ನಿರಾಶ್ರಿತರಿಗೆ ಪೌರತ್ವ ನೀಡುವಾಗ ಅವರ ಸುನ್ನತಿ ಆಗಿದೆಯೇ? ಎಂದು ಪರಿಶೀಲಿಸಿ ! – ತಥಾಗತ ರಾಯ್

ಮಿಜೋರಾಂ-ತ್ರಿಪುರಾ ರಾಜ್ಯಗಳ ಮಾಜಿ ರಾಜ್ಯಪಾಲ ಮತ್ತು ಭಾಜಪದ ನಾಯಕ ತಥಾಗತ ರಾಯ್ ಅವರ ಬೇಡಿಕೆ!

ಕೋಲಕಾತಾ (ಬಂಗಾಳ) – ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳ ಮಾಜಿ ರಾಜ್ಯಪಾಲ ಮತ್ತು ಭಾಜಪ ನಾಯಕ ತಥಾಗತ ರಾಯ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ಅವರು ‘X’ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಹಿಂದೂ, ಬೌದ್ಧ ಅಥವಾ ಕ್ರೈಸ್ತ ನಿರಾಶ್ರಿತರಿಗೆ ಪೌರತ್ವ ನೀಡುವಾಗ, ಅದರಲ್ಲಿಯೂ ಪುರುಷ ನಿರಾಶ್ರಿತರ ಧರ್ಮದ ಪರಿಶೀಲನೆ ಅಂದರೆ ` ಅವರ ಸುನ್ನತಿ ಆಗಿದೆಯೇ?’ ಎಂದು ಪರಿಶೀಲಿಸಬೇಕೆಂದು ಕೋರಿದ್ದಾರೆ.

ರಾಯ್ ಅವರು ಮುಂದೆ ಮಾತನಾಡಿ, ತೃಣಮೂಲ ಕಾಂಗ್ರೆಸ್ ಪಕ್ಷವು ಬಂಗಾಳದಲ್ಲಿ ಸಿಎಎ ಕುರಿತು ತಪ್ಪು ಮಾಹಿತಿಯನ್ನು ಹರಡಿಸುತ್ತಿದೆ. ಇದರಿಂದ ಜನರು ದಿಕ್ಕು ತಪ್ಪುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶದಲ್ಲಿ ಮುಸಲ್ಮಾನರ ದೌರ್ಜನ್ಯ ಸಹಿಸಲಾಗದೆ ಕೇವಲ ಉಟ್ಟ ಬಟ್ಟೆಯಲ್ಲಿ ಭಾರತಕ್ಕೆ ವಲಸೆ ಬಂದ ಹಿಂದೂ ನಿರಾಶ್ರಿತರಿಗೆ ಪೌರತ್ವ ಹೇಗೆ ಸಿಗುವುದು? ಮತ್ತು ಪೌರತ್ವ ಅರ್ಜಿ ತಿರಸ್ಕಾರಗೊಂಡವರ ಮುಂದಿನ ಗತಿ ಏನು? ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ಶೀಘ್ರದಲ್ಲೇ ಸ್ಪಷ್ಟಪಡಿಸಬೇಕು. ಹಾಗೆಯೇ ಹಿಂದೂ, ಬೌದ್ಧ ಮತ್ತು ಕ್ರೈಸ್ತರ ಪೌರತ್ವ ಅರ್ಜಿಗಳು ಕೆಲವು ಕಾರಣಗಳಿಂದ ತಿರಸ್ಕೃತವಾಗಿದ್ದರೆ, ಅವರಿಗೆ ಭಾರತದಲ್ಲಿ ವಾಸಿಸಲು ಅವಕಾಶ ನೀಡಬೇಕು. ಅಂತವರನ್ನು ಯಾವುದೇ ನಿರಾಶ್ರಿತ ಶಿಬಿರಗಳಿಗೆ ಕಳುಹಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ರಾಯ್ ಹೇಳಿದರು.

ಸಂಪಾದಕೀಯ ನಿಲುವು

ತಥಾಗತ ರಾಯ್ ಅವರ ಹೇಳಿಕೆಯಲ್ಲಿ ವಾಸ್ತವವಿದೆ. ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದ ಮತಾಂಧ ನುಸುಳುಕೋರರು ಸಿಎಎ ಕಾಯಿದೆಯ ದುರುಪಯೋಗ ಪಡಿಸಿಕೊಂಡು ಭಾರತೀಯ ಪೌರತ್ವ ಪಡೆಯಲು ಪ್ರಯತ್ನಿಸಬಹುದು. ಆದುದರಿಂದ ಜಾಗರೂಕರಾಗಿರಲು ವಿವಿಧ ಉಪಾಯ ಯೋಜನೆಯನ್ನು ಕೈಗೊಳ್ಳುವುದು ಅವಶ್ಯಕವಾಗಿದೆ!