ಸ್ವಾತಂತ್ರ್ಯವೀರ ಸಾವರಕರ ಚಲನಚಿತ್ರದ ಪ್ರದರ್ಶನಗೊಂಡ ಎರಡನೇ ಜಾಹೀರಾತಿನಲ್ಲಿ (ಟ್ರೇಲರನಲ್ಲಿ) ಸಾವರ್ಕರರ ಸಂಭಾಷಣೆ !
ಮುಂಬಯಿ – ಮಾರ್ಚ್ 22, 2024 ರಂದು ಬಿಡುಗಡೆಯಾಗಲಿರುವ ‘ಸ್ವಾತಂತ್ರ್ಯವೀರ ಸಾವರ್ಕರ’ ಚಲನ ಚಿತ್ರದ ಎರಡನೇ ಜಾಹೀರಾತು (ಟ್ರೇಲರ್) ಬಿಡುಗಡೆಯಾಗಿದೆ. ಅದರ ಮೊದಲ ದೃಶ್ಯದಲ್ಲಿ ಮೋಹನದಾಸ ಗಾಂಧಿಯವರು ‘ರಾಮರಾಜ್ಯ ತ್ಯಾಗ ಮತ್ತು ಉಪವಾಸದಿಂದ ಪಡೆಯಲಾಗಿತ್ತು’ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಪ್ರತ್ಯುತ್ತರವಾಗಿ ಸಾವರಕರ ಅವರು, ‘ರಾಮರಾಜ್ಯ ಉಪವಾಸ ಮಾಡಿ ಅಲ್ಲ, ಬದಲಾಗಿ ರಾವಣ, ಅವನ ಸಹೋದರ ಮತ್ತು ಅವನ ಸೈನ್ಯವನ್ನು ಕೊಂದು ಪಡೆಯಲಾಗಿತ್ತು’, ಎಂದು ಹೇಳುತ್ತಿರುವುದು ಕಂಡುಬರುತ್ತದೆ.
Two Ideologies, One Nation!
Witness the #ClashOfIdeologies which changed the future of our nation 🇮🇳 #SwatantryaVeerSavarkar in cinemas worldwide on 22nd March. #VeerSavarkarOn22March#WhoKilledHisStory@ZeeStudios_ #AnkitaLokhande @amit_sial @palle_singh @RandeepHoodaF… pic.twitter.com/LLp5KYf8JA— Randeep Hooda (@RandeepHooda) March 17, 2024
ಜಾಹೀರಾತಿನ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳು !
ಅ. ಮೋಹನ ದಾಸ ಗಾಂಧಿ : ಮುಸಲ್ಮಾನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಸೇರಿಸಿಕೊಳ್ಳಲು ನಾವು ಅವರಿಗೆ ಬೆಂಬಲ ನೀಡಬೇಕು.
ಆ. ಅಂಡಮಾನ ಕಾರಾಗೃಹದಲ್ಲಿ ಮುಸಲ್ಮಾನ ಪೊಲೀಸರು ಸಾವರಕರರನ್ನು ಎಳೆದುಕೊಂಡು ಹೋಗುತ್ತಿರುವಾಗ ಸಾವರಕರ ಹೇಳುತ್ತಾರೆ, ‘ಎಂತಹ ಮುಸಲ್ಮಾನನಿದ್ದೀಯಾ ನೀನು ? ನೀನು ದೇಶದವನಾಗಿಲ್ಲ, ಮುಸಲ್ಮಾನನಾಗಬೇಕಾಗಿದ್ದರೆ, ಬಹಾದೂರ ಶಹಾ ಜಫರನಂತೆ (ಮೊಗಲರ ಕೊನೆಯ ಬಾದಶಹಾನಂತೆ) ಮುಸಲ್ಮಾನರ ವಂಶಸ್ಥನಾಗು. ಅವರು ದೇಶವನ್ನು ಧರ್ಮಕ್ಕಿಂತ ಉನ್ನತ ಸ್ಥಾನದಲ್ಲಿರಿಸುತ್ತಿದ್ದರು.
ಇ. ಸಾವರ್ಕರ್ ಮತ್ತು ಗಾಂಧಿಯವರ ಭೇಟಿಯ ಪ್ರಸಂಗದ ಸಂದರ್ಭದಲ್ಲಿ ಸಾವರಕರ ಗಾಂಧಿಯವರಿಗೆ, ”ಶೇ 25 ಮುಸಲ್ಮಾನರಿಗಾಗಿ ಶೇ. 36 ರಷ್ಟು ಜಾಗ? ಅಂದರೆ ಒಬ್ಬ ಮುಸಲ್ಮಾನನ ಮತ ಹಿಂದೂಗಳ 3 ಮತಗಳಿಗೆ ಸಮ’ ಎಂದು ಹೇಳುತ್ತಾರೆ.
ಗಾಂಧಿ : ಇದು ಮುಸಲ್ಮಾನರ ಹಕ್ಕಿದೆ
ಸಾವರಕರ: ಏಕೆ ? ಈ ಕ್ರೈಸ್ತರ (ಬ್ರಿಟಿಶರ) ಮೊದಲು ಮುಸಲ್ಮಾನರು ನಮ್ಮ ಮಾಲೀಕರಾಗಿದ್ದರು ಅದಕ್ಕಾ ?
ಗಾಂಧಿ : ನಿಮಗೆ ಅಲ್ಪಸಂಖ್ಯಾತರ ಹೆದರಿಕೆಯ ಅರಿವಾಗುವುದಿಲ್ಲವೇ ?
ಸಾವರಕರ: ನಿಮಗೆ 800 ವರ್ಷಗಳ ಗುಲಾಮರಾಗಿದ್ದ ಬಹುಸಂಖ್ಯಾತರ ದುಃಖದ ಅರಿವಾಗುವುದಿಲ್ಲವೇ ?’
ಈ. ಸಾವರಕರರಿಗೆ `ನೀವು ಗಾಂಧಿಯವರನ್ನು ದ್ವೇಷಿಸುತ್ತೀರಿ’ ಎಂದು ಹೇಳುತ್ತಿರುವಾಗ, ಅವರು, `ನಾನು ಗಾಂಧಿಯವರನ್ನಲ್ಲ, ಅಹಿಂಸೆಯನ್ನು ದ್ವೇಷಿಸುತ್ತೇನೆ.’ ಎಂದು ಹೇಳುತ್ತಾರೆ.