ಪಂಡರಪುರದಲ್ಲಿನ ಶ್ರೀ ವಿಠಲ ದೇವಸ್ಥಾನದಲ್ಲಿನ ಅಭಿವೃದ್ಧಿ ಕಾರ್ಯ ಆರಂಭ !

ಮುಂದಿನ ೪೫ ದಿನಗಳಲ್ಲಿ ದೇವಸ್ಥಾನದಲ್ಲಿ ಕೇವಲ ಮುಖದರ್ಶನ

ಪಂಡರಪುರ – ರಾಜ್ಯದಲ್ಲಿನ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನಕ್ಕಾಗಿ ಸರಕಾರ ೭೩ ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದೆ. ಈ ನಿಧಿಯಿಂದ ದೇವಸ್ಥಾನ ಸಮೂಹ ಮತ್ತು ಪರಿವಾರ ದೇವತೆಗಳ ದೇವಸ್ಥಾನಗಳನ್ನು ಜೋಪಾನ ಮಾಡುವರು. ಇದರ ಮೊದಲ ಹಂತದಲ್ಲಿನ ಅಭಿವೃದ್ಧಿ ಕೆಲಸ ಆರಂಭವಾಗಿದ್ದು ಶ್ರೀ ವಿಠಲ ದೇವಸ್ಥಾನದಲ್ಲಿನ ಗರ್ಭಗುಡಿಯ ಬೆಳ್ಳಿಯ ಕಮಾನು ತೆಗೆಯುವ ಕೆಲಸ ಆರಂಭವಾಗಿದೆ. ಮುಂದಿನ ೪೫ ದಿನಗಳಲ್ಲಿ ದೇವಸ್ಥಾನ ದರ್ಶನಕ್ಕಾಗಿ ಮುಚ್ಚುವರು, ಪ್ರತಿದಿನ ೫ ಗಂಟೆ ಕೇವಲ ಮುಖದರ್ಶನ ಇರುವುದು. ದೇವಸ್ಥಾನದ ಕಾರ್ಯ ಆರಂಭವಾದಾಗಿನಿಂದ ಭಕ್ತರ ಸಂಖ್ಯೆ ಗಮನಹಾರ್ಯವಾಗಿ ಕಡಿಮೆಯಾಗಿದ್ದು ಪರಿಸರದಲ್ಲಿ ಕೊರೋನ ಮಹಾಮಾರಿಯ ಕಾಲದಲ್ಲಿನ ಸಂಚಾರ ನಿರ್ಬಂಧದಂತಹ ಸ್ಥಿತಿ ಆಗಿದೆ. ಆಷಾಢ ಯಾತ್ರೆಯ ಮೊದಲು ಯೋಜನೆಯ ಪ್ರಕಾರ ಕಾರ್ಯ ಪೂರ್ಣಗೊಳಿಸಲು ಮಂದಿರ ಸಮಿತಿ ಪ್ರಯತ್ನ ಮಾಡುತ್ತಿದೆ.

ಶ್ರೀ ವಿಠಲ ದೇವಸ್ಥಾನದಲ್ಲಿ ಕಳೆದ ೪೦ ವರ್ಷದಿಂದ ಅನೇಕ ಬದಲಾವಣೆ ಮಾಡಲಾಗಿದೆ. ವಿಶೇಷವಾಗಿ ಗರ್ಭಗುಡಿಯಲ್ಲಿನ ಗ್ರಾನೆಟ್, ಮಾರ್ಬಲ್, ಶಹಾಬಾದ್ ಈ ರೀತಿಯ ನೆಲಹಾಸುಗಳು ಕೂಡಿಸಿದ್ದಾರೆ. ಕೆಲವು ಹೊಸ ಕಾಮಗಾರಿ ನಡೆಸಿದ್ದಾರೆ. ಈಗ ಮಂದಿರದ ಕಮಾನಿಗೆ ಹಾಕಿರುವ ಬೆಳ್ಳಿಯ ಲೇಪನ ತೆಗೆಯುವ ಕಾರ್ಯ ಆರಂಭವಾಗಿದೆ.

ಮೊದಲ ಹಂತದಲ್ಲಿ ಮುಂದಿನ ಕೆಲಸ ಮಾಡುವರು !

ಮೊದಲ ಹಂತದಲ್ಲಿ ದೊರೆಯುವ ೨೫ ಕೋಟಿ ರೂಪಾಯಿಯಲ್ಲಿ ಗೋಡೆ ಮತ್ತು ಕಂಬಗಳ ಸ್ವಚ್ಛತೆ ಮಾಡುವುದು, ಬಣ್ಣ ಹಚ್ಚುವುದು, ಹಾಳಾಗಿರುವ ಕಲ್ಲಿನ ಕಾಮಗಾರಿ ದುರಸ್ತಿ ಮಾಡುವುದು, ಹೊಸ ಕಾಮಗಾರಿ ನಡೆಸುವುದು, ಪುರಾತನ ಶೈಲಿಯ ಹೊಸ ಕಾಮಗಾರಿ ಮುಂದುವರಿಸುವುದು, ನೀರು ಸೋರಿಕೆ ತಡೆಯುವುದು, ದೀಪದ ಸಾಲುಗಳು ದುರಸ್ತಿ ಮಾಡುವುದು, ದೇವಸ್ಥಾನದ ಮುಖ್ಯ ಗರ್ಭಗೃಹದಲ್ಲಿನ ಗ್ರಾನೆಟ್, ಮಾರ್ಬಲ್ ನೆಲೆಹಸು ತೆಗೆಯುವುದು ಮುಂತಾದ ಕಾರ್ಯಗಳು ನಡೆಯುವುದು.