ದೇವಸ್ಥಾನವೊಂದರಲ್ಲಿ ಕಾಣಿಕೆ ಹಂಚಿಕೊಳ್ಳುವ ವಿಚಾರದಲ್ಲಿ ಅರ್ಚಕರ ನಡುವೆ ಹೊಡೆದಾಟ ನಡೆದಿರುವ ವೀಡಿಯೋ ಆಧಾರ ರಹಿತ!

ಮನೀಶ್‌ಕುಮಾರ ಎಂಬಾತನಿಂದ ‘ಎಕ್ಸ್‘ ನಲ್ಲಿ ನಕಲಿ ವೀಡಿಯೋ ಪ್ರಸಾರ!

ನವದೆಹಲಿ – ನ್ಯಾಯಾಧೀಶ ಮನಿಶಕುಮಾರ ಎಂಬ ಹೆಸರಿನ ‘ಎಕ್ಷ್‘ ಖಾತೆಯನ್ನು ಬಳಸಿಕೊಂಡು ಇತ್ತಿಚೆಗೆ ಒಂದು ವೀಡಿಯೋವನ್ನು ಪ್ರಸಾರ ಮಾಡಲಾಗಿದೆ. ಈ ವಿಡಿಯೋದಲ್ಲಿ ದೇವಸ್ಥಾನವೊಂದಕ್ಕೆ ಬಂದ ಕಾಣಿಕೆ ಹಣದ ವಿಚಾರವಾಗಿ ದೇವಸ್ಥಾನದ ಅರ್ಚಕರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗಿದೆ. ವಾಸ್ತವವಾಗಿ ಈ ವೀಡಿಯೋ ಆಧಾರರಹಿತವಾಗಿದ್ದು ಇದು ಜನವರಿ ೨೦೨೪ ರಲ್ಲಿ ತಮಿಳುನಾಡಿನ ಕಾಂಚಿಪುರಂನಲ್ಲಿರುವ ವರದರಾಜ ಪೆರುಮಾಳ್ ದೇವಸ್ಥಾನದ ವಿಡಿಯೋ ಆಗಿದೆ. ಪೆರುಮಾಳ್ ದೇವಸ್ಥಾನದ ಮೆರವಣಿಗೆಯ ವೇಳೆ ದೇವರ ವಿಗ್ರಹವನ್ನು ತೆಗೆದುಕೊಂಡು ಹೋಗುವಾಗ ಅಯ್ಯಂಗಾರ ಸಮುದಾಯದ ಎರಡು ವರ್ಗಗಳಾದ ವಡಕಲಾಯಿ ಮತ್ತು ಥೆಂಕಲಾಯಿ ಇವರ ನಡುವೆ ಮಾರಾಮಾರಿ ನಡೆದಿತ್ತು, ಆ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.ಇದರಿಂದ ಮನಿಶಕುಮಾರ ಅವರ ವೀಡಿಯೋದ ನಕಲಿತನ ಬಹಿರಂಗವಾಗಿದೆ. ಮನಿಶಕುಮಾರ ಅವರು ವೀಡಿಯೋ ನಕಲಿಯಾಗಿದೆ ಎಂದು ‘ಲೋಕಸತ್ತಾ‘ ದಿನಪತ್ರಿಕೆ ಬಯಲುಮಾಡಿದೆ.

‘ಸನಾತನ ಪ್ರಭಾತ‘ವು ಮನಿಶಕುಮಾರ ಅವರ ‘ಎಕ್ಸ್‘ ಖಾತೆಯನ್ನು ನೋಡಿದಾಗ ಅದರಲ್ಲಿ ಅನೇಕ ಹಿಂದೂವಿರೋಧಿ ವೀಡಿಯೋಗಳನ್ನು ಪ್ರಸಾರ ಮಾಡಿರುವುದಲ್ಲದೆ, ಹಿಂದೂಗಳನ್ನೇ ವಿಶೇಷವಾಗಿ ಗುರಿಮಾಡಿ ಪೋಸ್ಟ್ ಗಳನ್ನು ಮಾಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಮನಿಶಕುಮಾರ ಪಕ್ಕಾ ಹಿಂದೂದ್ವೇಷಿ ಎಂಬುದು ಸ್ಪಷ್ಟವಾಗಿದೆ. ವಿಶೇಷವೆಂದರೆ ಈ ವೀಡಿಯೋವನ್ನು ಜನರು ತೀವ್ರವಾಗಿ ವಿರೋಧಿಸಿದಾಗ ಮನಿಶಕುಮಾರ ಆ ವೀಡಿಯೋವನ್ನು ‘ಡಿಲೀಟ್‘ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ವಿರುದ್ಧ ಇಲ್ಲಸಲ್ಲದ ಆಧಾರ ರಹಿತ ಆರೋಪ ಮಾಡುವ ಮೂಲಕ ಹಿಂದೂದ್ವೇಶದ ವಾತಾವರಣ ಸೃಷ್ಟಿಸುವಂತವರ ವಿರುದ್ಧ ಕೇಂದ್ರ ಸರ್ಕಾರ ಕಾನೂನುಕ್ರಮ ಕೈಗೊಂಡು ಅವರಿಗೆ ಕಠೋರ ಶಿಕ್ಷೆ ವಿಧಿಸಬೇಕು.ಇದರಿಂದ ಹಿಂದೂಗಳ ವಿರುದ್ಧ ಆರೋಪ ಮಾಡಲು ಯಾರೂ ಧೈರ್ಯಮಾಡುವುದಿಲ್ಲ!