Rescue from Somali Pirates: ಭಾರತೀಯ ನೌಕಾಪಡೆಯಿಂದ ಅಪಹರಿಸಿದ ವ್ಯಾಪಾರಿ ಹಡಗಿನ ರಕ್ಷಣೆ

೩೫ ಕಡಲಗಳ್ಳರ ಶರಣಾಗತಿ

ನವ ದೆಹಲಿ – ೩ ತಿಂಗಳ ಹಿಂದೆ ಸಮುದ್ರ ಕಡಲ್ಗಳ್ಳರು ಅಪಹರಿಸಿದ್ದ ‘ಎಮ್.ವಿ ರೌನ್‘ ಹಡಗನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಈ ಹಡಗಿನಲ್ಲಿದ್ದ ೧೭ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಹಾಗೂ ಹಡಗಿನಲ್ಲಿದ್ದ ೩೫ ಕಡಲ್ಗಳ್ಳರನ್ನು ಶರಣಾಗುವಂತೆ ಅನಿವಾರ್ಯಗೊಳಿಸಲಾಯಿತು. ಈ ಕಾರ್ಯಾಚರಣೆಯನ್ನು ಭಾರತದ ಕರಾವಳಿಯಿಂದ ೨ ಸಾವಿರದ ೮೦೦ ಕಿ.ಮೀ.ದೂರದಲ್ಲಿರುವ ಸಮುದ್ರದಲ್ಲಿ ನಡೆಸಲಾಗಿದೆ. ಈ ಹಡಗನ್ನು ಏಡನ್ ಕೊಲ್ಲಿಯಿಂದ ೧೧೦ ದಿನಗಳ ಹಿಂದೆ ಅಪಹರಿಸಲಾಗಿತ್ತು.

ಭಾರತೀಯ ನೌಕಾಪಡೆಯ ಯುದ್ಧನೌಕೆ ಐ.ಎನ್.ಎಸ್. ಸುಭದ್ರಾ, ಜೊತೆಗೆ ಡ್ರೋನ್ ಮತ್ತು ಗಸ್ತು ತಿರುಗುವ ವಿಮಾನದ ಮೂಲಕ ಈ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಯ ಮೊದಲು ನೌಕಾಪಡೆಯು ಕಡಲ್ಗಳ್ಳರನ್ನು ಶರಣಾಗುವಂತೆ ಹೇಳಿತ್ತು. ಕಡಲ್ಗಳ್ಳರು ಶರಣಾಗದಿದ್ದರೆ ಅವರ ವಿರುದ್ಧ ಕ್ರಮ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ಕೊಡಲಾಗಿತ್ತು. ಭಾರತೀಯ ನೌಕಾಪಡೆಯು ಮಾರ್ಚ್ ೧೬ ರಂದು ಈ ಹಡಗನ್ನು ಸಂಪರ್ಕಿಸಿತು. ಈ ಸಂದರ್ಭದಲ್ಲಿ ಸೋಮಾಲಿಯಾದ ಕಡಲ್ಗಳ್ಳರು ನೌಕಾಪಡೆಯ ಮೇಲೆ ಗುಂಡು ಹಾರಿಸಿದ್ದರು.