’ಇಂಡಿ’ ಮೈತ್ರಿಯಿಂದ ಹಿಂದೂಗಳನ್ನೇ ಗುರಿ ಮಾಡಲಾಗುತ್ತಿದೆ ! – ಪ್ರಧಾನಿ ಮೋದಿ

  • ಸೇಲಂ (ತಮಿಳುನಾಡು) ಸಭೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ವಾಗ್ದಾಳಿ !

  • ರಾಹುಲ್ ಗಾಂಧಿಯ ‘ಹಿಂದೂ ಧರ್ಮದ ಶಕ್ತಿಯನ್ನು ನಾವು ನಾಶ ಮಾಡುತ್ತೇವೆ’ ಎಂಬ ಹೇಳಿಕೆಗೆ ಪ್ರಧಾನಿಯಿಂದ ತೀವ್ರ ಟೀಕೆ !

ಸೇಲಂ (ತಮಿಳುನಾಡು) – ಡಿಎಂಕೆ (ದ್ರಾವಿಡ್ ಮುನ್ನೇತ್ರ ಕಳಘಂ ಅಂದರೆ ದ್ರಾವಿಡ ಪ್ರಗತಿ ಸಂಘ) ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಭ್ರಷ್ಟಾಚಾರ ಮತ್ತು ಮನೆತನವು ಅವರಲ್ಲಿನ ಸಮಾನತೆ ಇದೆ. ಮುಂಬಯಿನಲ್ಲಿ ’ಇಂಡಿ’ ಮೈತ್ರಿಕೂಟ ನಡೆಸಿದ ಸಭೆಯಲ್ಲಿ ಅವರ ಹಿಂದೂ ವಿರೋಧಿ ಯೋಜನೆ ಬಹಿರಂಗವಾಗಿದೆ. ’ನಾವು ಹಿಂದೂ ಧರ್ಮದ ಶಕ್ತಿಯನ್ನು ನಾಶಪಡಿಸುತ್ತೇವೆ’, ಎಂದು ರಾಹುಲ ಗಾಂಧಿ ಬಹಿರಂಗವಾಗಿ ಹೇಳಿದರು. ಹಿಂದೂ ಧರ್ಮದಲ್ಲಿ ಶಕ್ತಿ ಏನೆಂದು ತಮಿಳುನಾಡಿನ ಎಲ್ಲರಿಗೂ ತಿಳಿದಿದೆ. ತಮಿಳುನಾಡಿನಲ್ಲಿ ದೇವತೆಗಳ ಅವತಾರಗಳನ್ನು ಶಕ್ತಿಯ ರೂಪಗಳೆಂದು ಪರಿಗಣಿಸಲಾಗುತ್ತದೆ. ಕಂಚಿ ಕಾಮಾಕ್ಷಿ ಅಮ್ಮ, ಮಧುರೈ ಮೀನಾಕ್ಷಿ ಅಮ್ಮ, ಸಮಯಪುರಂ ಮಾರಿಯಮ್ಮ ದೇವಿಗಳ ರಾಜ್ಯದಲ್ಲಿ ದೊಡ್ಡ ದೇವಾಲಯಗಳಿವೆ. ಇದಲ್ಲದೇ ಹಿಂದೂಗಳು ’ಮಾತೃ ಶಕ್ತಿ’, ’ನಾರಿ ಶಕ್ತಿ’ಗಳಲ್ಲಿಯೂ ನಂಬುತ್ತಾರೆ. ಈ ಶಕ್ತಿಯನ್ನು ನಾಶಪಡಿಸುವ ಭಾಷೆಯನ್ನು ಅವರು ಮಾಡುತ್ತಿದ್ದಾರೆ; ಆದರೆ ಈ ಪ್ರಯತ್ನದಲ್ಲಿ ಅವರು ರಾಜಕೀಯವಾಗಿ ನಾಶವಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಕಟುವಾಗಿ ಟೀಕಿಸಿದರು. ಇಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚೆಗೆ ಮುಂಬಯಿನಲ್ಲಿ ನಡೆದ ಸಭೆಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪರಿಕಲ್ಪನೆ ಇದೆ ಎಂದು ಹೇಳಿದ್ದರು. ನಾವೂ ಒಂದೇ ಶಕ್ತಿಯಲ್ಲಿ ಹೋರಾಟ ನಡೆಸುತ್ತಿದ್ದೇವೆ’ ಈ ಮೂಲಕ ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡಿದ ಅವರು, ಮತ ಯಂತ್ರಗಳ ಮೇಲೆ ಸರಕಾರದ ಹಿಡಿತವಿದೆ. ಹಿಂದೂ ಧರ್ಮದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು,

(ಸೌಜನ್ಯ – Narendra Modi)

೧. ’ಇಂಡಿ’ಯಲ್ಲಿನ ಘಟಕ ಪಕ್ಷಗಳ ನಾಯಕರು, ವಿಶೇಷವಾಗಿ ಕಾಂಗ್ರೆಸ್ ಮತ್ತು ಡಿಎಂಕೆ ನಿರಂತರವಾಗಿ ಮತ್ತು ಉದ್ದೇಶಪೂರ್ವಕವಾಗಿ ಹಿಂದೂಗಳ ನಂಬಿಕೆಗಳನ್ನು ಅವಮಾನಿಸುತ್ತಿದ್ದಾರೆ. ಇತರ ಧರ್ಮಗಳ ಶ್ರದ್ಧೆಗಳ ವಿರುದ್ಧ ಮಾತನಾಡುವ ಧೈರ್ಯ ಅವರಿಗಿಲ್ಲ.

೨. ಈ ಮಂಡಳಿಯು ಹಿಂದೂಗಳ ವಿರುದ್ಧ ಅತ್ಯಂತ ವಿಚಾರಪೂರ್ವಕ ಮತ್ತು ಯೋಜಿತ ಹೇಳಿಕೆಗಳನ್ನು ನೀಡುತ್ತವೆ.

೩. ಕಾಂಗ್ರೆಸ್ ಮತ್ತು ಡಿಎಂಕೆ ತೀವ್ರ ಭ್ರಷ್ಟಾಚಾರ ಮತ್ತು ಒಂದೇ ಕುಟುಂಬ ಆಡಳಿತಕ್ಕೆ ಬರುವುದು ಹೆಸರುವಾಸಿಯಾಗಿದೆ.

ಸಂಪಾದಕೀಯ ನಿಲುವು

ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ ಮುಂತಾದ ರಾಜಕೀಯ ಪಕ್ಷಗಳು ನಿರಂತರವಾಗಿ ಹಿಂದೂ ಧರ್ಮದ ಟೀಕೆಗಳಿಂದ ಹಿಂದೂಗಳಿಗೆ ’ನಮ್ಮ ಶತ್ರು ಯಾರು?’ ಎಂದು ಕಲಿಯಲು ಸಿಕ್ಕಿದೆ. ಇದರಿಂದ ಒಂದು ರೀತಿಯಲ್ಲಿ ಲಾಭವಾಯಿತು. ಇದರಿಂದಾಗಿ ಈ ವರ್ಷ ಚುನಾವಣೆಯಲ್ಲೂ ಹಿಂದೂಗಳು ಅವರನ್ನೆಲ್ಲ ಮನೆಯಲ್ಲೇ ಇರುವಂತೆ ಮಾಡುತ್ತಾರೆ ಎಂಬುದು ನೆನಪಿರಲಿ !