‘ನಮ್ಮ ಸರಕಾರ ಬಂದ ನಂತರ ಜಮ್ಮು ಕಾಶ್ಮೀರದಲ್ಲಿನ ಮಹಾರಾಷ್ಟ್ರ ಭವನ ಮುಚ್ಚುತ್ತಾರಂತೆ !

ಓಮರ್ ಅಬ್ದುಲ್ಲ ಇವರ ಬೆದರಿಕೆ !

ಶ್ರೀನಗರ (ಜಮ್ಮು ಕಾಶ್ಮೀರ) – ಮಹಾರಾಷ್ಟ್ರ ಸರಕಾರದಿಂದ ಜಮ್ಮು ಕಾಶ್ಮೀರದಲ್ಲಿ ‘ಮಹಾರಾಷ್ಟ್ರ ಭವನ’ ಕಟ್ಟಲು ಅನುಮತಿ ದೊರೆತಿದೆ. ಕಾಶ್ಮೀರದ ಬಡಗಾಮದಲ್ಲಿ ಎರಡುವರೆ ಎಕರೆ ಭೂಮಿಯಲ್ಲಿ ಈ ಭವನ ಕಟ್ಟುವರು. ಶ್ರೀನಗರ ವಿಮಾನ ನಿಲ್ದಾಣದ ಹತ್ತಿರ ಈ ಜಾಗ ಇದೆ. ಇಲ್ಲಿ ರಾಜ್ಯದ ಭವನ ಕಟ್ಟುವ ಮಹಾರಾಷ್ಟ್ರ ಇದು ಮೊದಲನೆಯ ರಾಜ್ಯವಾಗಲಿದೆ. ಮಹಾರಾಷ್ಟ್ರ ಭವನಕ್ಕೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾಂಫರೆನ್ಸ್ ನ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಇವರು ವಿರೋಧಿಸಿದ್ದಾರೆ. ‘ಬರುವ ಅಕ್ಟೋಬರ್ ತಿಂಗಳಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಭವನ ಮುಚ್ಚುವೆವು’ ಎಂದು ಅವರು ಬೆದರಿಕೆ ನೀಡಿದರು. ‘ಮಹಾರಾಷ್ಟ್ರ ಭವನದಿಂದ ಸ್ಥಳೀಯ ಹೋಟೆಲ್ ಉದ್ಯಮಿಗಳ ಉದ್ಯೋಗ ಕಸಿದುಕೊಳ್ಳಲಾಗುವುದು, ಎಂದು ಅವರು ದಾವೆ ಮಾಡಿದ್ದಾರೆ. ಕುಲಗಾಮ ಇಲ್ಲಿ ನಡೆದಿರುವ ಬಹಿರಂಗ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಓಮರ್ ಅಬ್ದುಲ್ಲ ಇವರು, ಮಹಾರಾಷ್ಟ್ರ ಭವನದ ಉಪಯೋಗ ಪ್ರವಾಸೋದ್ಯಮಕ್ಕಾಗಿ ಮಾಡಲಾಗುವುದು. ಆ ಪ್ರವಾಸಿಗರು ಈಗ ರಾಜ್ಯದಲ್ಲಿನ ಹೋಟೆಲ್‌ಗಳಲ್ಲಿ ವಾಸಿಸುತ್ತಾರೆ. ಸ್ಥಳೀಯ ಹೋಟೆಲ್ ಉದ್ಯೋಗದಿಂದ ಅವರ ದುಡಿಮೆ ಕಸಿದುಕೊಳ್ಳಲಾಗುವುದು ಎಂದು ಹೇಳಿದರು.

ಉದ್ದವ ಬಾಳಸಾಹೇಬ ಠಾಕ್ರೆ ಗುಂಪಿಗೆ ಇದು ಒಪ್ಪಿಗೆ ಇದೆಯೇ ? – ಮುಖ್ಯಮಂತ್ರಿ ಏಕನಾಥ ಶಿಂದೆ ಇವರ ಪ್ರಶ್ನೆ

ಮುಖ್ಯಮಂತ್ರಿ ಏಕನಾಥ ಶಿಂಧೆ ಇವರು, ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ನಂತರ ಆ ಸ್ಥಳದಲ್ಲಿ ಭೂಮಿ ಖರೀದಿ ಮತ್ತು ಪ್ರವಾಸಿಗರ ಸೌಲಭ್ಯ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಓಮರ್ ಅಬ್ದುಲ್ಲ ಇವರ ಹೇಳಿಕೆಯ ಬಗ್ಗೆ ಮುಖ್ಯಮಂತ್ರಿ ಶಿಂದೆ ಇವರು, ಭಕ್ತರು ಅಮರನಾಥ ಯಾತ್ರೆಗೆ ಹೋಗುತ್ತಾರೆ ಆ ಯಾತ್ರಿಕರಿಗಾಗಿ ನಾನು ಸ್ವತಃ ಜಮ್ಮು ಕಾಶ್ಮೀರದ ರಾಜ್ಯಪಾಲರ ಬಳಿ ಮಹಾರಾಷ್ಟ್ರ ಭವನ ಕಟ್ಟಲು ವಿನಂತಿಸಿದ್ದೇನೆ. ಅವರು ಈ ಬೇಡಿಕೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು. ಓಮರ್ ಅಬ್ದುಲ್ಲಾ ಇವರು, ‘ನಾನು ಮಹಾರಾಷ್ಟ್ರ ಭವನ ಆಗಲು ಬಿಡುವುದಿಲ್ಲ.’ ಎಂದು ಹೇಳುತ್ತಾರೆ, ಈ ದ್ವೇಷ ಉದ್ದವ ಬಾಳಾಸಾಹೇಬ ಠಾಕ್ರೆ ಇವರಿಗೆ ಒಪ್ಪಿಗೆ ಇದೆಯೇ ? ಯಾರು ‘ಮಹಾರಾಷ್ಟ್ರ ಭವನ ಆಗಲು ಬಿಡುವುದಿಲ್ಲ’ ಎಂದು ಮಾತನಾಡುತ್ತಾರೆ, ಅವರ ಹೆಗಲ ಮೇಲೆ ಕೈ ಹಾಕಿ ಯಾವ ಗುಂಪು ಕೂರುತ್ತದೆ, ಇದು ಎಷ್ಟು ನಾಚಿಕೆಗೇಡು ಮತ್ತು ದುರಾದೃಷ್ಟಕರವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಜಮ್ಮು ಕಾಶ್ಮೀರ್ ಎಂದರೆ ಅಬ್ದುಲ್ಲಾ ಕುಟುಂಬದ ಆಸ್ತಿ ಅಲ್ಲ, ಎಂಬುದು ಅವರು ಗಮನದಲ್ಲಿಟ್ಟುಕೊಳ್ಳಬೇಕು. ಭವಿಷ್ಯದಲ್ಲಿ ಭಾರತದಲ್ಲಿನ ಜನರೇ ಅಬ್ದುಲ್ಲ ಕುಟುಂಬವನ್ನು ಭಾರತದಿಂದ ಹೊರಗೆ ದೂಡುವರು, ಅಂತಹ ಪರಿಸ್ಥಿತಿ ಬಂದರೆ ಆಶ್ಚರ್ಯ ಅನಿಸಬಾರದು !

ಶಿವಸೇನೆಯ ಪ್ರಮುಖ ಬಾಳಸಾಹೇಬ ಠಾಕ್ರೆ ಇಂದು ಇದ್ದಿದ್ದರೆ, ಆಗ ಅವರು ‘ಅಬ್ದುಲ್ಲ ಕುಟುಂಬದವರಿಗೆ ಮಹಾರಾಷ್ಟ್ರದಲ್ಲಿ ಮತ್ತು ದೇಶದಲ್ಲಿನ ಇತರ ಸ್ಥಳಗಳಲ್ಲಿ ಕಾಲು ಇಡಲು ಬಿಡುತ್ತಿರಲಿಲ್ಲ’ ಎಂದು ಎಚ್ಚರಿಕೆ ನೀಡುತ್ತಿದ್ದರು !