ಈ ಗ್ಯಾಂಗ್‌ನಿಂದ ವಿವಿಧ ರಾಜ್ಯದಲ್ಲಿನ ೫೩ ಅಪರಾಧಗಳು ಬೆಳಕಿಗೆ !
ಮುಂಬಯಿ – ಬಾಂಗ್ಲಾದೇಶದಿಂದ ನುಸುಳಿ ಭಾರತದಲ್ಲಿ ಕಳ್ಳತನ ಮಾಡುವ ತಂಡಗಳನ್ನು ರೂಪಿಸಿರುವ ಶಾಕಿರ ಅಲಿಯಾಸ್ ಗುಡ್ಡು ಶೇಖ ಈ ಗ್ಯಾಂಗ್‌ನ ಪ್ರಮುಖನ ಸಹಿತ ೬ ಜನರನ್ನು ಮುಂಬಯಿ ಅಪರಾಧ ನಿಗ್ರಹ ಶಾಖೆಯ ದಳವು ಜಾಲನಾದಲ್ಲಿ ಬಂಧಿಸಿದ್ದಾರೆ. ಕುರ್ಬಾನ್ ಆಲಮಮಂಡಲ, ಜಾಕಿರ್ ಫಕೀರ್, ಮಾನಿಕ್ ಶೇಖ, ಶುಮೋನ ಶೇಖ, ಸಲಾಮಾನ ಶೇಖ ಮತ್ತು ಅರಬಾಜ್ ಮನ್ಸೂರಿ ಎಂದು ಗುರುತಿಸಲಾಗಿದೆ. ಇದರಿಂದ ಕಳ್ಳತನದ ವಿವಿಧ ರಾಜ್ಯದಲ್ಲಿನ ೫೩ ಅಪರಾಧಿ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಗ್ಯಾಂಗ್‌ನ ಇತರ ಸದಸ್ಯರ ಹುಡುಕಾಟ ಮುಂದುವರೆದಿದೆ.
೧. ಶಾಕೀರ ಶೇಖ ಪೊಲೀಸರ ಕೈಗೆ ಸಿಗುತ್ತಿರಲಿಲ್ಲ. ಅವನು ಜಾಲನಾದಲ್ಲಿ ಇರುವುದೆಂದು ತಿಳಿದ ನಂತರ ಪೊಲೀಸರು ಅಲ್ಲಿ ಮನೆಯ ಮೇಲೆ ದಾಳಿ ನಡೆಸಿದಾಗ ಮೇಲಿನ ಎಲ್ಲರೂ ಸಿಕ್ಕಿಕೊಂಡರು.
೨. ಇವರಿಂದ ವಾಹನ, ಕಟರ್, ಸ್ಕ್ರೂ ಡ್ರೈವರ್, ಚೋಪರ್, ಕತ್ತಿ ಇದರ ಜೊತೆಗೆ ಮನೆ ಒಡೆಯಲು ಬೇಕಾಗುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
೩. ಶಾಕೀರಿ ಇವನು ಅಂತರಾಜ್ಯದ ತಂಡ ನಡೆಸುತ್ತಿದ್ದ ಹಾಗೂ ದೇಶಾದ್ಯಂತ ಈ ಗ್ಯಾಂಗ್ ಬಹಳಷ್ಟು ಅಪರಾಧಗಳು ಮಾಡಿವೆ. ಈ ಗ್ಯಾಂಗ್‌ನ ವಿರುದ್ಧ ಮುಂಬಯಿಯಲ್ಲಿ ಮನೆ ಒಡೆದಿರುವ ೧೮ ಅಪರಾಧಗಳು, ಭೂಸಾವಳ ಮತ್ತು ಜಾಲನ ಜಿಲ್ಲೆಯಲ್ಲಿ ೩ ಹಾಗೂ ತೆಲಂಗಾಣ ಮತ್ತು ನಿಜಾಮಾಬಾದ್ ಇಲ್ಲಿ ೧೩, ಭಾಗ್ಯನಗರದಲ್ಲಿ ೭, ಗುಜರಾತ್ ಅಹಮದಾಬಾದ್ ಇಲ್ಲಿ ೪, ಪಶ್ಚಿಮ ಬಂಗಾಳ, ಹಾವಡ ಮತ್ತು ವರ್ಧಮಾನ ಇಲ್ಲಿ ೭ ಹೀಗೆ ಒಟ್ಟು ೫೩ ಅಪರಾಧಗಳು ದಾಖಲಾಗಿವೆ.
೪. ಶಾಕೀರ ಪ್ರತಿಸಲ ಕಳ್ಳತನಕ್ಕಾಗಿ ಹೊಸ ಸಿಮ್ ಕಾರ್ಡ್ ಮತ್ತು ಮೊಬೈಲ್ ಬಳಸುತ್ತಿದ್ದನು. ಕಳ್ಳತನ ಮಾಡಿದ ನಂತರ ಶಾಕಿರ್ ತಕ್ಷಣ ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶಕ್ಕೆ ಓಡಿ ಹೋಗುತ್ತಿದ್ದನು.
ಸಂಪಾದಕೀಯ ನಿಲುವು
|