ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಆದೇಶ!
ನವದೆಹಲಿ – ಮನುಷ್ಯರ ಮೇಲೆ ನಾಯಿಗಳ ದಾಳಿ ಮತ್ತುಅದರ ಪರಿಣಾಮ ಸಂಭವಿಸುವ ಮೃತ್ಯು ಇದರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಕೇಂದ್ರ ಸರಕಾರವು ಒಂದು ಮಹತ್ವಪೂರ್ಣ ನಿರ್ಣಯಕ್ಕೆ ಬಂದಿದೆ. ರಾಜ್ಯ ಸರಕಾರಗಳಿಗೆ ಕೇಂದ್ರ ನೀಡಿರುವ ಈ ಆದೇಶದ ಪ್ರಕಾರ,೨೩ ನಾಯಿ ತಳಿಗಳ ಆಮದಿನ ಮೇಲೆ ನಿಷೇಧ ಹೇರಿ! ಅದರ ಜೊತೆಗೆ ಅವುಗಳ ಸಂತಾನೋತ್ಪತ್ತಿ ಮತ್ತು ಮಾರಾಟಕ್ಕೂ ಕೂಡ ನಿಷೇಧ ಹೇರಬೇಕೆಂದು ಸೂಚಿಸಿದೆ. ಈ ೨೩ ತಳಿಯಲ್ಲಿ ಬುಲಡಾಗ್, ರಾಟವೀಲರ್, ಪಿಟಬುಲ್ ,ವುಲ್ಫ್ ಡಾಗ್, ಟೆರಿಯಾರ್ ಇವುಗಳು ಪ್ರಮುಖವಾಗಿದ್ದು, ಈ ನಾಯಿಗಳ ಮಿಶ್ರತಳಿ ಮತ್ತು ಹೈಬ್ರಿಡ್ ತಳಿಗಳ ಮೇಲೆ ಕೂಡ ನಿಷೇಧ ಹೇರಬೇಕೆಂದು ಕೇಂದ್ರ ಸರಕಾರ ಸ್ಪಷ್ಟ ಪಡಿಸಿದೆ. ಪ್ರಾಣಿ ಕಲ್ಯಾಣ ಸಂಸ್ಥೆ ಮತ್ತು ತಜ್ಞರ ಸಮಿತಿಯು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ವರದಿ ಪ್ರಸ್ತುತಪಡಿಸಿತ್ತು, ಆ ವರದಿಯ ಬಳಿಕ ಕೇಂದ್ರ ಸರಕಾರವು ಮೇಲಿನ ನಿರ್ಣಯ ತೆಗೆದುಕೊಂಡಿದೆ. ಅಮೇರಿಕಾ, ಜರ್ಮನಿ, ಡೆನ್ಮಾರ್ಕ್, ಸ್ಪೇನ್, ಬ್ರಿಟನ್, ಐರ್ಲ್ಯಾಂಡ್, ರೋಮಾನಿಯ , ಕೆನಡಾ, ಇಟಲಿ ಮತ್ತು ಫ್ರಾನ್ಸ್ ಇವುಗಳ ಸಹಿತ ೪೧ ಅನ್ಯ ದೇಶಗಳಲ್ಲಿ ಪಿಟಬುಲ್ ತಳಿಯ ಮೇಲೆ ನಿಷೇದ ಹೇರಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಾಯಿಯಿಂದ ನಡೆದಿರುವ ಕೆಲ ದಾಳಿಗಳು !
ಮಾರ್ಚ್ ೧೧.೨೦೨೪ : ಉತ್ತರ ಪ್ರದೇಶದಲ್ಲಿನ ಅಮರೋಹ ದಲ್ಲಿ ೨ ವರ್ಷದ ಬಾಲಕನ ಮೇಲೆ ಪಿಟಬುಲ್ ದಾಳಿ ; ಬಾಲಕನ ತಲೆಗೆ ಗಂಭೀರ ಗಾಯ!
ಅಕ್ಟೋಬರ್ ೨೦೨೩ : ಹರಿಯಾಣದಲ್ಲಿನ ಹಿಸ್ಸಾರದಲ್ಲಿ ಓರ್ವ ಹುಡುಗಿಯ ಮೇಲೆ ಪಿಟಬುಲ್ ದಾಳಿ ; ಹುಡುಗಿಯ ಹೊಟ್ಟೆ, ಕಾಲು ಮತ್ತು ದೇಹದ ಇದರ ಭಾಗಗಳಿಗೆ ಕಚ್ಚಿದ ಗಾಯ !
ಜನೆವರಿ ೨೦೨೩ : ಉತ್ತರ ಪ್ರದೇಶದಲ್ಲಿನ ಮೇರಠದಲ್ಲಿ ಪಂಜಾಬಿ ಸಿನಿಮಾ ನಟ ರೋಹಿತ್ ಇವರ ಮೇಲೆ ರಾಟವೀಲರ್ ತಳಿ ನಾಯಿಯಿಂದ ದಾಳಿ, ಕೈ ಮತ್ತು ಕಾಲಿಗೆ ಗಾಯ.