ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಿದ್ದು ಅಲ್ಲಿ ವಾಸಿಸುವ ಎಲ್ಲಾ ಜನರು ಭಾರತೀಯರು ! – ಕೇಂದ್ರ ಗೃಹ ಸಚಿವ ಅಮಿತ ಶಹಾ

ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರು ಸಿಎಎ ಕಾನೂನಿನ ಕುರಿತು ಹೇಳಿಕೆ !

ನವ ದೆಹಲಿ – ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿ.ಎ.ಎ.), ಇದು ಧರ್ಮದ ಮೇಲೆ ಆಧಾರಿತವಾಗಿದೆ ಎಂದು ಹೇಳುತ್ತಾ ಯಾರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಅದೇ ಜನರು ‘ಮುಸ್ಲಿಂ ಪರ್ಸನಲ್ ಲಾ’ ಅಂತಹ ಕಾನೂನಿನ ಬೆಂಬಲಿಸುತ್ತಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಿದ್ದು ಅಲ್ಲಿ ವಾಸಿಸುವ ಎಲ್ಲಾ ಜನರು ಭಾರತೀಯರಾಗಿದ್ದಾರೆ; ಅವರು ಹಿಂದೂಗಳಾಗಿರಲಿ ಅಥವಾ ಮುಸಲ್ಮಾನರಾಗಲಿ, ಎಂದು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರು ಈ ಕಾನೂನನ್ನು ವಿರೋಧಿಸುವವರನ್ನು ಟೀಕಿಸಿದರು. ಅವರು ಇಲ್ಲಿ ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು .

ಚುನಾವಣೆ ಬಾಂಡ್ ಯೋಜನೆ ರದ್ದುಪಡಿಸಿದ ನಂತರ ಕಪ್ಪು ಹಣ ಹಿಂತಿರುಗಿ ಬರುವ ಭಯ !

ಚುನಾವಣೆ ಬಾಂಡ್ ಸಂದರ್ಭದಲ್ಲಿ ಶಹಾ ಮಾತನಾಡಿ, ಭಾರತೀಯ ರಾಜಕಾರಣದಲ್ಲಿ ಕಪ್ಪು ಹಣ ಮುಗಿಸುವುದಕ್ಕಾಗಿ ಚುನಾವಣೆ ಬಾಂಡ್ ತರಲಾಗಿತ್ತು. ಹಿಂದೆ ಕಾಂಗ್ರೆಸ್ಸಿನ ಜನರು ನಗದು ರೂಪದಲ್ಲಿ ದೇಣಗಿ ಪಡೆಯುತ್ತಿದ್ದರು. ಮುಖಂಡರು ೧ ಸಾವಿರದ ೧೦೦ ರೂಪಾಯಿ ದೆಣಗಿ ಪಡೆದ ನಂತರ ಪಕ್ಷಕ್ಕೆ ಕೇವಲ ೧೦೦ ರೂಪಾಯಿ ನೀಡುತ್ತಿದ್ದರು. ಅದರಲ್ಲಿ ೧ ಸಾವಿರ ರೂಪಾಯಿ ಅವರ ಮನೆಯಲ್ಲಿ ಇಡುತ್ತಿದ್ದರು. ಈ ಭ್ರಷ್ಟಾಚಾರ ನಾವು ಚುನಾವಣೆ ಬಾಂಡ್ ಮೂಲಕ ಮುಗಿಸಿದೆವು. ಬಾಂಡ್ ಯೋಜನೆ ಕೊನೆಗೊಳಿಸಲು ಸರ್ವೋಚ್ಚ ನ್ಯಾಯಾಲಯದ ನಿರ್ಣಯವನ್ನು ನಾನು ಗೌರವಿಸುತ್ತೇನೆ. ಆದರೂ ಕೂಡ ನನಗೆ ಭಯವಿದೆ, ಇದರಿಂದ ಕಪ್ಪು ಹಣ ಮತ್ತೆ ಹಿಂತಿರುಗಿ ಬರುವುದು ಎಂಬ ಭಯವಾಗುತ್ತದೆ. ಬಾಂಡನಿಂದ ಎಲ್ಲಕ್ಕಿಂತ ಹೆಚ್ಚು ಲಾಭ ಭಾಜಪಗೆ ಆಗಿದೆ ಎಂದು ತಿಳಿದಿದ್ದಾರೆ. ಪಕ್ಷಕ್ಕೆ ಅಂದಾಜು ೬ ಸಾವಿರ ಕೋಟಿ ರೂಪಾಯಿ ದೊರೆತಿದೆ. ಒಟ್ಟು ಬಾಂಡ್ (ಎಲ್ಲಾ ಪಕ್ಷದ ಸೇರಿ) ೨೦ ಸಾವಿರ ಕೋಟಿ ರೂಪಾಯಿ ಇದೆ. ಹಾಗಾದರೆ ೧೪ ಸಾವಿರ ಕೋಟಿ ರೂಪಾಯಿ ಬಾಂಡ್ ಎಲ್ಲಿಗೆ ಹೋಯಿತು ? ಎಂದು ಅವರು ಪ್ರಶ್ನೆ ಕೇಳಿದರು.