ಮಾಜಿ ಕೇಂದ್ರ ಮಾಹಿತಿ ಆಯುಕ್ತ ಉದಯ ಮಾಹುರ್ಕರ್ ಇವರಿಂದ ಕೇಂದ್ರ ಸರಕಾರಕ್ಕೆ ಮನವಿ !
ನವ ದೆಹಲಿ – ಕೇಂದ್ರ ಸರಕಾರದಿಂದ ಮಹಿಳೆಯರ ಅಶ್ಲೀಲ ವೀಡಿಯೋ ತಯಾರಿಸುವ ಕೆಲವು ಒಟಿಟಿ ನಿಷೇಧಿಸಿರುವುದು, ಈ ನಿರ್ಧಾರ ಪ್ರಭು ಶ್ರೀ ರಾಮನ ತತ್ವಗಳು ಮತ್ತು ಆದರ್ಶದಿಂದ ನಿರ್ಮಾಣವಾಗಿದೆ ಎಂದು ನಾನು ತಿಳಿಯುತ್ತೇನೆ. ಇದು ಒಂದು ಮಹತ್ವಪೂರ್ಣ ಸಮಸ್ಯೆ ಆಗಿದ್ದು ಪ್ರಧಾನಮಂತ್ರಿ ಮತ್ತು ಮಾಹಿತಿ ಮತ್ತು ಪ್ರಸಾರಣ ಸಚಿವಾಲಯವು ಈ ಸಮಸ್ಯೆಯ ಗಾಂಭೀರ್ಯತೆ ತಿಳಿದು ಈ ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಇಂತಹ ವಿಡಿಯೋ ಪ್ರಸಾರ ಮಾಡುವ ಮಾಧ್ಯಮಗಳ ಮೇಲೆ ಅಂಕುಶ ಬೇಕು. ಅದರ ಚಿತ್ರೀಕರಣ, ವಿಷಯದ ತಿರುಳು, ಬಳಸುವ ಭಾಷೆ ಮುಂತಾದರ ಮೇಲೆ ನಿಯಮ ಇರಬೇಕು. ಅದಕ್ಕಾಗಿ ಪ್ರಭಾವಿ ಕಾನೂನು ರೂಪಿಸಬೇಕು. ಯಾರು ಈ ಕಾನೂನಿನ ಉಲ್ಲಂಘನೆ ಮಾಡುವರು ಅವರ ಮೇಲೆ ಬಲಾತ್ಕಾರ ಮತ್ತು ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಪ್ರೋತ್ಸಾಹ ನೀಡಿರುವ ಆರೋಪದಡಿಯಲ್ಲಿ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ೩ ತಿಂಗಳಲ್ಲಿ ವಿಚಾರಣೆ ನಡೆಸುವ ವ್ಯವಸ್ಥೆ ಮಾಡಿ ೧೦ ರಿಂದ ೨೦ ವರ್ಷ ಜೈಲು ಶಿಕ್ಷೆ ಮತ್ತು ಮೊದಲ ೩ ವರ್ಷ ಜಾಮೀನ ಕೇಳುವ ಸೌಲಭ್ಯ ನೀಡದಿರುವುದು ಅವಶ್ಯಕವಾಗಿದೆ, ಎಂದು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಮತ್ತು ‘ಸೇವ್ ಕಲ್ಚರ್ ಸೇವ್ ಭಾರತ ಫೌಂಡೇಶನ್’ ಈ ಸಂಸ್ಥೆಯ ಸಂಸ್ಥಾಪಕ ಉದಯ ಮಾಹುರ್ಕರ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಾಹುರ್ಕರ ಇವರು ಒಂದು ವಾರ್ತಾವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮೇಲಿನ ಮಹತ್ವಪೂರ್ಣ ಬೇಡಿಕೆ ಸಲ್ಲಿಸಿದರು. ಕೆಲವು ದಿನಗಳ ಹಿಂದೆ ಕೇಂದ್ರ ಸರಕಾರವು ಒಂದು ಮಹತ್ವಪೂರ್ಣ ಕ್ರಮ ಕೈಗೊಳ್ಳುತ್ತಾ ಅಶ್ಲೀಲತೆ ಹಬ್ಬಿಸುವ ೧೮ ಓ ಟಿ ಟಿ ವೇದಿಕೆ, ೧೯ ಜಾಲತಾಣಗಳು ಮತ್ತು ೧೦ ಆಪ್ ಗಳ ಮೇಲೆ ನಿಷೇದ ಹೇರಿದೆ. ಈ ಕುರಿತು ಮಾಹುರ್ಕರ್ ಇವರು ಮೇಲಿನ ಹೇಳಿಕೆ ನೀಡಿದರು. ಓ ಟಿ ಟಿ ಎಂದರೆ ಓವರ್ ದ ಟಾಪ್ ಇದರ ಮಾಧ್ಯಮದಿಂದ ಚಲನಚಿತ್ರ, ಧಾರಾವಾಹಿ ಮುಂತಾದ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ.
ಮಾಹುರ್ಕರ್ ಮಾತು ಮುಂದುವರೆಸುತ್ತಾ,
೧. ಬಲತ್ಕಾರದ ಘಟನೆಯಲ್ಲಿ ಹೆಚ್ಚಳವಾಗುವ ಹಿಂದೆ ಈ ರೀತಿಯ ಅಶ್ಲೀಲ ವಿಡಿಯೋಗಳೆ ಕಾರಣವಾಗಿವೆ. ಜನರು ಇಂತಹ ವಿಷಯ ನೋಡಿ ಇಂತಹ ಭಯಾನಕ ಕೃತ್ಯಗಳು ಮಾಡುತ್ತಾರೆ. ಭಾರತದ ಎದುರು ಇದು ಒಂದು ದೊಡ್ಡ ಸವಾಲಗಳಾಗಿದ್ದು ಅದರ ಕಡೆಗೆ ಅಂದುಕೊಂಡಷ್ಟು ಗಮನ ನೀಡುತ್ತಿಲ್ಲ.
೨. ಇವುಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ದೊಡ್ಡ ದೊಡ್ಡ ಒತ್ತಡ ಗುಂಪುಗಳು ಕಾರ್ಯನಿರತವಾಗಿದ್ದು ಕುಟಿಲ ಉದ್ದೇಶ ಪೂರ್ತಿಗಾಗಿ ಅವುಗಳು ಬಹಳಷ್ಟು ಹಣ ಕೂಡ ಖರ್ಚು ಮಾಡುತ್ತಿದ್ದಾರೆ.
೩. ೨೦೪೭ ರಲ್ಲಿ ವಿಕಸಿತ ಭಾರತದ ಕನಸು ನಮ್ಮೆಲ್ಲರ ಎದುರು ಸ್ಪಷ್ಟವಾಗಿದೆ. ನಮಗೆ ಆರ್ಥಿಕ, ಸೈನಿಕಿ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಮಹಾಶಕ್ತಿ ಆಗಬೇಕಿದೆ. ಜೊತೆಗೆ ನಾವು ಒಂದು ಸಮೃದ್ಧ ಮತ್ತು ವೈವಿಧ್ಯಪೂರ್ಣ ಸಂಸ್ಕೃತಿ ಕೂಡ ಅಳವಡಿಸಲು ಇಚ್ಚಿಸುತ್ತಿದ್ದೇವೆಯೇ ? ಭಾರತಕ್ಕೆ ಏನಾದರೂ ವಿಶ್ವಗುರು ಆಗುವಲ್ಲಿ ಘಾತಕವಾಗಿರುವ ಅಶ್ಲೀಲತೆ ತಡೆಯಬೇಕು. ಈಗ ನಡೆದಿರುವ ಕಾರ್ಯಾಚರಣೆ ಇದು ಇದಕ್ಕೆ ಎತ್ತಿರುವ ಒಂದು ಒಳ್ಳೆಯ ಹೆಜ್ಜೆ ಆಗಿದೆ.
೪. ನಮ್ಮ ಸಂಘಟನೆ ಈ ಅಂಶಗಳ ಬಗ್ಗೆ ಎಲ್ಲಾ ಮಟ್ಟದಲ್ಲಿ ಜಾಗೃತಿ ಮಾಡುವುದಕ್ಕಾಗಿ ಕಾರ್ಯನಿರತವಾಗಿದೆ. ನಾವು ವಿವಿಧ ಕಾಲೇಜುಗಳಲ್ಲಿ ಈ ವಿಷಯದ ಕುರಿತು ಕಾರ್ಯಕ್ರಮ ನಡೆಸುತ್ತಿದ್ದು ಅದಕ್ಕಾಗಿ ಒಳ್ಳೆಯ ಸಂಘಟನೆಯ ಸಹಾಯ ಪಡೆಯುತ್ತಿದ್ದೇವೆ. ನಮಗೆ ಗುಜರಾತ ಸರಕಾರದಿಂದ ಕೂಡ ಒಳ್ಳೆಯ ಸಹಕಾರ ದೊರೆಯುತ್ತಿದೆ.
೫. ನಾವು ಎರಡು ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಿದ್ದೇವೆ. ಈ ಸಮಸ್ಯೆ ಕಾನೂನಿನ ದೃಷ್ಟಿಯಿಂದ ಪರಿಹರಿಸಲು ಪ್ರಯತ್ನಿಸುವುದು ಹಾಗೂ ಅದರ ವಿರುದ್ಧ ಜನಜಾಗೃತಿ ಮೂಡಿಸುವುದು. ನಾನು ಗುಜರಾತಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಧನ್ಯವಾದ ಹೇಳುತ್ತೇನೆ. ನಮಗೆ ಈ ಅಭಿಯಾನದಲ್ಲಿ ನಿಶ್ಚಿತವಾಗಿ ಯಶಸ್ಸು ದೋರೆಯುವುದು ಎಂದು ನನಗೆ ಆಸೆ ಇದೆ.
(ಸೌಜನ್ಯ – Gems Of Bollywood)
ಅಶ್ಲೀಲತೆಗೆ ಲಗಾಮು ಹಾಕಲು ಸಕ್ಷಮವಾಗಿ ಹಿಡಿತ ಸಾಧಿಸಲು ಸರಕಾರಿ ಸಂಸ್ಥೆ ಸ್ಥಾಪನೆ ಮಾಡಿ ?
ಈ ಸಮಯದಲ್ಲಿ ಮಾಹುರ್ಕರ್ ಇವರು ಕೇಂದ್ರ ಸರಕಾರಕ್ಕೆ ಇನ್ನೆರಡು ಮನವಿ ಸಲ್ಲಿಸಿದ್ದಾರೆ. ಅವರು, ಸರಕಾರವು ಮಾಹಿತಿ ಮತ್ತು ತಂತ್ರಜ್ಞಾನ ಕಾನೂನಿನಲ್ಲಿ ಹೆಚ್ಚುವರಿ ವ್ಯವಸ್ಥೆ ಮಾಡಬೇಕು. ಇದರಲ್ಲಿ ಪ್ರೌಢರಿಗಾಗಿ ಇರುವ ಸಾಮಗ್ರಿ (ವಿಡಿಯೋ ವಿಜುವಲ್ ಕಂಟೆಂಟ್) ನೋಡುವುದಕ್ಕಾಗಿ ವ್ಯಕ್ತಿಯ ‘ಆಧಾರಕಾರ್ಡ್’ ಪರಿಶೀಲಿಸುವ ಒಂದು ವಿಶ್ವಾಸಾರ್ಹ ವ್ಯವಸ್ಥೆ ಇರುವುದು ಅವಶ್ಯಕವಾಗಿದೆ. ಇದರಿಂದ ಜನರು ಅಶ್ಲೀಲ ಚಿತ್ರಣ ನೋಡುವುದರ ಕಡೆ ಇರುವ ಒಲವು ಕಡಿಮೆ ಆಗಬಹುದು.
ಜೊತೆಗೆ ಒಂದು ಸಕ್ಷಮವಾದಂತಹ ಹಿಡಿತ ಸಾಧಿಸಲು ಸರಕಾರಿ ಸಂಸ್ಥೆಯ ಸ್ಥಾಪನೆ ಮಾಡಬೇಕು ಅದು ಈ ರೀತಿಯ ಅಶ್ಲೀಲ ಚಿತ್ರೀಕರಣದ ನಿರ್ಮಾಣ ಮತ್ತು ಪ್ರಸಾರ ಮಾಡುವುದನ್ನು ತಡೆಯುವುದಕ್ಕಾಗಿ ಸಮರ್ಪಕವಾಗಿ ಕಾರ್ಯನಿರತವಾಗಬೇಕು. ನಾವು ಈ ಮೊದಲೇ ಕಾನೂನು ಸಚಿವಾಲಯಕ್ಕೆ ಈ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.