Petition in Supreme Court: ಸಿ.ಎ.ಎ.(ಪೌರತ್ವ ತಿದ್ದುಪಡಿ ಕಾಯ್ದೆ) ವಿರುದ್ಧ ಸವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋದ ಅಸದುದ್ದೀನ್ ಓವೈಸಿ !

ಎಂ.ಐ.ಎಂ.ನ ಮುಖಂಡ ಆಸದ್ದುದ್ದಿನ್ ಓವೈಸಿ

ನವ ದೆಹಲಿ – ಕೇಂದ್ರ ಸರಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ಎಂ.ಐ.ಎಂ. ನ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಓವೈಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ‘ಈ ಕಾನೂನು ತಾರತಮ್ಯ ಸೃಷ್ಟಿಸುತ್ತಿರುವುದರಿಂದ ಇದನ್ನು ನಿಷೇಧಿಸಬೇಕು‘, ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಈ ಕಾಯ್ದೆಯ ವಿರುದ್ಧ ‘ಇಂಡಿಯನ್ ಯೂನಿಯನ್ ಮುಸ್ಲೀಂ ಲೀಗ್‘ನ ಅರ್ಜಿ ಸೇರಿದಂತೆ ೨೦೦ ಕ್ಕೂ ಹೆಚ್ಚು ಅರ್ಜಿಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿವೆ.