|
ಬೆಂಗಳೂರು (ಕರ್ನಾಟಕ) – ರಾಷ್ಟ್ರೀಯ ಬಾಲಾ ಅಧಿಕಾರ ರಕ್ಷಣಾ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಿಯಂಕ ಕಾನೂನಗೊ ಇವರು ನಗರದ ಒಂದು ಅಕ್ರಮ ಅನಾಥಾಶ್ರಮದ ಮೇಲೆ ದಾಳಿ ನಡೆಸಿದರು. ಅಲ್ಲಿ ಅವರಿಗೆ ೨೦ ಹುಡುಗಿಯರು ಸಿಕ್ಕಿದ್ದು, ಅವರನ್ನು ಗಲ್ಫ್ ದೇಶದಲ್ಲಿ ವಿವಾಹಕ್ಕಾಗಿ ಕಳ್ಳ ಸಾಗಾಣಿಕೆ ಮಾಡಲಾಗುವುದು ಎಂದು ಶಂಕಿಸಲಾಗಿದೆ. ಶ್ರೀ ಕಾನೂನಗೊ ಇವರು ಎಕ್ಸ್ ಮಾಧ್ಯಮದಲ್ಲಿ ಈ ದಾಳಿಯ ವಿಡಿಯೋ ಪ್ರಸಾರ ಮಾಡಿದ್ದು, “ಈ ಹುಡುಗಿಯರು ಹೇಳುವುದೇನೆಂದರೆ, ಅನಾಥಾಶ್ರಮದ ಉಸ್ತುವಾರಿ ನೋಡಿಕೊಳ್ಳಲು ಸಲಮಾ ಎಂಬ ಮಹಿಳೆ ಕುವೈತ್ ನಲ್ಲಿ ಹುಡುಗಿಯರ ವಿವಾಹ ನಡೆಸುತ್ತಾರೆ. ಹುಡುಗಿಯರನ್ನು ಯಾವಾಗ ಆಯೋಗದ ಎದುರು ಉಪಸ್ಥಿತಗೊಳಿಸಲಾಯಿತು ಆಗ ಸಲ್ಮಾ ಮತ್ತು ಆಕೆಯ ಪ್ರಮುಖ ಸಮೀರ ಇಬ್ಬರು ಸೇರಿ ರೌಡಿಗಳನ್ನು ಕರೆಸಿದರು. ಆ ರೌಡಿಗಳು ಬಂದು ಜಗಳವಾಡಲು ಆರಂಭಿಸಿದರು. ಪೊಲೀಸರ ಮಧ್ಯಸ್ಥಿಕೆಯಿಂದ ರೌಡಿಗಳನ್ನು ಹಿಡಿತಕ್ಕೆ ತರಲಾಯಿತು. ಆದರೆ, ಅವರಲ್ಲಿನ ಒಬ್ಬನು ಯಾರಿಗೋ ಕರೆ ಮಾಡಿ ಮಸೀದಿಯಿಂದ ತಮ್ಮ ಗುಂಪನ್ನು ಕರೆಸಲು ಹೇಳಿದನು. ಪೊಲೀಸರ ಹೇಳಿಕೆಯ ಮೇರೆಗೆ ಮತ್ತು ನಮ್ಮ ಮಹಿಳಾ ಅಧಿಕಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಪೊಲೀಸ್ ಠಾಣೆಗೆ ಹೋದೆವು.” ಎಂದು ತಿಳಿಸಿದರು. ಮುಸ್ಲಿಮರ ಓಲೈಕೆ ಮಾಡುವ ಕರ್ನಾಟಕ ಸರಕಾರ ಅಪರಾಧಿಗಳ ಮುಂದೆ ಈ ರೀತಿ ಮಂಡಿ ಊರುತ್ತಿದೆ. ಈ ಅನಾಥಾಶ್ರಮದಲ್ಲಿ ಅನಾಥ ಮಕ್ಕಳ ಜೊತೆ ೨೦ ಹುಡುಗಿಯರಿದ್ದರು. ಈ ಹುಡುಗಿಯರನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಸಂಪೂರ್ಣ ಬಾಲಗೃಹದಲ್ಲಿ ಒಂದೇ ಒಂದು ಕಿಟಕಿ ಅಥವಾ ನೈಸರ್ಗಿಕ ಪ್ರಕಾಶದ ವ್ಯವಸ್ಥೆ ಕೂಡ ಇಲ್ಲ. ಹುಡುಗಿಯರನ್ನು ಸಂಪೂರ್ಣವಾಗಿ ಬಂದಿಗಳ ರೀತಿಯಲ್ಲಿರಿಸಲಾಗಿದೆ. ಇಲ್ಲಿಗೆ ಬರುವ ಮುನ್ನ ಕೆಲವು ಹುಡುಗಿಯರು ಶಾಲೆಗೆ ಹೋಗುತ್ತಿದ್ದರು; ಆದರೆ ಅವರ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿದೆ.
#WATCH | Bengaluru, Karnataka: After visiting an orphanage, NCPCR Chairperson Priyank Kanoongo says, “It is an illegal orphanage in Ashwath Nagar, Amarjyoti layout, Bengaluru……We were inquiring about an illegal orphanage which was running there. 20 girl-child were kept, some… pic.twitter.com/amIDBTFUF6
— ANI (@ANI) March 15, 2024
ಕಳೆದ ವರ್ಷ ಕೂಡ ಬೆಂಗಳೂರಿನ ಒಂದು ಅನಾಥಾಶ್ರಮದ ಮೇಲೆ ದಾಳಿ ನಡೆಸಿದ ನಂತರ ಆಯೋಗದ ವಿರುದ್ಧವೇ ದೂರು ದಾಖಲಿಸಲಾಗಿತ್ತು!
ಆಶ್ಚರ್ಯವೆಂದರೆ ೨೩ ನವಂಬರ್ ೨೦೨೩ ರಂದು ಕರ್ನಾಟಕ ಸರಕಾರವು ಪ್ರಿಯಾಂಕ ಕಾನೂನುಗೋ ಇವರ ವಿರುದ್ಧವೇ ವಾರಂಟ್ ಜಾರಿ ಮಾಡಿತ್ತು. ಈ ಹಿಂದೆ ಬೆಂಗಳೂರಿನಲ್ಲಿನ ಒಂದು ಅನಾಥಾಶ್ರಮಕ್ಕೆ ಭೇಟಿ ನೀಡಿದ್ದ ಪ್ರಿಯಾಂಕ ಕಾನೂನುಗೋ ಅವರು ಅಲ್ಲಿನ ಮಕ್ಕಳ ಸ್ಥಿತಿಯು ತಾಲಿಬಾನಿ ಜೀವನ ಶೈಲಿಯಂತಿದೆ ಎಂದು ಟೀಕಿಸಿದ್ದರು. ಅದರಿಂದ ಆಕ್ರೋಶಗೊಂಡ ಕರ್ನಾಟಕ ಸರಕಾರ ದೂರಿನ ಮೇರೆಗೆ ವಾರಂಟ್ ಜಾರಿ ಮಾಡಿತ್ತು.
ಸಂಪಾದಕೀಯ ನಿಲುವುಕಾಂಗ್ರೆಸ್ಸಿನ ರಾಜ್ಯದಲ್ಲಿ ಇದಕ್ಕಿಂತ ಬೇರೆ ಏನು ಘಟಿಸಲು ಸಾಧ್ಯ ? ರಾಷ್ಟ್ರೀಯ ಬಾಲ ಅಧಿಕಾರ ರಕ್ಷಣಾ ಆಯೋಗಕ್ಕೆ ಸಿಗುವ ಇಂತಹ ಮಾಹಿತಿಯು ರಾಜ್ಯದಲ್ಲಿನ ಪೊಲೀಸರಿಗೆ ಏಕೆ ಸಿಗುತ್ತಿಲ್ಲ? ಅಥವಾ ಮಾಹಿತಿ ಸಿಕ್ಕರೂ ಕೂಡ ಅನಾಥಾಶ್ರಮವನ್ನು ಮುಸಲ್ಮಾನರು ನಡೆಸುತ್ತಿರುವುದರಿಂದ ಅದನ್ನು ನಿರ್ಲಕ್ಷಿಸಲಾಗುತ್ತಿದೆಯೇ ? |