|
(ಗ್ಲೋಬಲ್ ಎಂಬ್ಯಾಸ್ಯಡರ ಆಫ್ ಪೀಸ್ ಬಿಲ್ಡಿಂಗ್ ಅಂಡ್ ಫೇಥ ಎಂದರೆ ಶಾಂತಿನಿರ್ಮಿತಿ ಮತ್ತು ಶ್ರದ್ಧೆ ಇದರ ಅಂತರಾಷ್ಟ್ರೀಯ ದೂತ !)
ಭಾಗ್ಯನಗರ (ತೆಲಂಗಾಣ) – ಇಲ್ಲಿ ನಡೆಯುತ್ತಿರುವ ‘ಗ್ಲೋಬಲ್ ಸ್ಪಿರಿಚುಯಾಲಿಟಿ ಮಹೋತ್ಸವ’ದಲ್ಲಿ (ಅಂತರಾಷ್ಟ್ರೀಯ ಆಧ್ಯಾತ್ಮ ಮಹೋತ್ಸವ) ಆಯೋಜಕ ಸಂಸ್ಥೆ ಆಗಿರುವ ‘ಹಾರ್ಟ್ ಫುಲ ನೆಸ್’ ಸಂಸ್ಥೆಯ ಮಾರ್ಗದರ್ಶಕ ದಾಜಿ (ಕಮಲೇಶಜಿ ಪಟೇಲ್) ಇವರನ್ನು ಕಾಮನ್ ವೆಲ್ತ್ (ರಾಷ್ಟ್ರಕುಲ) ಸಂಘಟನೆಯಿಂದ ಸತ್ಕರಿಸಲಾಯಿತು. ಕಾಮನ್ ವೆಲ್ತ್ ನ ಮಹಾಸಚಿವ ಫ್ಯಾಟ್ರಿಶಿಯ ಸ್ಕಾಟ್ಲ್ಯಾಂಡ್ ಇವರು ಮತ್ತು ಭಾರತದ ಉಪರಾಷ್ಟ್ರಪತಿ ಜಗದೀಪ ಧನಖಡ ಇವರು ದಾಜಿ ಇವರನ್ನು ಜೊತೆಯಾಗಿ ‘ಗ್ಲೋಬಲ್ ಎಂಬ್ಯಾಸ್ಯಡರ್ ಆಫ್ ಪೀಸ್ ಬಿಲ್ಡಿಂಗ್ ಅಂಡ್ ಫೇಥ’ ಈ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು. ಇಲ್ಲಿಯ ಕಾನ್ಹಾ ಶಾಂತಿ ವನಂ ಕ್ಷೇತ್ರದಲ್ಲಿ ೪ ದಿನದ ಮಹೋತ್ಸವ ನಡೆಯಿತು. ಇದರ ಕೊನೆಯ ದಿನದಂದು ಮಾರ್ಚ್ ೧೭ ರಂದು ಈ ಪ್ರಶಸ್ತಿ ಪ್ರದಾನದ ಕಾರ್ಯಕ್ರಮ ನಡೆಯಿತು.
🌷Kamlesh Patel ji, the guiding light of ‘Heartfulness,’ awarded the ‘Global Ambassador of Peace Building and Faith’!
📌 Patricia Scotland, Secretary-General of the Commonwealth, and Shri.Jagdeep Dhankhar, Vice President of India, jointly presented… pic.twitter.com/ChKVuMXNab
— Sanatan Prabhat (@SanatanPrabhat) March 17, 2024
ಕಮಲೇಶಜಿ ಪಟೇಲ್ ಇವರು ಎಲ್ಲರಿಗೂ ಆಧ್ಯಾತ್ಮಿಕ ಸೌಖ್ಯ ಲಭಿಸುವುದಕ್ಕಾಗಿ ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ ! – ಪ್ಯಾಟ್ರಿಷಿಯ ಸ್ಕಾಟ್ಲ್ಯಾಂಡ್, ‘ಕಾಮನ್ವೆಲ್ತ್’ ಸಂಘಟನೆ
ಈ ಸಮಯದಲ್ಲಿ ಪ್ಯಾಟ್ರಿಷಿಯ ಸ್ಕಾಟ್ಲ್ಯಾಂಡ್ ಇವರು, ಕಮಲೇಶಜಿ ಪಟೇಲ್ (ದಾಜಿ) ಇವರ ದೂರ ದೃಷ್ಟಿ, ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಒಂದು ಕಾಲದಲ್ಲಿರುವ ಬರದ ಸಮಾನ ಇರುವ ಪ್ರದೇಶ ಇಂದು ಹಸಿರಾಗಿ ಕಂಗೊಳಿಸಿದೆ. ನಿಸರ್ಗದ ಜೊತೆ ಮಾಡಿರುವ ಈ ಸ್ನೇಹ ಮಹತ್ವಪೂರ್ಣವಾಗಿದೆ. ರಾಷ್ಟ್ರಕುಲ ಇದು ೫೬ ದೇಶಗಳ ಮತ್ತು ಎರಡುವರೆ ಅಬ್ಜ ಜನರ ಕುಟುಂಬವಾಗಿದೆ. ಶಾಂತಿ, ಸಾಮರಸ್ಯ ಮತ್ತು ಪರಸ್ಪರ ಗೌರವ ಇದರ ಬಗ್ಗೆ ನಮ್ಮ ಸಾಮಾನ ಭಾವನೆಯನ್ನು ದಾಜಿ ಇವರು ನಮ್ಮೆಲ್ಲರ ಮುಂದೆ ಇಟ್ಟಿದ್ದಾರೆ. ಅವರ ಜ್ಞಾನ ಮತ್ತು ಕರುಣೆ ಹಾಗೂ ಎಲ್ಲರ ಆಧ್ಯಾತ್ಮಿಕ ಸೌಖ್ಯಕ್ಕಾಗಿ ಪ್ರಯತ್ನ ಇದು ಶ್ಲಾಘನೀಯವಾಗಿದೆ.
ಎಲ್ಲಾ ನಾಗರಿ ಪ್ರಶಸ್ತಿ ಇವುಗಳು ವಸ್ತುನಿಷ್ಠ ಮಾನದಂಡದ ಮೇಲೆ ಆಧಾರಿತ ! – ಜಗದೀಪ ಧನಖಡ, ಉಪರಾಷ್ಟ್ರಪತಿ
ಒಂದು ಕಾಲದಲ್ಲಿ ವ್ಯಕ್ತಿಗೆ ಪ್ರಶಸ್ತಿ ನೀಡುವುದಕ್ಕಾಗಿ ಮಾನದಂಡಗಳು ತರ್ಕಹೀನವಾಗಿದ್ದವು. ಕಾಲ ಬದಲಾಗಿದೆ. ಇಂದು ಎಲ್ಲಾ ನಾಗರಿ ಪ್ರಶಸ್ತಿ ಇವುಗಳು ವಸ್ತುನಿಷ್ಠ ಮಾನದಂಡದ ಮೇಲೆ ಆಧಾರಿತವಾಗಿವೆ. ದಾಜಿ ಇವರಿಗೆ ‘ಪದ್ಮಭೂಷಣ’ ಪ್ರಶಸ್ತಿ ಕೂಡ ಇದರಿಂದಲೇ ನೀಡಿದ್ದಾರೆ; ಆದರೆ ಈ ಪ್ರಶಸ್ತಿಗಿಂತಲೂ ಅವರಿಗೆ ಲಕ್ಷಾಂತರ ಜನರು ‘ದಾಜಿ’ ಎನ್ನುತ್ತಾರೆ, ಇದೇ ಎಲ್ಲಕ್ಕಿಂತ ದೊಡ್ಡ ಪ್ರಶಸ್ತಿ ಆಗಿದೆ.
ಈ ಪ್ರಶಸ್ತಿ ನನ್ನ ಸಂಸ್ಥೆಯದು ! – ಕಮಲೇಶಜಿ ಪಟೇಲ(ದಾಜೆ)
ಈ ಸಮಯದಲ್ಲಿ ದಾಜಿ ಇವರು, ನಾನು ಇಂದು ಮನಸ್ಸು ಮತ್ತು ಬುದ್ಧಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಈ ಪ್ರಶಸ್ತಿ ನನ್ನ ಸಂಸ್ಥೆಯದಾಗಿದೆ, ನನ್ನದಲ್ಲ. ಈಗ ನಮ್ಮ ಜೊತೆಗೆ ೩೦೦ ಆಧ್ಯಾತ್ಮಿಕ ಸಂಸ್ಥೆಯ ಶಕ್ತಿ ಇದೆ. ನಾವೆಲ್ಲರೂ ಐಕ್ಯತೆಯಿಂದ ಪ್ರೇಮ, ಗೌರವ, ವಿಶ್ವಾಸ ಮತ್ತು ಸನ್ಮಾನ ಇದರಿಂದ ಒಟ್ಟಾಗಿ ಸೇರಿದ್ದೇವೆ ಎಂದು ಹೇಳಿದರು.