Extended Ban on Terror Organization: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಯಾಸಿನ ಮಲಿಕನ ಸಂಘಟನೆಯ ಮೇಲಿನ ನಿಷೇಧದ ಅವಧಿ ಹೆಚ್ಚಳ !

ಶ್ರೀನಗರ – ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ ಮಲಿಕ್ ಅವರ ‘ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್’ ಈ ಸಂಘಟನೆಯ ಮೇಲೆ ಹೇರಲಾಗಿರುವ ನಿಷೇಧವನ್ನು ಕೇಂದ್ರ ಸರಕಾರ ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದೆ. ಕೇಂದ್ರ ಗೃಹ ಸಚಿವಾಲಯವು 2019 ರಲ್ಲಿ ಈ ಸಂಘಟನೆಯ ಮೇಲೆ ನಿಷೇಧವನ್ನು ಹೇರಿತ್ತು.
ಈ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಪ್ರೋತ್ಸಾಹಿಸುವ ಚಟುವಟಿಕೆಗಳಲ್ಲಿ ತೊಡಗಿತ್ತು.

ದೇಶದ ಅಖಂಡತೆಗೆ ಸವಾಲು ನೀಡುವವರು ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ! – ಅಮಿತ್ ಶಾಹ

ಈ ವಿಷಯದಲ್ಲಿ ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ಮಾತನಾಡಿ, ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಸವಾಲು ಹಾಕುವವರು ಕಠಿಣ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವ ನಾಗರಿಕರು ಮತ್ತು ಸಂಘಟನೆಗಳ ಬಗ್ಗೆ ಸರಕಾರ ಕಟ್ಟುನಿಟ್ಟಾಗಿರುತ್ತದೆ.

ಈ 5 ಸಂಘಟನೆಗಳ ಮೇಲೆ ನಿಷೇಧ !

ಕೇಂದ್ರ ಗೃಹ ಸಚಿವಾಲಯವು ‘ಜೆ-ಕೆ ಪೀಪಲ್ಸ್ ಲೀಗ’, ‘ಜೆ.ಕೆ.ಪಿ.ಎಲ್. (ಮುಖ್ತಾರ ಅಹಮದ ವಾಝಾ)’, ‘ಜೆ.ಕೆ.ಪಿ.ಎಲ್. (ಬಶೀರ ಅಹಮದ ತೋಟಾ)’, ‘ಜೆ.ಕೆ.ಪಿ.ಎಲ್. (ಗುಲಾಮ ಮೊಹಮ್ಮದ ಖಾನ)’ ಮತ್ತು ‘ಜೆ.ಕೆ.ಪಿ.ಎಲ್. (ಅಜೀಜ ಶೇಖ)’ ಈ 5 ಸಂಘಟನೆಗಳ ಮೇಲೆ ನಿಷೇಧ ಹೇರಿದೆ.