ವಾರಣಾಸಿ – ಅಲಹಾಬಾದ್ ಉಚ್ಚ ನ್ಯಾಯಾಲಯ ದೇವಸ್ಥಾನದಲ್ಲಿ ಧಾರ್ಮಿಕ ಪ್ರವಚನ ನಡೆಯುತ್ತಿರುವಾಗ ಭಾರತ ವಿರೋಧಿ ಘೋಷಣೆ ನೀಡಿರುವ ಪ್ರಕರಣದಲ್ಲಿ ಮೂವರ ವಿರುದ್ಧದ ಆರೋಪ ಪತ್ರ ರದ್ದುಪಡಿಸಲು ನಿರಾಕರಿಸಿದೆ. ನ್ಯಾಯಮೂರ್ತಿ ಸುಭಾಷ ವಿದ್ಯಾರ್ಥಿ ಇವರ ವಿಭಾಗೀಯ ಪೀಠವು ಆರೋಪಿಗಳಿಗೆ ಕ್ಷಮಿಸುವುದನ್ನು ನಿರಾಕರಿಸುತ್ತಾ, ಇನ್ನೊಂದು ದೇಶವನ್ನು ಹಿಗಳುವುದು ಮತ್ತು ನಮ್ಮ ದೇಶದ ವಿರುದ್ಧ ಘೋಷಣೆ ನೀಡುವುದು ಹಾಗೂ ಧಾರ್ಮಿಕ ಪ್ರವಚನಕ್ಕೆ ಉಪಸ್ಥಿತ ಇರುವ ಜನರಿಗೆ ಅವಾಚ್ಯಪದಗಳಿಂದ ಬೈದು ಅವರನ್ನು ಬೆದರಿಸುವುದು ಯೋಗ್ಯವಲ್ಲ ಎಂದು ಹೇಳಿದೆ.
ಪೈಜಾನ್ ಅಹಮದ್, ಇಂದ್ರಿಸಿ ಫೈಜಾನ್, ಶಂಶಾದ್ ಅಹಮ್ಮದ್ ಮತ್ತು ಇತರ ಆರೋಪಿಗಳು ಜುಲೈ ೨೦೧೭ ರಂದು ಧಾರ್ಮಿಕ ಪ್ರವಚನ ನಡೆಯುತ್ತಿರುವಾಗ ದೇವಸ್ಥಾನದ ಪರಿಸರದಲ್ಲಿ ನುಗ್ಗಿ ಪಾಕಿಸ್ತಾನ ಜೈಕಾರ ಮಾಡುತ್ತಾ ಭಾರತದ ವಿರೋಧದಲ್ಲಿ ಘೋಷಣೆ ಕೂಗಲು ಆರಂಭಿಸಿದ್ದರು. ಅಲ್ಲಿ ಉಪಸ್ಥಿತ ಇರುವ ಜನರಿಗೆ ಅವರು ಬೆದರಿಸಿದರು. ಈ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ ೧೫೩ ಮತ್ತು ೫೦೬ ರ ಅಡಿಯಲ್ಲಿ ಆರೋಪ ಪತ್ರ ದಾಖಲಿಸಲಾಗಿತ್ತು. ಆರೋಪಿಗಳನ್ನು ತಕ್ಷಣ ಬಂಧಿಸಲಾಗಿತ್ತು.