Bengaluru Hindu Shopkeeper Attacked : ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದರಿಂದ ಮತಾಂಧ ಮುಸಲ್ಮಾನರಿಂದ ಹಿಂದೂ ಯುವಕನ ಮಾರಣಾಂತಿಕ ಹಲ್ಲೆ

ಬೆಂಗಳೂರಿನಲ್ಲಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿನ ಘಟನೆ !

ಬೆಂಗಳೂರು – ಇಲ್ಲಿಯ ನಗರತಪೇಟೆಯಲ್ಲಿನ ಜುಮ್ಮಾ ಮಸೀದಿ ಮಾರ್ಗದಲ್ಲಿ ಹಿಂದೂವಿನ ಮೊಬೈಲ್ ಮಾರಾಟದ ಅಂಗಡಿ ಇದೆ. ಈ ಅಂಗಡಿಯಲ್ಲಿ ಕಥಿತ ಅಜಾನದ (ನಮಾಜ ಪಠಣೆಗಾಗಿ ಮಸೀದಿಯಲ್ಲಿ ಕರೆಯುವ ಕರೆ) ಸಮಯದಲ್ಲಿ ಹನುಮಾನ ಚಾಲಿಸಾ ಹಾಕಿದ್ದರಿಂದ ಕೆಲವು ಮುಸಲ್ಮಾನರು ಅಂಗಡಿಯಲ್ಲಿನ ಮುಕೇಶ ಎಂಬ ಹಿಂದೂ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಗಾಯಗೊಂಡಿರುವ ಮುಕೇಶನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಯುವಕರ ವಿರುದ್ಧ ದೂರು ದಾಖಲಿಸಿದ್ದು ೩ ಜನರನ್ನು ಬಂಧಿಸಿದ್ದಾರೆ. ಸಿಸಿಟಿವಿಯ ಆಧಾರದಲ್ಲಿ ಅವರ ಹುಡುಕಾಟ ನಡೆಯುತ್ತಿದೆ. ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

ಚಂದಾ ನೀಡದಿದ್ದರಿಂದ ಸೇಡು ತೀರಿಸಿ ಕೊಳ್ಳುವುದಕ್ಕಾಗಿ ಹಲ್ಲೆ

ಘಟನೆಯ ಬಗ್ಗೆ ಮುಕೇಶ ಇವರು, ಆರು ಜನರು ಅಂಗಡಿಗೆ ಬಂದಿದ್ದರು, ‘ಅವರು ಯಾರು ?’, ‘ಅವರ ಹೆಸರುಗಳು ಏನು?’, ಇದರ ಬಗ್ಗೆ ನನಗೆ ಏನೂ ತಿಳಿದಿಲ್ಲ. ನಾನು ಸಂಜೆ ೬ ಗಂಟೆಗೆ ಭಜನೆ ಹಾಕುತ್ತಿದ್ದೆ, ಆಗ ಅವರು ಅಲ್ಲಿಗೆ ಬಂದು, “ನಮಗೆ ತೊಂದರೆ ಆಗುತ್ತಿದೆ, ಹಾಡುಗಳು ನಿಲ್ಲಿಸು.” ಎಂದು ಹೇಳಿದರು. ನಂತರ ವಿವಾದ ನಡೆದು ನನ್ನ ಮೇಲೆ ದಾಳಿ ಮಾಡಿದರು. ಈ ಹಿಂದೆ ಅವರ ಮತ್ತು ನನ್ನ ಯಾವುದೇ ಪರಿಚಯವಿಲ್ಲ. ಅವರು ಚಂದಾ ಸಂಗ್ರಹಿಸುವುದಕ್ಕಾಗಿ ಮದ್ಯ ಮದ್ಯ ಅಂಗಡಿಗೆ ಬರುತ್ತಿದ್ದರು. ನಾನು ಚಂದಾ ನೀಡುತ್ತಿರಲಿಲ್ಲ. ಮೊಬೈಲ್ ಅಂಗಡಿ ಇರುವುದರಿಂದ ಬ್ಲೂಟೂಥ, ಹೆಡ್ ಫೋನ್ ಕೇಳುವುದಕ್ಕಾಗಿ ಅವರು ಬರುತ್ತಿದ್ದರು. ನಾನು ಅವರಿಗೆ ಏನು ನೀಡುತ್ತಿರಲಿಲ್ಲ. ಅದೇ ಸಿಟ್ಟು ಮನಸ್ಸಿನಲ್ಲಿ ಇಟ್ಟುಕೊಂಡು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಅವರು ಹೊಡೆದಿದ್ದಾರೆ. ಎಲ್ಲಾ ಮಾಹಿತಿ ಮತ್ತು ಸಿಸಿಟಿವಿ ಚಿತ್ರೀಕರಣ ಪೊಲೀಸರಿಗೆ ನೀಡಿದ್ದೇನೆ. ನನಗೆ ಕನ್ನಡ ಓದಲು ಬರುವುದಿಲ್ಲ. ಮೊದಲ ಮಾಹಿತಿ ವರದಿಯಲ್ಲಿ (ಎಫ್.ಐ.ಆರ್.ನಲ್ಲಿ) ಏನು ಬರೆದಿದೆ ಅದು ತಿಳಿದಿಲ್ಲ. ‘ಪೊಲೀಸರು ಅದರಲ್ಲಿ ಅವರಿಗೆ ಏನು ಬೇಕಿದೆ ಅದನ್ನು ಬರೆದಿದ್ದಾರೆ’, ಎಂದು ಮುಕೇಶ ಇವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ನಡೆಸುವೆವು ! – ವ್ಯಾಪಾರಿಗಳ ಎಚ್ಚರಿಕೆ

ಹೊಡೆದಾಟದ ಘಟನೆಯ ನಂತರ ಇಲ್ಲಿಯ ಹಲಸೂರು ಗೇಟ್ ಪೊಲೀಸ್ ಠಾಣೆ ಎದರು ಅನೇಕ ವ್ಯಾಪಾರಿಗಳು ಸೇರಿದರು. ಹಲ್ಲೆ ನಡೆಸಿರುವ ಗೂಂಡಾಗಳನ್ನು ತಕ್ಷಣ ಬಂಧಿಸಬೇಕು. ಮಾರ್ಚ್ ೧೮ ಸಂಜೆಯವರೆಗೆ ಬಂಧಿಸದೆ ಇದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದೆಂದು ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮತ್ತು ಭಾಜಪದಿಂದ ಕಾಂಗ್ರೆಸ್ ಸರಕಾರದ ಬಗ್ಗೆ ಟಿಕೆ !

ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ್ ಇವರು ಮಾತನಾಡಿ, ಸುಲೇಮಾನ್, ಶಹನವಾಜ್ ಮತ್ತು ದಾನಿಷ ಸಹಿತ ೬ ಜನರ ವಿರುದ್ಧ ದೂರು ದಾಖಲಿಸಲಾಗಿತ್ತು; ಆದರೆ ಇಲ್ಲಿಯವರೆಗೆ ಅವರನ್ನು ಬಂಧಿಸಿರುವ ಸುದ್ದಿ ಬಂದಿಲ್ಲ, ಎಂದು ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಪಟೇಲ್ ಇವರು, ರಾಜ್ಯದಲ್ಲಿ ಹನುಮಾನ ಚಾಲಿಸವನ್ನು ನಿಷೇಧಿಸಿದ್ದಾರೆಯೆ ? ರಾಜ್ಯದ ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಯಿಂದ ರಾಮೇಶ್ವರ ಕೆಫೆಯವರೆಗೆ, ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರ ವಿಫಲಗೊಂಡಿದೆ, ಇದರಿಂದ ದೇಶ ವಿರೋಧಿ ಜನರಿಗೆ ಪ್ರೋತ್ಸಾಹ ದೊರೆಯುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಿದ್ದಾರೆ ಎಂದು ಹೇಳುವ ಕಪಟಿ ಜಾತ್ಯತೀತವಾದಿ ರಾಜಕೀಯ ಪಕ್ಷ ಮತ್ತು ಅವರ ಮುಖಂಡರು ಈಗ ಎಲ್ಲಿ ಅಡಗಿದ್ದಾರೆ ?