ಕೇರಳದಲ್ಲಿ , ವಕೀಲರ ಗುಂಪೊಂದು 100ಕ್ಕೂ ಹೆಚ್ಚು ದೇವಾಲಯಗಳಿಗಾಗಿ ಕಾನೂನು ಹೋರಾಟ ನಡೆಸುತ್ತಿದೆ !

ಕಳೆದುಕೊಂಡಿರುವ ಹಿಂದೂ ದೇವಸ್ಥಾನಗಳ ಆಸ್ತಿ ಮರಳಿ ಪಡೆಯಲು ಪ್ರಯತ್ನ !

ನ್ಯಾಯವಾದಿ ಪ್ರಥೇಶ್ ವಿಶ್ವನಾಥನ್ ಮತ್ತು ನ್ಯಾಯವಾದಿ ಕೃಷ್ಣಾ ರಾಜ

ತಿರುವನಂತಪುರಂ (ಕೇರಳ) – ಇವರ ಮುಖಂಡತ್ವದಲ್ಲಿ ನ್ಯಾಯವಾದಿಗಳ ಗುಂಪೊಂದು ಕೇರಳದ 100 ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗಾಗಿ ಕಾನೂನು ಹೋರಾಟವನ್ನು ನಡೆಸುತ್ತಿದೆ. ಹಿಂದೂ ದೇವಸ್ಥಾನಗಳು ಕಳೆದುಕೊಂಡಿರುವ ಆಸ್ತಿಯನ್ನು ಮರಳಿ ಪಡೆಯಲು ಇತ್ತೀಚೆಗೆ ಕೇರಳದ ವಿವಿಧ ನ್ಯಾಯಾಲಯಗಳಲ್ಲಿ ನೂರಾರು ಅರ್ಜಿಗಳು ದಾಖಲಾಗಿವೆ. ಈ ಅರ್ಜಿಗಳು ಈ ವಕೀಲರ ಗುಂಪಿನ ಕಷ್ಟದ ಫಲವಾಗಿದೆ. ಈ ಗುಂಪು ಹಿಂದೂ ದೇವಸ್ಥಾನಗಳ ಮೇಲೆ ಅತಿಕ್ರಮಣ ಮಾಡುವ ಜನರು ಹಾಗೆಯೇ ಸಂಬಂಧಿಸಿದ ಟ್ರಸ್ಟ ಮತ್ತು ಸಂಸ್ಥೆಯ ವಿರುದ್ಧ 100 ಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಕೈಗೆತ್ತಿಕೊಂಡಿದೆ. ಈ ಗುಂಪಿನ ಪ್ರಯತ್ನಗಳಿಂದ `ಸೆಂಟ ಫಿಲೋಮಿನಾ ಜನಸಂಗಮ’ ಈ ಕ್ರೈಸ್ತ ಮಿಶನರಿ ಸಂಸ್ಥೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ; ಕಾರಣ ಈ ಸಂಸ್ಥೆಯು ಕೊನ್ನಮಕ್ಕುಲಂಗಾರಾ ಭಗವತಿ ದೇವಸ್ಥಾನದ ಭೂಮಿಯನ್ನು ವಂಚನೆಯಿಂದ ಕಬಳಿಸಿತ್ತು ಮತ್ತು ಈಗ ಈ ಗುಂಪಿನ ಪ್ರಯತ್ನದಿಂದ ಸಂಬಂಧಿಸಿದ ದೋಷಿಗಳನ್ನು ಬಂಧಿಸಲಾಗಿದೆ.

ಕೇರಳದ ನ್ಯಾಯವಾದಿಗಳ ಈ ಗುಂಪಿನ ಮುಖಂಡತ್ವವನ್ನು ವಹಿಸಿಕೊಂಡಿರುವ ಕೃಷ್ಣಾ ರಾಜ ಇವರು ತಮ್ಮ ಹಿಂದುತ್ವದ ವಿಚಾರಸರಣಿಗಾಗಿ ಗುರುತಿಸಲ್ಪಡುತ್ತಾರೆ. ಅವರ ಗುಂಪಿನಲ್ಲಿ ಪ್ರತೀಶ ವಿಶ್ವನಾಥನ್ ಇವರಂತಹ ಸಹಕಾರಿ ನ್ಯಾಯವಾದಿ ಮತ್ತು ಇತರೆ ಕೆಲವು ಹಿಂದುತ್ವವಾದಿ ನ್ಯಾಯವಾದಿಗಳು ಸೇರಿದ್ದಾರೆ. ಈ ಜನರು ಅವರ ಅಭಿಯಾನಕ್ಕಾಗಿ 2018ರ ಮಧ್ಯಭಾಗದಲ್ಲಿ ‘ಸೇವ್ ಡೈಟೀಸ’ ಹೆಸರಿನ ಸಂಸ್ಥೆಯನ್ನು ಆರಂಭಿಸಿದೆ. ಇದರಲ್ಲಿ ನ್ಯಾಯವಾದಿ ಕೃಷ್ಣಾ ರಾಜ ಇವರಲ್ಲದೇ, ಬಿ.ಎನ್. ಶಿವಶಂಕರ, ಪ್ರತೀಶ ವಿಶ್ವನಾಥನ್, ಕೆ.ಎ. ಬಾಲನ, ಈ.ಎಸ್. ಸೋನಿ, ಕುಮಾರಿ ಸಂಗೀತಾ ಎಸ್. ನಾಯರ ಮತ್ತು ರಾಜೇಶ ವೈ. ಆರ್. ಇವರೂ ಸೇರಿದ್ದಾರೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಆಸ್ತಿಯ ರಕ್ಷಣೆಯ ಧರ್ಮಕಾರ್ಯ ಮಾಡುವ ಕೇರಳದ ನ್ಯಾಯವಾದಿಗಳ ಗುಂಪಿನವರಿಗೆ ಅಭಿನಂದನೆಗಳು ! ಇಂತಹ ಗುಂಪುಗಳೇ ಹಿಂದೂ ಧರ್ಮದ ನಿಜವಾದ ಶಕ್ತಿಯಾಗಿದ್ದಾರೆ ! ಸಮಸ್ತ ಹಿಂದೂಗಳು ಅವರ ಕಾರ್ಯದಲ್ಲಿ ಸಹಭಾಗಿಯಾಗಿ ಅವರನ್ನು ಬೆಂಬಲಿಸಬೇಕು !