ಧಾರಚುಲಾ (ಉತ್ತರಾಖಂಡ)ದಲ್ಲಿ ಇಬ್ಬರು ಅಪ್ರಾಪ್ತ ಹಿಂದೂ ಹುಡುಗಿಯೊಂದಿಗೆ ಮುಸಲ್ಮಾನ ಯುವಕರು ಪರಾರಿಯಾದ ಪ್ರಕರಣ
ಡೆಹರಾಡೂನ (ಉತ್ತರಾಖಂಡ) – ಧಾರಚುಲಾದಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಫೆಬ್ರವರಿ 1 ರಂದು ನಾಪತ್ತೆಯಾದವರು ಉತ್ತರ ಪ್ರದೇಶದ ಬರೇಲಿಯಲ್ಲಿ ಪತ್ತೆಯಾದರು. ಈ ಪ್ರಕರಣದಲ್ಲಿ ಪೊಲೀಸರು ಬರೇಲಿಯ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ. ತದ ನಂತರ ಧಾರಚುಲಾದಲ್ಲಿ ಮುಸಲ್ಮಾನರ ವಿರುದ್ಧ ಸಮಾಜ ಮನದಲ್ಲಿ ಆಕ್ರೋಶದ ಭಾವನೆ ನಿರ್ಮಾಣವಾಗಿದೆ. ಈ ಪ್ರಕರಣದಲ್ಲಿ ಮುಸಲ್ಮಾನ ವ್ಯಾಪಾರಿಗಳ ವಿರುದ್ಧ ಆಂದೋಲನ ಆರಂಭವಾಗಿದೆ. ಧಾರಚುಲಾ ವಾಣಿಜ್ಯ ಮಂಡಳಿಯು ತನ್ನ ಸದಸ್ಯರಾಗಿರುವ 91 ವ್ಯಾಪಾರಿಗಳನ್ನು ಮಂಡಳಿಯಿಂದ ಗಡಿಪಾರು ಮಾಡಿ ಅವರ ಅಂಗಡಿಗಳನ್ನು ತೆರವುಗೊಳಿಸಲು ಗಡುವು ನೀಡಿದೆ. ಅದರಲ್ಲಿ 79 ಅಂಗಡಿಗಳು ಮುಸ್ಲಿಮರಿಗೆ ಸೇರಿವೆ. ತದ ನಂತರ, ಅಂಗಡಿಗಳನ್ನು ಮುಚ್ಚಲಾಗಿದ್ದು, ಒಬ್ಬ ವ್ಯಾಪಾರಿ ತನ್ನ ಉದ್ಯಮವನ್ನು ಸ್ಥಗಿತಗೊಳಿಸಿದ್ದಾನೆ. ಇಲ್ಲಿನ ಪರಿಸ್ಥಿತಿ ನೋಡಿ ಗುಜರಿ ಕೆಲಸ ಮಾಡುವ 50 ಮುಸಲ್ಮಾನರು, ಇಲ್ಲಿಂದ ಪರಾರಿಯಾಗಿದ್ದಾರೆ. ವಿಶೇಷವೆಂದರೆ ಕೆಲವು ತಿಂಗಳುಗಳ ಹಿಂದೆ ಉತ್ತರಾಖಂಡದ ಪುರೋಲಾದಲ್ಲಿಯೂ ಹಿಂದೂ ಯುವತಿಯರ ಸಂದರ್ಭದಲ್ಲಿ ಇದೇ ರೀತಿ ಘಟನೆ ನಡೆದ ಬಳಿಕ ಮುಸಲ್ಮಾನರ ಮೇಲೆ ಬಹಿಷ್ಕಾರ ಹಾಕಲಾಗಿತ್ತು.
1. ಉತ್ತರಾಖಂಡ ಪೊಲೀಸರು, ಕೆಲವು ಜನರು ಮೆರವಣಿಗೆ ನಡೆಸಿ ಒಂದು ನಿರ್ದಿಷ್ಟ ಸಮಾಜದ ವಿರುದ್ಧ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಿದರು. ಅವರ ಅಂಗಡಿಗಳನ್ನು ಮುಚ್ಚುವ ಪ್ರಯತ್ನ ಮಾಡಿದರು; ಆದರೆ ಸಧ್ಯ ಸ್ಥಿತಿ ಸಾಮಾನ್ಯವಾಗಿದೆ ಎಂದು ಹೇಳಿದರು.
2. ವಾಣಿಜ್ಯ ಸಂಘಟನೆಯ ಕಾರ್ಯದರ್ಶಿ ಮಹೇಶ ಗರಬ್ಯಾಲ ಇವರು ಮಾತನಾಡಿ, ನಾವು ಹೊರಗಿನ ವ್ಯಾಪಾರಿಗಳಿಗೆ ಇಲ್ಲಿ ಇರಲು ಬಿಡುವುದಿಲ್ಲ. ಸಧ್ಯಕ್ಕೆ ವಾಣಿಜ್ಯ ಮಂಡಳಿಯಲ್ಲಿ 600 ವ್ಯಾಪಾರಿಗಳಿದ್ದು, ಅವರಲ್ಲಿ 400 ಸ್ಥಳಿಯ ಹಾಗೂ 200 ಹೊರಗಿನವರು ಇದ್ದಾರೆ. ಗುರುತಿಸಿದ ನಂತರ 175 ಉದ್ಯಮಿಗಳಿಗೆ 2000 ರ ಮೊದಲು ವ್ಯಾಪಾರ ಮಾಡುತ್ತಿರುವ ಪುರಾವೆಗಳನ್ನು ಒದಗಿಸಲು ಸಮಯವನ್ನು ನೀಡಲಾಗಿದೆಯೆಂದು ಹೇಳಿದರು.
ಸಂಪಾದಕೀಯ ನಿಲುವುಪೋಲೀಸ್, ಆಡಳಿತ ಮತ್ತು ಸರಕಾರ ಹಿಂದೂಗಳ ರಕ್ಷಣೆಗೆ ಮತ್ತು ಮತಾಂಧರನ್ನು ಹದ್ದುಬಸ್ತಿನಲ್ಲಿಡಲು ಯಾವುದೇ ಕ್ರಮಗಳನ್ನು ಕೈಕೊಳ್ಳುತ್ತಿಲ್ಲ. ಆದ್ದರಿಂದ ಹಿಂದೂಗಳು ಉದ್ರಿಕ್ತರಾಗಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದರೆ, ಈ ಬಗ್ಗೆ ವಿಚಾರ ಆಗಬೇಕು ! |