ರೋಹಿಂಗ್ಯಾ ನುಸುಳುಕೊರರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ ! – ಕೇಂದ್ರ

ಸರ್ವೋಚ್ಚ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ !

ನವ ದೆಹಲಿ – ಭಾರತದಲ್ಲಿ ಅಕ್ರಮವಾಗಿ ವಾಸಿಸುವ ರೋಹಿಂಗ್ಯಾ ಮುಸಲ್ಮಾನರಿಗೆ ಇಲ್ಲಿ ನೆಲೆಸಲು ಯಾವುದೇ ಮೂಲಭೂತ ಹಕ್ಕಿಲ್ಲ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ. ಇಷ್ಟೇ ಅಲ್ಲದೆ, ‘ಸರ್ವೋಚ್ಚ ನ್ಯಾಯಾಲಯದ ಅಧಿಕಾರಕ್ಕೂ ಮಿತಿ ಇದೆ ಮತ್ತು ಅದು ಮಿತಿ ದಾಟಿ ಸಂಸತ್ತಿನ ಅಧಿಕಾರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಅಕ್ರಮವಾಗಿ ಭಾರತದಲ್ಲಿ ಪ್ರವೇಶಿಸುವವರಿಗೆ ನಿರಾಶ್ರಿತದ ಸ್ಥಾನ ನೀಡುವುದಕ್ಕಾಗಿ ಸ್ವತಂತ್ರ ಶ್ರೇಣಿ ನಿರ್ಮಾಣ ಮಾಡುವ ಅಧಿಕಾರ ನ್ಯಾಯಪಾಲಿಕೆಗೆ ಇಲ್ಲ’, ಎಂದು ಕೇಂದ್ರ ಸರಕಾರ ಹೇಳಿದೆ.

೧. ವಿಶ್ವಸಂಸ್ಥೆ ನೀಡಿರುವ ನಿರಾಶ್ರಿತ ಕಾರ್ಡಿಗೆ ಭಾರತದಲ್ಲಿ ಮಾನ್ಯತೆ ಇಲ್ಲ !

ಸರ್ವೋಚ್ಚ ನ್ಯಾಯಾಲಯದ ನಿರ್ಣಯಕ್ಕೆ ಆಧಾರ ನೀಡುತ್ತಾ ಸರಕಾರವು ಪ್ರತಿಜ್ಞಾಪತ್ರದಲ್ಲಿ ಸರ್ವೋಚ್ಚ ನ್ಯಾಯಾಲಯದ ಅನೇಕ ನಿರ್ಣಯಗಳ ಉಲ್ಲೇಖಿಸಿದೆ. ಕೇಂದ್ರವು, ಸಂವಿಧಾನದಲ್ಲಿನ ಕಲಂ ೨೧ ಪ್ರಕಾರ ವಿದೇಶಿ ವ್ಯಕ್ತಿಗೆ ಬಾಳುವ ಮತ್ತು ಸ್ವಾತಂತ್ರ್ಯದ ಹಕ್ಕಿದೆ. ಅವನಿಗೆ ದೇಶದಲ್ಲಿ ವಾಸಿಸುವ ಮತ್ತು ಸ್ಥಳಿಯವಾಗುವ ಹಕ್ಕಿಲ್ಲ. ಈ ಅಧಿಕಾರ ಕೇವಲ ಭಾರತೀಯ ನಾಗರಿಕರಿಗೆ ಇದೆ. ವಿಶ್ವಸಂಸ್ಥೆಯ ಉಚ್ಚಾಯುಕ್ತರು ಕೆಲವು ನಿರಾಶ್ರಿತ ಜನರಿಗೆ ಪೌರತ್ವ ಸಿಗುವುದಕ್ಕಾಗಿ ‘ನಿರಾಶ್ರಿತ ಕಾರ್ಡ’ ನೀಡಿದೆ; ಆದರೆ ಭಾರತದಲ್ಲಿ ಅದಕ್ಕೆ ಮಾನ್ಯತೆ ಇಲ್ಲ. ‘ಈ ಕಾರ್ಡಿನ ಆಧಾರದಲ್ಲಿ ಪೌರತ್ವ ಸಿಗುವುದು’ ಈ ವಿಶ್ವಾಸದಿಂದ ರೋಹಿಂಗ್ಯಾ ಮುಸಲ್ಮಾನರು ಈ ಕಾರ್ಡು ಪಡೆದಿದ್ದಾರೆ.

೨. ರೋಹಿಂಗ್ಯಾಗಳಿಗೆ ವಾಸಿಸಲು ಅನುಮತಿ ನೀಡುವುದು ದೇಶದ ಸುರಕ್ಷತೆಗೆ ಅಪಾಯ !

ಸರಕಾರವು, ಭಾರತಕ್ಕೆ ಮೊದಲೇ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶದ ಸುಳುಕೋರರ ಗಂಭೀರ ಸಮಸ್ಯೆ ಕಾಡುತ್ತಿದೆ. ಬಾಂಗ್ಲಾದೇಶಿ ನೂಸುಳಕೋರರಿಂದ ಕೆಲವು ಗಡಿಯ ಭಾಗದಲ್ಲಿನ ರಾಜ್ಯಗಳಲ್ಲಿ (ಆಸ್ಸಾಂ ಮತ್ತು ಬಂಗಾಳ) ಜನಸಂಖ್ಯೆಯ ಸಮೀಕರಣ ಬದಲಾಗಿದೆ. ರೋಹಿಂಗ್ಯಾಗಳು ಭಾರತದಲ್ಲಿ ಅಕ್ರಮವಾಗಿ ಸ್ಥಳಾಂತರವಾಗುವುದು ಮತ್ತು ಅವರಿಗೆ ಭಾರತದಲ್ಲಿ ವಾಸಿಸುವ ಅನುಮತಿ ನೀಡುವುದು ಇದು ಕೇವಲ ಕಾನೂನಬಾಹಿರ ಅಲ್ಲದೆ, ಸುರಕ್ಷತೆಗೂ ಕೂಡ ಅಪಾಯಕಾರಿ ಆಗಿದೆ. ಅವರು ಮಾನವ ಕಳ್ಳ ಸಾಗಾಣಿಕೆ ಸಹಿತ ದೇಶಾದ್ಯಂತ ಗಂಭೀರ ಅಪರಾಧಿ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದಾರೆ ಮತ್ತು ಆಂತರಿಕ ಮತ್ತು ರಾಷ್ಟ್ರೀಯ ಸುರಕ್ಷೆಗಾಗಿ ಗಂಭೀರ ಅಪಾಯಕಾರಿ ಇದೆ ಎಂದು ಮಾಹಿತಿ ಇದೆ. ರೋಹಿಂಗ್ಯಾಗಳಿಗೆ ಆಧಾರ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಇದರಂತಹ ನಕಲಿ ಗುರುತಿನ ಚೀಟಿಗಳು ದೊರೆತಿವೆ.

೩. ರೋಹಿಂಗ್ಯಾಗಳ ಮೇಲೆ ವಿದೇಶಿ ಕಾನೂನಿನಲ್ಲಿನ ವ್ಯವಸ್ಥೆಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು !

ಅರ್ಜಿದಾರ ಪ್ರಿಯಾಲೀ ಸೂರ್ ಇವರು ಬಂಧನದಲ್ಲಿರುವ ರೋಹಿಂಗ್ಯಾಗಳ ಬಿಡುಗಡೆಗೆ ಒತ್ತಾಯಿಸುತ್ತಾ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಇದರ ಬಗ್ಗೆ ಸರಕಾರವು ನ್ಯಾಯಾಲಯದಲ್ಲಿ, ಅಕ್ರಮವಾಗಿ ಭಾರತದಲ್ಲಿ ಪ್ರವೇಶಿಸಿರುವ ವಿದೇಶಿ ಕಾನೂನಿನಲ್ಲಿನ ವ್ಯವಸ್ಥೆಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಭಾರತವು ವಿಶ್ವಸಂಸ್ಥೆಯ ೧೯೫೧ ರ ನಿರಾಶ್ರಿತ ಒಪ್ಪಂದದ ಮೇಲೆ ಮತ್ತು ನಿರಾಶ್ರಿತ ಸ್ಥಿತಿಗೆ ಸಂಬಂಧಿತ ನಿಯಮಗಳ ಬಗ್ಗೆ ಸಹಿ ಮಾಡಿರಲಿಲ್ಲ. ಆದ್ದರಿಂದ ಸರಕಾರ ರೋಹಿಂಗ್ಯಾಗಳ ಜೊತೆಗೆ ಸರಕಾರ ದೇಶದ ಅಂತರಿಕ ಕಾನೂನಿನ ಪ್ರಕಾರ ವ್ಯವಹರಿಸಲಿದೆ.

೪. ಅಕ್ರಮವಾಗಿ ಸ್ಥಳಾಂತರರಿಗೆ ಸಮಾನ ಹಕ್ಕು ಸಿಗುವುದಿಲ್ಲ !

ಅರ್ಜಿದಾರ ಪ್ರಿಯಾಲಿ ಸೂರ್ ಇವರು ಟಿಬೆಟ್ ಮತ್ತು ಶ್ರೀಲಂಕಾದ ನಿರಾಶ್ರಿತರ ಸಂದರ್ಭ ನೀಡುತ್ತಾ ಸರಕಾರವು ರೋಹಿಂಗ್ಯಾಗಳ ಜೊತೆ ಹಾಗೆಯೇ ವರ್ತಿಸಬೇಕೆಂದು ಒತ್ತಾಯಿಸಿದ್ದಾರೆ. (ಇಂತಹ ಬೇಡಿಕೆ ಮಾಡುವವರನ್ನು ದೇಶದಿಂದ ಹೊರದೂಡುವ ಕಾನೂನು ರೂಪಿಸುವುದು ಈಗ ಅವಶ್ಯಕವಾಗಿದೆ ! – ಸಂಪಾದಕರು) ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಸರಕಾರವು, ಯಾವುದೇ ಶ್ರೇಣಿಯಲ್ಲಿನ ಜನರಿಗೆ ನಿರಾಶ್ರಿತರು ಎಂದು ಮಾನ್ಯತೆ ನೀಡಬೇಕು ಅಥವಾ ಇಲ್ಲ ಇದು ಕೇವಲ ಕಾರ್ಯತಂತ್ರದ ನಿರ್ಣಯವಾಗಿದೆ. ಯಾರಾದರೂ ಕಾನೂನಿನ ವ್ಯಾಪ್ತಿಯ ಹೊರಗೆ ನಿರಾಶ್ರಿತರಿಗೆ ಶ್ರೇಣಿ ನೀಡಿದರೆ, ಆಗ ಅದಕ್ಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಮತ್ತು ನ್ಯಾಯಾಲಯದ ಆದೇಶವು ‘ನಿರಾಶ್ರಿತರ ಶ್ರೇಣಿ’ಯ ಘೋಷಣೆ ಮಾಡಲು ಸಾಧ್ಯವಿಲ್ಲ. ವಿದೇಶಿ ಮತ್ತು ಅಕ್ರಮ ಸ್ಥಳಾಂತರರಿಗೆ ಸಮಾನ ಹಕ್ಕು ಸಿಗುವುದಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ನ್ಯಾಯಾಲಯವು ನುಸುಳುಕೊರರಿಗೆ ಭಾರತದಲ್ಲಿ ವಾಸಿಸಲು ಅನುಮತಿಗಾಗಿ ಸಲ್ಲಿಸಿರುವ ಅರ್ಜಿಯನ್ನು ಸ್ವೀಕರಿಸಬಾರದು, ಭಾರತೀಯರ ಅನಿಸಿಕೆ !