ನವ ದೆಹಲಿ – ಸೇನೆಯ ಸಮವಸ್ತ್ರ ಮಾರುತ್ತಿದ್ದ ಒಬ್ಬ ಯುವಕನನ್ನು ಬೇಹುಗಾರಿಕೆ ಮಾಡಿದ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ. ಆನಂದರಾಜ ಸಿಂಗ್ (ವಯಸ್ಸು ೨೨) ಎಂದು ಅವನ ಹೆಸರಿದ್ದು ರಾಜಾಸ್ಥಾನದ ಗಂಗಾನಗರ ಜಿಲ್ಲೆಯ ನಿವಾಸಿಯಾಗಿದ್ದಾನೆ. ಅವನು ಸೇನೆಯ ಸಮವಸ್ತ್ರ ಮಾರಾಟ ಮಾಡುವ ವ್ಯಾಪಾರ ಮಾಡುತ್ತಿದ್ದನು. ಗಂಗಾನಗರ ಜಿಲ್ಲೆಯ ‘ಸೂರತಗಢ ಸೇನಾ ಕಂಟೋನ್‌ಮೆಂಟ್‘ನ ಹೊರಗೆ ಸೇನೆಯ ಸಮವಸ್ತ್ರದ ಅವನ ಅಂಗಡಿ ಇದೆ. ಕಳೆದ ಕೆಲವು ದಿನಗಳಿಂದ ಅವನ ಚಲನವಲನಗಳು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನಲೆಯಲ್ಲಿ ಪೋಲೀಸರು ಆತನ ವಿಚಾರಣೆ ನಡೆಸಿದಾಗ ಅವನು ಸಾಮಾಜಿಕ ಜಾಲತಾಣಗಳ ಮೂಲಕ ಐ.ಎಸ್.ಐ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ೩ ಮಹಿಳೆಯರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮಾಹಿತಿ ತಿಳಿದುಬಂದಿದೆ. ಅವನು ಈ ೩ ಮಹಿಳೆಯರಿಗೆ ಸೇನೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾನೆಂದು ಪೋಲೀಸರು ಶಂಕಿಸಿದ್ದಾರೆ. ಈ ಪ್ರಕರಣದಲ್ಲಿ ಪೋಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Military uniforms seller turns out to be Pakistan’s spy
👉 Such traitors should be declared as terrorists. Their properties should be seized and they should be put to life imprisonment so that no one would ever dare to be involved against the nation#Pakistan pic.twitter.com/jlPs8fKo8G
— Sanatan Prabhat (@SanatanPrabhat) March 16, 2024
ಸಂಪಾದಕೀಯ ನಿಲುವುಇಂತಹವರನ್ನು ‘ದೇಶದ್ರೋಹಿ‘ ಎಂದು ಘೋಷಿಸಿ ಅವರ ಎಲ್ಲಾ ಆಸ್ತಿಯನ್ನು ವಶಕ್ಕೆ ಪಡೆದು ಜೀವಾವಧಿ ಶಿಕ್ಷೆ ವಿಧಿಸಬೇಕು. ಆಗಮಾತ್ರ ಅಂತಹ ಕೃತ್ಯವನ್ನು ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ ! |