ಐರ್ಲ್ಯಾಂಡಿನ ಭಾರತೀಯ ಮೂಲದ ಪ್ರಧಾನಮಂತ್ರಿ ಲಿಯೋ ವರಾಡಕರ ರಾಜೀನಾಮೆ

ವೈಯಕ್ತಿಕ ಮತ್ತು ರಾಜಕೀಯ ಕಾರಣದಿಂದ ರಾಜೀನಾಮೆ !

ಡಬ್ಲಿನ್ (ಐರ್ಲ್ಯಾಂಡ್) – ಐರ್ಲ್ಯಾಂಡಿನ ಭಾರತೀಯ ಮೂಲದ ಪ್ರಧಾನಮಂತ್ರಿ ಲಿಯೋ ವರಾಡಕರ ಇವರು ತಮ್ಮ ಸ್ಥಾನಕ್ಕೆ ಹಾಗೂ ಪಕ್ಷದ ನಾಯಕ ಸ್ಥಾನಕ್ಕೆ ಕೂಡ ರಾಜೀನಾಮೆ ನೀಡಿದ್ದಾರೆ. ಅವರು, ನನ್ನ ಸ್ಥಾನ ಬಿಡಲು ವೈಯಕ್ತಿಕ ಹಾಗೂ ರಾಜಕೀಯ ಎರಡೂ ಕಾರಣಗಳು ಇವೆ. ದೇಶದಲ್ಲಿನ ಮೈತ್ರಿ ಸರಕಾರಕ್ಕೆ ಇನ್ನೋರ್ವ ನಾಯಕನ ನೇತೃತ್ವದಲ್ಲಿ ಮುಂದೆ ಹೋಗಲು ಒಳ್ಳೆಯ ಅವಕಾಶ ಇದೆ ಎಂದು ನನಗೆ ಅನಿಸುತ್ತದೆ, ಎಂದು ಹೇಳಿದರು.

(ಸೌಜನ್ಯ – Sky News)

೪೩ ವರ್ಷದ ಲಿಯೋ ವರಾಡಕರ ಇವರು ಐರ್ಲ್ಯಾಂಡಿನ ಯುವ ಪ್ರಧಾನಮಂತ್ರಿಯಾಗಿದ್ದರು. ಅವರು ಎರಡನೆಯ ಬಾರಿಗೆ ಪ್ರಧಾನಿಯಾಗಿದ್ದರು. ಲಿಯೋ ವರಾಡಕರ ಇವರ ತಂದೆ ಅಶೋಕ ವರಾಡಕರ ಇವರು ೧೯೬೦ ರ ದಶಕದಲ್ಲಿ ಬ್ರಿಟನಿಗೆ ಹೋಗಿದ್ದರು. ಅವರು ಮೂಲತಃ ಮಹಾರಾಷ್ಟ್ರದಲ್ಲಿನ ಸಿಂಧುದುರ್ಗ ಜಿಲ್ಲೆಯಲ್ಲಿನ ವರಾಡ ಗ್ರಾಮದವರಾಗಿದ್ದರು. ಲಿಯೋ ಇವರ ಜನನ ೧೯೭೯ ರಲ್ಲಿ ಡಬ್ಲಿನ್ ನಲ್ಲಿ ಆಗಿದೆ. ಅವರ ತಾಯಿ ಐರ್ಲ್ಯಾಂಡಿನವರಾಗಿದ್ದಾರೆ.