OTT Apps and Other Websites Banned: 18 ಒಟಿಟಿ ಪ್ಲಾಟ್‌ಫಾರ್ಮ್‌ಗಳು, 19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮದ 57 ಖಾತೆಗಳನ್ನು ಬ್ಯಾನ್ ! 

  • ಕೇಂದ್ರ ಸರಕಾರದ ದಿಟ್ಟ ಹೆಜ್ಜೆ ! 

  • ಅನೇಕ ಕಾನೂನು ಮಾನದಂಡಗಳನ್ನು ಉಲ್ಲಂಘಿಸುವುದರಿಂದ ಅವುಗಳ ನಿಷೇಧ

(ಒಟಿಟಿ ಎಂದರೆ ‘ಓವರ್ ದಿ ಟಾಪ್’ ಅದರ ಅಪ್ಲಿಕೇಶನ್‌ಗಳ ಮೂಲಕ ಚಲನಚಿತ್ರಗಳು, ಸರಣಿಗಳು ಮುಂತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ.)

ನವದೆಹಲಿ – ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶಾದ್ಯಂತ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿದೆ. ಅಲ್ಲದೆ, 19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು, 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಈ ವಿವಿಧ ಆನ್ಲೈನ್ , ಡಿಜಿಟಲ್ ಮಾಧ್ಯಮದ ವಿಷಯಗಳು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ ಸೇರಿದಂತೆ ಹಲವಾರು ಕಾನೂನು ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಆದ್ದರಿಂದ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಕ್ರಮವನ್ನು ಕೈಗೊಂಡಿದೆ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.

1. ಈ ನಿರ್ಧಾರದ ನಂತರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಇವರು, ಸೃಜನಾತ್ಮಕ ಅಭಿವ್ಯಕ್ತಿಯ ಹೆಸರಿನಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ತೋರಿಸಬಾರದು ಎಂದು ಹೇಳಿದರು .

2 . ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ, 2000 ರ ನಿಬಂಧನೆಗಳ ಅಡಿಯಲ್ಲಿ ನಿಷೇಧವನ್ನು ವಿಧಿಸಲಾಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕಾಗಿ ಸರಕಾರದ ಇತರ ಇಲಾಖೆಗಳು ಮತ್ತು ಇಲಾಖೆಗಳ ಸಚಿವರ ಅಭಿಪ್ರಾಯಗಳನ್ನು ಕೋರಲಾಯಿತು. ಮಾಧ್ಯಮ ಮತ್ತು ಮನರಂಜನೆ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ತಜ್ಞರ ಅಭಿಪ್ರಾಯಗಳನ್ನು ಸಹ ಕೋರಲಾಯಿತು.

ಕೇಂದ್ರ ಸರಕಾರದ ಈ ನಿರ್ಧಾರ ಸ್ವಾಗತಾರ್ಹವಾಗಿದ್ದು, ಒಟ್ಟು 700 ಓಟಿಟಿ ಆಪ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಉದಯ್ ಮಹೂರ್ಕರ್

ಕೇಂದ್ರ ಸರಕಾರದ ಮಾಜಿ ಮಾಹಿತಿ ಆಯುಕ್ತ ಹಾಗೂ ‘ಸೇವ್ ಕಲ್ಚರ್ ಸೇವ್ ಫೌಂಡೇಶನ್’ನ ಅಧ್ಯಕ್ಷರಾದ ಶ್ರೀ. ಉದಯ್ ಮಹೂರ್ಕರ್ ಇವರು ಈ ವಿಚಾರವಾಗಿ ಹೋರಾಟ ಆರಂಭಿಸಿದ್ದಾರೆ. ಈ ಸಂಬಂಧ ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸರಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. 2047ರಲ್ಲಿ ಭಾರತ ಶ್ರೇಷ್ಠ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ. 2037 ರೊಳಗೆ ಭಾರತವು ಆರ್ಥಿಕ, ಮಿಲಿಟರಿ ಮತ್ತು ವೈಜ್ಞಾನಿಕ ಮಹಾಶಕ್ತಿಯಾಗಲಿದೆ ಎಂದು ನಾನು ಹೇಳುತ್ತೇನೆ; ಆದರೆ ಸಾಂಸ್ಕೃತಿಕವಾಗಿ ಬಡ ದೇಶವಾಗುವ ಬಿಕ್ಕಟ್ಟು ನಮ್ಮ ಮೇಲೆ ಬಂದಿದೆ. ಒಟಿಟಿ ಮಾಧ್ಯಮಗಳಲ್ಲಿ ಹಗಲು ರಾತ್ರಿ ಅಶ್ಲೀಲ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ನಮ್ಮ ಸಂಶೋಧನೆಯ ಪ್ರಕಾರ, ಇಂದು ಅಂತಹ 700 ಓಟಿಟಿ ಅಪ್ಲಿಕೇಶನ್‌ಗಳಿವೆ ಮತ್ತು ಅವುಗಳಿಂದ ಪ್ರತಿದಿನ ಕನಿಷ್ಠ 30 ಚಲನಚಿತ್ರಗಳು ಸ್ಟ್ರೀಮ್ ಆಗುತ್ತಿವೆ. ಅವರಲ್ಲಿ ವ್ಯಭಿಚಾರ ತೋರಿಸಲಾಗುತ್ತಿದೆ. ಈ ಚಲನಚಿತ್ರಗಳನ್ನು ಮುಖ್ಯವಾಗಿ ಉತ್ತರ ಪ್ರದೇಶದ ಮೆರಠ ನಗರದಲ್ಲಿ ನಿರ್ಮಿಸಲಾಗುತ್ತದೆ.

ಈ ಸಾಂಸ್ಕೃತಿಕ ಆಕ್ರಮಣದಿಂದ ಭಾರತದ ‘ವಿಶ್ವ ಗುರು’ ಆಗುವ ಕನಸು ನುಚ್ಚುನೂರಾಗಬಾರದು. ಇದರ ವಿರುದ್ಧ ‘ಸೇವ್ ಕಲ್ಚರ್-ಸೇವ್ ಫೌಂಡೇಶನ್’ ಸಂಘಟನೆ ಕಳೆದ 14 ತಿಂಗಳಿಂದ ಹೋರಾಟ ನಡೆಸುತ್ತಿದೆ. ಇದರಲ್ಲಿ ‘ಜೇಮ್ಸ್ ಆಫ್ ಬಾಲಿವುಡ್’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ ಸಂಘಟನೆಗಳೂ ನಮಗೆ ಸಹಾಯ ಮಾಡುತ್ತಿವೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಅಭೂತಪೂರ್ವ ಪ್ರಗತಿಯನ್ನು ಸಾಧಿಸುತ್ತಿದೆ ಮತ್ತು ಓಟಿಟ ಅಪ್ಲಿಕೇಶನ್‌ಗಳ ವಿರುದ್ಧ ಈ ಕ್ರಮವು ಮೊದಲ ಹೆಜ್ಜೆಯಾಗಿದೆ. ಈ ರಾಷ್ಟ್ರವಾದಿ ಸರಕಾರ ಇದನ್ನು ಮುಂದುವರೆಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

 

ಅಶ್ಲೀಲತೆಯನ್ನು ನಿಷೇಧಿಸಿ ಮತ್ತು ಸಂಸ್ಕಾರದ ಬೀಜಗಳನ್ನು ನೆಡಲಿ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ

ಶ್ರೀ.ರಮೇಶ ಶಿಂದೆ

ಓಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಮಾಧ್ಯಮಗಳ ಮೂಲಕ ಹರಡುವ ಅಶ್ಲೀಲತೆಯು ದೇಶದ ಭವಿಷ್ಯಕ್ಕೆ ಅಪಾಯವಾಗಿದೆ. ಆದ್ದರಿಂದ, ಅಶ್ಲೀಲತೆಯನ್ನು ಹರಡುವ ಓಟಿಟಿ ಫೋರಂಗಳು, ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಪ್ರಸಾರ ಸಚಿವಾಲಯದ ಅಧಿಸೂಚನೆ ಮತ್ತು ನಿರ್ಧಾರವು ಅತ್ಯಂತ ಶ್ಲಾಘನೀಯವಾಗಿದೆ.

ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ನಿರಂತರವಾಗಿ ಕೇಂದ್ರ ಸರಕಾರವನ್ನು ಬೆಂಬೆತ್ತುವಿಕೆ ಮಾಡುತ್ತಿತ್ತು. ಫೆಬ್ರವರಿ 2024 ರಲ್ಲಿ, ‘ಜೆಮ್ಸ್ ಆಫ್ ಬಾಲಿವುಡ್’, ‘ಸೇವ್ ಕಲ್ಚರ್-ಸೇವ್ ಭಾರತ’, ‘ಸೇವಾ ನ್ಯಾಯ ಉತ್ಥಾನ್’ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ಅಶ್ಲೀಲ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲತೆ ಮತ್ತು ಅನೈತಿಕತೆಯನ್ನು ನಿಷೇಧಿಸುವ ಕಾರ್ಯಕ್ರಮವನ್ನು ಸಹ ನಡೆಸಲಾಯಿತು. ದೇಶದ ಭವ್ಯ ಭವಿಷ್ಯಕ್ಕಾಗಿ ಮಾಧ್ಯಮಗಳ ಅಶ್ಲೀಲ ಪ್ರಸಾರವನ್ನು ನಿಷೇಧಿಸುವುದರೊಂದಿಗೆ ವಿದ್ಯಾರ್ಥಿ ವಯಸ್ಸಿನಿಂದಲೇ ಸಂಸ್ಕೃತಿಯನ್ನು ಮೈಗೂಡಿಸಲು ಪ್ರಯತ್ನಿಸಬೇಕು. ಭಾರತವು ಜಗತ್ತಿಗೆ ಅಶ್ಲೀಲತೆಯನ್ನು ನೀಡದೇ ಸಂಸ್ಕಾರವನ್ನು ನೀಡುತ್ತದೆ. ಇದು ಭಾರತದ ಅಸ್ಮಿತೆಯಾಗಿದೆ.

(ಸೌಜನ್ಯ – Hindusthan Post)

ದೊಡ್ಡ ‘ಓಟಿಟಿ’ಗಳ ಮೇಲೂ ಕ್ರಮ ಕೈಗೊಳ್ಳಬೇಕು! – ಸ್ವಾತಿ ಗೋಯಲ್ ಶರ್ಮಾ

ಸ್ವಾತಿ ಗೋಯಲ್ ಶರ್ಮಾ

ಸನಾತನ ಪ್ರಭಾತ ಪ್ರತಿನಿಧಿಯೊಂದಿಗೆ ಮಾತನಾಡಿದ ‘ಜೆಮ್ಸ್ ಆಫ್ ಬಾಲಿವುಡ್’ ಸಂಸ್ಥೆಯ ಸ್ವಾತಿ ಗೋಯಲ್ ಶರ್ಮಾ ಇವರು, ಇದು ಕೇಂದ್ರ ಸರಕಾರ ಕೈಗೊಂಡಿರುವ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಈ ಕ್ರಮದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕು. ಈಗ ಮುಖ್ಯವಾಗಿ ಸಣ್ಣ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಈ ರೀತಿಯಾಗಿ ದೊಡ್ಡ ಓಟಿಟಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು, ಇದರಿಂದ ಅವರಿಗೆ ಪ್ರೋತ್ಸಾಹ ಸಿಗುವುದಿಲ್ಲ. ನಮ್ಮ ದೇಶ ಸನಾತನ ಧರ್ಮದ ಮೇಲೆ ನಿಂತಿದೆ. ಅಂತಹ ಅಶ್ಲೀಲತೆಗೆ ಸ್ಥಳವಿಲ್ಲ. ಈ ಸೂತ್ರವು ದೊಡ್ಡದಾಗಬೇಕೆಂದು ನಾವು ಬಯಸಿದ್ದೇವೆ. ಇಂದು ಇದೊಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ ಎಂಬ ತೃಪ್ತಿ ನಮಗಿದೆ. ಈ ಕುರಿತು ವಿಚಾರ ಸಂಕಿರಣಗಳೂ ನಡೆಯಲಾರಂಭಿಸಿವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇಲವ ಬ್ಯಾನ್ ಮಾಡದೇ ಅವುಗಳನ್ನು ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಜೈಲು ಶಿಕ್ಷೆಯನ್ನು ವಿಧಿಸಬೇಕು ಆಗ ಇತರರು ಹದ್ದುಬಸ್ತಿನಲ್ಲಿಡಬಹುದು !