ಕಳ್ಳತನದ ಆರೋಪ ಹೊರಿಸಿ ಬೆತ್ತಲೆಮಾಡಿ ತಪಾಸಣೆ ಮಾಡಿದ್ದರಿಂದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆಗೆ ಶರಣು !

ಬಾಗಲಕೋಟೆ ಸರ್ಕಾರಿ ಶಾಲೆಯಲ್ಲಿಯ ಘಟನೆ !

ಬೆಂಗಳೂರು – ಶಾಲೆಯಲ್ಲಿ ಕಳ್ಳತನದ ಪ್ರಕರಣದಲ್ಲಿ ೧೪ ವರ್ಷದ ವಿದ್ಯಾರ್ಥಿನಿಯ ಮೇಲೆ ಆರೋಪಮಾಡಿ ಅವಳನ್ನು ಬೆತ್ತಲೆಗೊಳಿಸಿ ತಪಾಸಣೆ ಮಾಡಲಾಯಿತು. ಈ ಅಘಾತದಿಂದ ಅವಳು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಳು. ಈ ಘಟನೆ ರಾಜ್ಯದ ಬಾಗಲಕೋಟೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.

ಶಾಲೆಯಲ್ಲಿ ಶಿಕ್ಷಕಿಯೊಬ್ಬರ ಪರ್ಸ್ ನಿಂದ ೨ ಸಾವಿರ ರೂಪಾಯಿ ಕಳ್ಳತನವಾಗಿದೆ ಎಂದು ಹೇಳಿದ ನಂತರ ಶಾಲೆಯಲ್ಲಿಯ ೪ ವಿದ್ಯಾರ್ಥಿನಿಯರನ್ನು ಕರೆಸಲಾಯಿತು. ಆಗ ಅವರನ್ನು ಬೆತ್ತಲೆಮಾಡಿ ತಪಾಸಣೆ ಮಾಡಲಾಯಿತು. ಆನಂತರ ದೇವಸ್ಥಾನಕ್ಕೆ ಕರೆದೊಯ್ದು ‘ದೇವರ ಮೇಲೆ ಪ್ರಮಾಣ ಮಾಡಿ‘ ಮತ್ತು ‘ಕಳ್ಳತನ ಮಾಡಿಲ್ಲ‘, ಎಂದು ಹೇಳಿ’, ಎಂದು ಹೇಳಿಸಲಾಯಿತು. ಇಷ್ಟೆಲ್ಲಾ ಪ್ರಕರಣದ ಒತ್ತಡ ಸಹಿಸಲಾಗದೆ ೧೪ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಗಲಕೋಟೆಯ ಪೋಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಇವರು ಈ ವಿಷಯದ ಮಾಹಿತಿ ನೀಡಿದ್ದಾರೆ.
ಈ ಹುಡುಗಿಯ ಪೋಷಕರು, ನಮ್ಮ ಮಗಳು ತುಂಬಾ ಸೂಕ್ಷ್ಮ ಸ್ವಭಾವದವಳಿದ್ದಳು. ೨ ದಿನಗಳಿಂದ ಅವಳು ಯಾರೊಂದಿಗೂ ಏನೂ ಮಾತನಾಡುತ್ತಿರಲಿಲ್ಲ ಎಂದಿದ್ದಾರೆ.

ಸಂಪಾದಕೀಯ ನಿಲುವು

ಈ ರೀತಿ ಅಮಾನವೀಯ ರೀತಿಯಲ್ಲಿ ತಪಾಸಣೆ ಮಾಡುವ ಶಾಲಾ ಆಡಳಿತ ಮಂಡಳಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! ಮಕ್ಕಳ ಸಂವೇದನಾಶೀಲ ಮನಸ್ಸಿನ ಬಗ್ಗೆ ಅರಿವೇ ಇಲ್ಲದ ಶಾಲೆಯಿಂದ ಅವರನ್ನು ಹೇಗೆ ನಿರ್ಮಿಸುತ್ತಿದ್ದಾರೆ, ಇದರ ವಿಚಾರ ಮಾಡದಿರುವುದು ಒಳಿತು !