ಜಗತ್ತಿನಲ್ಲಿನ ಸಮಸ್ಯೆಗಳು ಕಟ್ಟರವಾದಿ ಮತಾಂಧರಿಂದ ನಿರ್ಮಾಣವಾಗುತ್ತವೆ ವಿನಃ ಶ್ರದ್ಧೆಯಿಂದ ಅಲ್ಲ ! – ದಾಜಿ, ‘ಹಾರ್ಟಫುಲ್ ನೆಸ್’

ಭಾಗ್ಯನಗರ (ತೆಲಂಗಾಣ)ದಲ್ಲಿ ‘ಗ್ಲೋಬಲ್ ಸ್ಪಿರಿಚ್ಯುಯಾಲಿಟಿ ಮಹೋತ್ಸವ’ವು ಉತ್ಸಾಹಪೂರ್ಣ ವಾತಾವರಣದಲ್ಲಿ ಉದ್ಘಾಟನೆ !

ಭಾಗ್ಯನಗರ (ತೆಲಂಗಾಣ) – ಸಂಕುಚಿತ ಶ್ರದ್ಧೆ ಮತ್ತು ಪಂಥ ಜನರಲ್ಲಿ ಬಿರುಕು ಮೂಡಿಸುತ್ತಿರುವುದು ಜಗತ್ತು ನೋಡುತ್ತಿದೆ. ನಿಜವೆಂದರೆ ನಮ್ಮ ಮೂಲ ಶ್ರದ್ಧೆಗೆ ದೂಷಿಸಿದರೆ ನಡೆಯುವುದಿಲ್ಲ. ಸಮಸ್ಯೆಗಳು ಕಟ್ಟರವಾದಿ ಮತಾಂಧರಿಂದ ನಿರ್ಮಾಣವಾಗುತ್ತಿದೆ ವಿನಃ ಶ್ರದ್ಧೆಯಿಂದ ಅಲ್ಲ. ನಾವು ಪರಸ್ಪರರೊಂದಿಗೆ ಸೇರಬೇಕು. ಯಾವಾಗ ನಾವು ಪರಸ್ಪರರ ಜೊತೆಗೆ ಜೋಡಣೆ ಆಗುವೆವು ಆಗ ದೇವರ ಜೊತೆಗೆ ಮತ್ತೆ ಜೋಡಣೆ ಆಗಬಹುದು, ಎಂದು ‘ಹಾರ್ಟಫುಲನೆಸ್’ ಈ ಆಧ್ಯಾತ್ಮಿಕ ಸಂಸ್ಥೆಯ ಮಾರ್ಗದರ್ಶಕ ದಾಜಿ (ಕಮಲೇಶಜಿ ಪಟೇಲ್) ಇವರು ಹೇಳಿದರು. ಅವರು ಭಾಗ್ಯನಗರ ಹತ್ತಿರ ಇರುವ ಚೆಗುರು ಇಲ್ಲಿ ‘ಕಾನ್ಹಾ ಶಾಂತಿ ವನಮ್’ನಲ್ಲಿ ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಮತ್ತು ‘ಹಾರ್ಟಫುಲ್ ನೆಸ್’ ಜಂಟಿಯಾಗಿ ಆಯೋಜಿಸಿದ್ದ ಅಂತರಾಷ್ಟ್ರೀಯ ಆಧ್ಯಾತ್ಮ ಮಹೋತ್ಸವ (ಗ್ಲೋಬಲ್ ಸ್ಪಿರಿಚುವಲಿಟಿ ಮಹೋತ್ಸವದ) ಉದ್ಘಾಟನೆಯ ಸಮಯದಲ್ಲಿ ಮಾತನಾಡುತ್ತಿದ್ದರು.

‘ಹಾರ್ಟಫುಲನೆಸ್’ ಈ ಆಧ್ಯಾತ್ಮಿಕ ಸಂಸ್ಥೆಯ ಮಾರ್ಗದರ್ಶಕ ದಾಜಿ (ಕಮಲೇಶಜಿ ಪಟೇಲ್)

ಈ ಸಮಯದಲ್ಲಿ ವೇದಿಕೆಯಲ್ಲಿ ಸಾಂಸ್ಕೃತಿಕ ಸಚಿವಾಲಯದ ಹೆಚ್ಚುವರಿ ಸಚಿವರು ಮತ್ತು ಆರ್ಥಿಕ ಸಲಹೆಗಾರ ರಂಜನ ಚೋಪ್ರಾ, ‘ಇಸ್ಕಾನ್’ನ ಗೌಡ ಗೋಪಾಲ ದಾಸ, ‘ರಾಮಕೃಷ್ಣ ಮಿಷನ್’ನ ಸ್ವಾಮಿ ಆತ್ಮಪ್ರಿಯಾನಂದಜಿ, ‘ಬ್ರಹ್ಮಕುಮಾರಿ’ ಸಂಪ್ರದಾಯದ ಸಹೋದರಿ ಉಷಾ ಬಹನ ಮತ್ತು ಪ.ಪೂ. ಚಿನ್ನ ಜಿಯಾರ್ ಸ್ವಾಮೀಜಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ೩೦೦ ಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಸಂಘಟನೆಯ ಸಂತರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.

ದಾಜಿ ಮಾತು ಮುಂದುವರಿಸುತ್ತಾ, ನಮಗೆ ನಮ್ಮ ಅಂತಃಕರಣದಲ್ಲಿ ಉತ್ತರ ಹುಡುಕುವ ಅವಶ್ಯಕತೆ ಇದೆ. ಗೀತೆಯಲ್ಲಿ ಮನಸ್ಸಿನ ಬಗ್ಗೆ ೧೦೦ ಕ್ಕಿಂತಲೂ ಹೆಚ್ಚಿನ ಸಂದರ್ಭಗಳು ಇವೆ. ಪ್ರತಿಯೊಂದು ಪಂಥ ಎರಡು ಶಸ್ತ್ರಗಳು ಉಪಯೋಗಿಸುತ್ತದೆ. ನರಕದ ಭಯ ಮತ್ತು ಸ್ವರ್ಗದ ಮೋಹ ! ನಿಜವಾದ ಆಧ್ಯಾತ್ಮಿಕ ಸಾಧಕ ಇದರಲ್ಲಿ ಸಿಲುಕುವುದಿಲ್ಲ. ದೇವರು ಇದ್ದಾನೆ ಅಥವಾ ಇಲ್ಲ, ಇದು ಕೂಡ ತಿಳಿದಿಲ್ಲ ಎಂದು ಸಾಧಕನು ಹೇಳುತ್ತಾನೆ, ಅವನಿಗೆ ಅವನ ಅಂತಃಕರಣದಲ್ಲಿ ದೇವರ ಅಸ್ತಿತ್ವದ ಅನುಭೂತಿ ಪಡೆಯುವುದು ಇರುತ್ತದೆ.

ಭಯೋತ್ಪಾದನೆ ನಾಶವಾಗದೆ ಸಮಾಜದ ಆಂತರಿಕ ಶಾಂತಿಯತ್ತ ವಾಲಲು ಸಾಧ್ಯವಿಲ್ಲ ! – ಪ.ಪೂ. ಚಿನ್ನಾಜಿಯರ್ ಸ್ವಾಮೀಜಿ

ಪ.ಪೂ. ಚಿನ್ನಾಜಿಯರ್ ಸ್ವಾಮೀಜಿ

ಇಂದು ಜಗತ್ತಿನಾದ್ಯಂತ ಇರುವ ಜನರು ಭಯೋತ್ಪಾದನೆಯ ಕರಿನೆರಳಿನಲ್ಲಿ ಬದುಕುತ್ತಿದ್ದಾರೆ. ಭಯೋತ್ಪಾದನೆ ಸಸಿಯಾಗಿದ್ದರೆ ಆಗ ನಾವು ಆಂತರಿಕ ಶಾಂತಿಯ ಕಡೆಗೆ ಗಮನ ನೀಡಬಹುದಾಗಿತ್ತು; ಆದರೆ ಇಂದು ಭಯೋತ್ಪಾದನೆ ಎಲ್ಲೆಡೆ ಬೃಹತ್ ಪ್ರಮಾಣದಲ್ಲಿ ಹರಡಿದೆ. ಇಂತಹ ಸಮಯದಲ್ಲಿ ರಾಜ್ಯಅಧಿಕಾರ ಮತ್ತು ಸರಕಾರ ಇವರು ಈ ಭಯೋತ್ಪಾದನೆಯನ್ನು ಮೂಲ ಸಹಿತ ನಾಶ ಮಾಡುವುದಕ್ಕಾಗಿ ಕಠಿಣ ಉಪಾಯ ಹುಡುಕಬೇಕಾಗಿದೆ. ಅದು ಆಯಿತೆಂದರೆ ನಾವು ಆಂತರಿಕ ಶಾಂತಿಯ ಕಡೆಗೆ ವಾಲಬಹುದು. ಇಲ್ಲವಾದರೆ ಒತ್ತಡ ಮತ್ತು ಭಯೋತ್ಪಾದನೆ ಇರುವಾಗ ನಾವು ಆಂತರಿಕ ಸಾಧನೆಯ ಕಡೆಗೆ ಹೇಗೆ ಗಮನ ಹರಿಸಲು ಸಾಧ್ಯ? ಸಮಾಜದಲ್ಲಿ ಸುರಕ್ಷಿತತೆ ನೀಡಲು ಸಾಧ್ಯವಾಗಬೇಕು. ಭಾರತ ಭೂಮಿ ಇದು ಶ್ರೇಷ್ಠ ಸಂಸ್ಕೃತಿ ಮತ್ತು ಸಭ್ಯತೆಯ ಭೂಮಿಯಾಗಿದೆ. ಇದು ಜಗತ್ತಿನಲ್ಲಿನ ಎಲ್ಲಾ ಉಪಾಸನಾ ಪದ್ಧತಿಗಳು ಸ್ವೀಕರಿಸಿದೆ.

‘ನಾವು ನಮ್ಮ ಉಪವಾಸನೆಯ ಮೇಲೆ ಶ್ರದ್ಧೆ ಇಡಬೇಕು ಮತ್ತು ಜಗತ್ತಿನಲ್ಲಿನ ಇತರ ವ್ಯವಸ್ಥೆಯ ಕಡೆಗೆ ಗೌರವದಿಂದ ನೋಡಬೇಕು’, ಇದರ ಬಗ್ಗೆ ಭಾರತೀಯರಿಗೆ ವಿಶ್ವಾಸವಿದೆ. ಸುದೈವದಿಂದ ಇಂದು ಅಂತಹ ಸರಕಾರ ಭಾರತಕ್ಕೆ ಲಭಿಸಿದೆ. ಇಂದು ಸರಕಾರ ಸಮಾಜಕ್ಕೆ ಎಲ್ಲಾ ರೀತಿಯಲ್ಲಿ ಸುರಕ್ಷಿತತೆ ನೀಡುತ್ತಿದೆ. ಜೀವನದಲ್ಲಿ ಸುರಕ್ಷಿತತೆ ನಿರ್ಮಾಣವಾಗಬೇಕು, ಇಲ್ಲವಾದರೆ ಸಮಾಜ ಆಮೀಷಗಳಿಗೆ ಬಲಿಯಾಗುತ್ತಾನೆ. ಇತ್ತೀಚಿನ ಸರಕಾರದಿಂದ ನಾವು ಆಂತರಿಕ ಸಾಧನೆಯ ಕಡೆಗೆ ಗಮನಹರಿಸಲು ಸಾಧ್ಯವಾಗಿದೆ. ಆಧ್ಯಾತ್ಮದ ಎಷ್ಟೊಂದು ಪ್ರಕಾರವಿದೆ. ನಾವು ಪ್ರತಿಯೊಂದು ವಿಚಾರಧಾರೆಯನ್ನು ಗೌರವಿಸಬೇಕು. ನಮ್ಮ ಅಂತಿಮ ಧ್ಯೇಯ ಆಂತರಿಕ ಶಾಂತಿಯಿಂದ ಜಗತ್ತಿನ ಶಾಂತಿಯವರೆಗೆ ಹೋಗುವುದು ಹೀಗೆ ಇರಬೇಕು.” ಎಂದು ಹೇಳಿದರು.

ಯಾವ ವಿಷಯ ನಾವು ಬದಲಾಯಿಸಲು ಸಾಧ್ಯವಿಲ್ಲ ಅದಕ್ಕಾಗಿ ಶಕ್ತಿ ಖರ್ಚು ಮಾಡುವುದು ಹಿತವಲ್ಲ ! – ಗೌರ್ ಗೋಪಾಲ ದಾಸ

ಗೌರ್ ಗೋಪಾಲ ದಾಸ

ನಮ್ಮ ಎದುರ ಇರುವ ಸವಾಲಯಗಳು, ಸಮಸ್ಯೆಗಳು ಮುಂತಾದವುಗಳಿಂದ ನಮ್ಮ ಆಂತರಿಕ ಶಾಂತಿಗೆ ಆಘಾತವಾಗುತ್ತದೆ. ‘ಸಮಸ್ಯೆಯ ನಿರಾಕರಣೆ ಎಂದರೆ ಶಾಂತಿ’, ಇಂತಹ ಶಾಂತಿಯ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ. ಮೂಲತಃ ಸಮಸ್ಯೆ ಎಂದು ಮುಗಿಯುವುದಿಲ್ಲ. ಆದ್ದರಿಂದ ನಿಮಗೆ ನಿಮ್ಮ ಶಾಂತಿಯನ್ನು ಹುಡುಕಬೇಕಾಗುತ್ತದೆ. ನಾನು ಶಾಂತವಾಗಿ ಇಲ್ಲದಿದ್ದರೆ ಜಗತ್ತು ಹೇಗೆ ಶಾಂತವಾಗುವುದು ? ಯಾವ ವಿಷಯ ನಾವು ಬದಲಿಸಲು ಸಾಧ್ಯವಿಲ್ಲ, ಅದಕ್ಕಾಗಿ ಶಕ್ತಿ ಖರ್ಚು ಮಾಡುವುದು ಹಿತವಲ್ಲ. ನೀವು ಶ್ರದ್ಧೆಯುಳ್ಳವರಾಗಿದ್ದರೆ, ಆಗ ಭಗವಂತನ ಕಡೆಗೆ ನೋಡಿ, ನೀವೇನಾದರೂ ಮೂಢನಂಬಿಕೆಯವರಾಗಿದ್ದರೆ ಬ್ರಹ್ಮಾಂಡದ ಜೊತೆಗೆ ನಿಮ್ಮನ್ನು ಜೋಡಿಸಿ. ಯಾರೊಂದಿಗಾದರೂ ತನ್ನನ್ನು ಜೋಡಿಸುವುದು ಮಹತ್ವದ್ದಾಗಿದೆ ! ಎಂದು ಹೇಳಿದರು.

ಮನುಷ್ಯನ ಆಧ್ಯಾತ್ಮಿಕ ಪ್ರತೀಕಾರ ಶಕ್ತಿ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ! – ಉಷಾ ಬಹನ, ಬ್ರಹ್ಮಕುಮಾರಿ

ಉಷಾ ಬಹನ, ಬ್ರಹ್ಮಕುಮಾರಿ

ನಾವು ಇರುವ ಸ್ಥಳದಲ್ಲಿಯೇ ಇದ್ದು ಸಮಸ್ಯೆಯಿಂದ ಸುತ್ತುವರೆದಿರುವ ಜೀವನದಲ್ಲಿಯೇ ಶಾಂತಿ ಅನುಭವಿಸಬೇಕು. ಇದಕ್ಕಾಗಿ ನಮಗೆ ನಮ್ಮಲ್ಲಿ ಆಧ್ಯಾತ್ಮಿಕ ಪ್ರಗಲ್ಭತೆ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ಅದರಿಂದ ನಾವು ಆಂತರಿಕ ಶಾಂತಿ ಅನುಭವಿಸುತ್ತೇವೆ. ಆಧ್ಯಾತ್ಮಿಕ ಪ್ರತೀಕಾರ ಶಕ್ತಿ ನಿರ್ಮಾಣವಾದರೆ ನಮ್ಮಲ್ಲಿ ಮಾನಸಿಕ ಅಥವಾ ಭಾವನಿಕ ಸ್ತರದಲ್ಲಿ ಯಾವುದೇ ಸಮಸ್ಯೆ ತೊಂದರೆ ನೀಡಲು ಸಾಧ್ಯವಿಲ್ಲ. ಭಗವದ್ಗೀತೆಯಲ್ಲಿ, ಏನೆಲ್ಲಾ ಘಟಿಸುತ್ತದೆ ಅದು ನನ್ನ ಒಳ್ಳೆಯದಕ್ಕಾಗಿಯೇ ಇರುತ್ತದೆ ಮತ್ತು ಏನು ಘಟಿಸುತ್ತದೆ ಅದು ಕೂಡ ಒಳ್ಳೆಯದೇ ಆಗಿರುತ್ತದೆ ! ಎಂದು ಹೇಳಿದೆ ! ಜೀವನವನ್ನು ಈ ದೃಷ್ಟಿಕೋನದಿಂದ ನೋಡಲು ನಾವು ಕಲಿಯಬೇಕು.’ ಎಂದು ಹೇಳಿದರು.

ಸನಾತನ ಸಂಸ್ಥೆಯೂ ಕೂಡ ಸಹಭಾಗಿ

ಕಾರ್ಯಕ್ರಮಕ್ಕೆ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಉತ್ತರಾಧಿಕಾರಿ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗಿಳ ಇವರ ವಂದನೀಯ ಉಪಸ್ಥಿತಿ ಇತ್ತು.