ಮುಂಬಯಿ – ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಇಬ್ಬರೂ ವಿದೇಶಿ ಮಹಿಳ ಕಳ್ಳ ಸಾಗಾಣಿಕೆದಾರರನ್ನು ಬಂಧಿಸಿ ಅವರಿಂದ ೯.೮೯೨ ಕೆಜಿ ಕೋಕೆನ್ ವಶಪಡಿಸಿಳ್ಳಲಾಗಿದೆ. ಅದರ ಬೆಲೆ ೧೦೦ ಕೋಟಿ ರೂಪಾಯಿಗಿಂತಲೂ ಹೆಚ್ಚಿದೆ. ನಂತರ ದೆಹಲಿಯಿಂದ ಓರ್ವ ನೈಜೇರಿಯನ್ ಮಾದಕ ಪದಾರ್ಥ ವ್ಯಾಪಾರಿಯನ್ನು ಕೂಡ ಬಂಧಿಸಲಾಗಿದೆ. ಇವರಿಬ್ಬರು ಈ ಪದಾರ್ಥಗಳು ದೆಹಲಿ ಮತ್ತು ದೇಶದಲ್ಲಿನ ಇತರ ಭಾಗದಲ್ಲಿ ತಲುಪಿಸುವ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಬಂಧಿತ ಮಹಿಳೆ ಇಂಡೋನೇಷಿಯಾ ಮತ್ತು ಥೈಲ್ಯಾಂಡ್ ದೇಶದ ನಾಗರಿಕರಾಗಿದ್ದಾರೆ. ಅವರು ಇಥಿಯೋಪಿಯಾದಲ್ಲಿನ ಅದೀಸ್ ಅಬಾಬಾದಿಂದ ಭಾರತಕ್ಕೆ ಬರುತ್ತಿದ್ದರು.
ಬಂಧಿಸಿರುವವರಲ್ಲಿ ನೈಜೀರಿಯಾದಲ್ಲಿನ ಮಾದಕ ಪದಾರ್ಥದ ಮಾರಾಟಗಾರ ಮತ್ತು ಭಾರತೀಯ ಅಧಿಕಾರಿಗಳ ಜೊತೆಗೆ ತಳ್ಳಾಟ ನಡೆಸಿದನು. (ಇಂತಹ ಉದ್ಧಟತನ ಮಾಡುವವರ ವಿರುದ್ಧ ಸರಕಾರವು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ ! – ಸಂಪಾದಕರು) ಇದರಲ್ಲಿ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯವಾಗಿದೆ. ಬಂಧಿತ ಮೂವರ ಮೇಲೆ ದೂರು ದಾಖಲಿಸಲಾಗಿದೆ. ಕಳ್ಳ ಸಾಗಾಣಿಕೆಯ ಜಾಲ ಇಥಿಯೋಪಿಯಾ, ಶ್ರೀಲಂಕಾ, ನೈಜೀರಿಯಾ ಮತ್ತು ಭಾರತದಲ್ಲಿ ಕಾರ್ಯನಿರತವಾಗಿರುವುದು ತಿಳಿದು ಬಂದಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆಯ ಜಾಲ ನಾಶ ಮಾಡಲು ಸರಕಾರವು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ ! |