗೆಹಲೋಟರವರ ಈ ಮಹತ್ವಪೂರ್ಣ ನಿರ್ಣಯವನ್ನು ಕರ್ನಾಟಕ ದೇವಸ್ಥಾನ ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಸ್ವಾಗತಿಸುತ್ತದೆ. ಹಾಗೂ ಹಿಂದೂ ದೇವಸ್ಥಾನಗಳ ರಕ್ಷಣೆಗಾಗಿ ಮಹಾಸಂಘವು ಇದೆ ರೀತಿಯಲ್ಲಿ ಕಟಿಬದ್ಧವಾಗಿರುವುದು, ಎಂದು ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡರವರು ಹೇಳಿದ್ದಾರೆ.

ಇತರ ಧಾರ್ಮಿಕ ಸಂಸ್ಥೆಗಳನ್ನು ಸೇರಿಸಲಾಗುವುದೇ ?

ಹಿಂದೂ ಧಾರ್ಮಿಕ ಸಂಸ್ಥೆಯೊಂದಿಗೆ ಸಂಬಂಧಿಸಲಾದ ಕಾನೂನಿನಲ್ಲಿ ಮಾಡಲಾಗುವ ಸುಧಾರಣೆಯನ್ನು ಇತರ ಧಾರ್ಮಿಕ ಸಂಸ್ಥೆಗಳಲ್ಲಿಯೂ ಸೇರಿಸಿ ಕಾನೂನನ್ನು ರಚಿಸುವ ವಿಚಾರವು ರಾಜ್ಯ ಸರಕಾರಕ್ಕೆ ಇದೆಯೇ ? ಎಂಬ ಪ್ರಶ್ನೆಯನ್ನು ರಾಜ್ಯಪಾಲ ಗೆಹಲೋಟ ಅವರು ಕೇಳಿದ್ದಾರೆ.

ರಾಜ್ಯಪಾಲರು ಕೇಳಿರುವ ವಿಷಯಗಳ ಸಂದರ್ಭದಲ್ಲಿ ಸ್ಪಷ್ಟಿಕರಣ ನೀಡಿ ವಿಧೇಯಕದ ಸ್ವೀಕೃತಿಗಾಗಿ ಪುನಃ ಕಳುಹಿಸಬೇಕು ಎಂದು ರಾಜ್ಯ ಸರಕಾರದ ವರಿಷ್ಠ ಅಧಿಕಾರಿಗಳಿಗೆ ಹೇಳಲಾಗಿದೆ.