ರಷ್ಯಾದ ಸಾರ್ವಭೌಮತ್ವ ಮತ್ತು ಸ್ವಾತಂತ್ಯ್ರಕ್ಕೆ ಧಕ್ಕೆ ಬಂದರೆ ನಾವು ಪರಮಾಣು ಅಸ್ತ್ರಗಳನ್ನು ಬಳಸುತ್ತೇವೆ ! – ಅಧ್ಯಕ್ಷ ಪುತಿನ್ ಎಚ್ಚರಿಕೆ

ಭಾರತವೂ ಕೂಡ ಇಂತಹ ಮಾತನ್ನಾಡುವ ಧೈರ್ಯ ತೋರಿಸಬೇಕು !

ಮಾಸ್ಕೋ(ರಷಿಯಾ) – ರಷಿಯಾದ ಸರ್ವಭೌಮತ್ವ ಮತ್ತು ಸ್ವಾತಂತ್ಯ್ರಕ್ಕೆ ಧಕ್ಕೆ ಬಂದರೆ ನಾವು ಪರಮಾಣು ಅಸ್ತ್ರಗಳನ್ನು ಬಳಸಲು ಸಿದ್ಧರಿದ್ದೇವೆ, ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಎಚ್ಚರಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪುತಿನ್, ಪರಮಾಣು ಯುದ್ಧಕ್ಕೆ ಕಾರಣವಾಗಬಹುದಾದ ಯಾವುದಾದರೂ ಉಲ್ಬಣವನ್ನು ತಡೆಯಲು ಅಮೇರಿಕಾ ಪ್ರಯತ್ನಿಸಬಹುದು; ಆದರೆ ರಷ್ಯಾದ ಅಣುಶಕ್ತಿ (ಪರಮಾಣು ಶಕ್ತಿ) ಪರಮಾಣು ಯುದ್ಧಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ.

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಪ್ರಶ್ನಿಸಿದಾಗ ಪುತಿನ್, ಯುಕ್ರೇನ್ ಮೇಲೆ ಪರಮಾಣು ಶಸ್ತ್ರ ಬಳಸುವ ಅಗತ್ಯವಿಲ್ಲ. ಉಕ್ರೇನ್‌ ಜೊತೆ ಚರ್ಚೆಗಾಗಿ ನಮ್ಮ ದೇಶದ ಬಾಗಿಲು ಯಾವತ್ತೂ ತೆರೆದಿರುತ್ತದೆ ಎಂದಿದ್ದಾರೆ.