ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ ನಿರಾಶ್ರಿತರಿಗೆ ಈಗ ಭಾರತೀಯ ಪೌರತ್ವ ಸಿಗಲಿದೆ !

ಅಂತಿಮವಾಗಿ ಕೇಂದ್ರ ಸರಕಾರದಿಂದ ಪೌರತ್ವ ತಿದ್ದುಪಡಿ ಕಾನೂನ ಅಧಿಸೂಚನೆ ಪ್ರಸಾರ !

ನವ ದೆಹಲಿ – ಡಿಸೆಂಬರ್ 2019 ರಲ್ಲಿ ರೂಪಿಸಿದ ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಕೇಂದ್ರ ಸರಕಾರವು ಕೊನೆಗೂ ಮಾರ್ಚ್ 11, 2024 ರ ಸಂಜೆ ಹೊರಡಿಸಿತು. ಇದರಿಂದಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಧಾರ್ಮಿಕ ದೌರ್ಜನ್ಯಗಳಿಂದಾಗಿ ಭಾರತದಲ್ಲಿ ಆಶ್ರಯ ಪಡೆದಿರುವ ಮುಸ್ಲಿಮೇತರ ನಿರಾಶ್ರಿತರಿಗೆ, ವಿಶೇಷವಾಗಿ ಹಿಂದೂಗಳಿಗೆ ಪೌರತ್ವ ಪಡೆಯುವ ಹಾದಿ ಸುಗಮವಾಗಿದೆ. ಕೇಂದ್ರ ಗೃಹ ಸಚಿವಾಲಯವು ಈ ವಿಷಯದ ಮಾಹಿತಿ ನೀಡುತ್ತಾ, ಈ ಸಂದರ್ಭದಲ್ಲಿ ‘ಪೋರ್ಟಲ್’ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದೆ. ಈ ಮೂಲಕ ಕೇಂದ್ರ ಗೃಹ ಸಚಿವಾಲಯಕ್ಕೆ ಮೇಲಿನ 3 ದೇಶಗಳ ಇಂತಹ ನಿರಾಶ್ರಿತರು ಯಾರ ಬಳಿ ಕಾಗದ ಪತ್ರಗಳಿಲ್ಲವೋ, ಅವರಿಗೆ ಸಹಾಯವನ್ನು ಮಾಡಲಿದೆ. ಕೇಂದ್ರೀಯ ಗೃಹ ಸಚಿವಾಲಯದ ಬಳಿ ಪಾಕಿಸ್ತಾನದಿಂದ ದೀರ್ಘಾವಧಿಯ ವೀಸಾಗಳಿಗಾಗಿ ಅತ್ಯಧಿಕ ಅರ್ಜಿ ಬರುತ್ತಿರುತ್ತವೆ.

ಗೃಹ ಸಚಿವ ಅಮಿತ್ ಶಾ ಅವರು ಕೆಲವು ವಾರಗಳ ಹಿಂದೆ ‘ಈ ಸಂಬಂಧ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಘೋಷಿಸಿದ್ದರು. ಸಂಸತ್ತು ಡಿಸೆಂಬರ್ 11, 2019 ರಂದು ಕಾನೂನನ್ನು ಅನುಮೋದಿಸಿತ್ತು ಮತ್ತು ಕಾನೂನನ್ನು ಜಾರಿಗೆ ತರಲು ನಿಯಮಗಳನ್ನು ರಚಿಸಲು ಸರಕಾರ 8 ಬಾರಿ ಗಡುವನ್ನು ವಿಸ್ತರಿಸಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು ?

ಈ ಕಾನೂನಿನ ಮೂಲಕ ಡಿಸೆಂಬರ 31, 2014 ರ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಿಂದ ಧಾರ್ಮಿಕ ಕಾರಣಗಳಿಂದ ದೌರ್ಜನ್ಯಕ್ಕೆ ಒಳಗಾದ ಬಳಿಕ ಭಾರತಕ್ಕೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಶಿ ಮತ್ತು ಕ್ರೈಸ್ತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು. ಈ 3 ದೇಶಗಳ ಜನರು ಮಾತ್ರ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಈ ಕಾನೂನು ‘ಮುಸ್ಲಿಂ ವಿರೋಧಿ’ ಆಗಿದೆಯೆಂದು ಹೇಳುತ್ತಿರುವಾಗ ಕೇಂದ್ರ ಸರಕಾರವು ಆಯಾ ಸಮಯದಲ್ಲಿ ಸ್ಪಷ್ಟೀಕರಣವನ್ನು ನೀಡಿದೆ. ಈ ಕಾನೂನಿನಿಂದ ಮೂಲ ಭಾರತೀಯ ನಾಗರಿಕರ ನಾಗರಿಕತ್ವಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದಕ್ಕೂ ಭಾರತೀಯ ಪ್ರಜೆಗಳಿಗೂ ಯಾವುದೇ ಸಂಬಂಧವಿಲ್ಲ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿದೆ. ಅರ್ಜಿದಾರನು ಅವನು ಭಾರತಕ್ಕೆ ಯಾವಾಗ ಬಂದನು ? ಎಂದು ತಿಳಿಸಬೇಕಾಗುತ್ತದೆ. ಅರ್ಜಿದಾರನ ಬಳಿ ಪಾಸಪೋರ್ಟ ಅಥವಾ ಇತರೆ ಪ್ರವಾಸಿ ಕಾಗದಪತ್ರಗಳು ಇಲ್ಲದಿದ್ದರೂ, ಅವನು ಅರ್ಜಿಯನ್ನು ಸಲ್ಲಿಸಬಹುದು. ಈ ಕಾನೂನಿನ ಅಡಿಯಲ್ಲಿ ಭಾರತದಲ್ಲಿ ವಾಸಿಸುವ ಕಾಲಾವಧಿ 5 ವರ್ಷಕ್ಕಿಂತ ಹೆಚ್ಚು ಇಡಲಾಗಿದೆ. ವಿದೇಶಿ ಮುಸಲ್ಮಾನರಿಗೆ ಈ ಕಾಲಾವಧಿ 11 ವರ್ಷಕ್ಕಿಂತ ಹೆಚ್ಚು ಇದೆ.

ಸಂಪಾದಕೀಯ ನಿಲುವು

ಈ ಶ್ಲಾಘನೀಯ ಹೆಜ್ಜೆಯೊಂದಿಗೆ ಕೇಂದ್ರ ಸರಕಾರ ಈಗ `ಎನ್.ಆರ್.ಸಿ.’ (ರಾಷ್ಟ್ರೀಯ ನಾಗರಿಕರ ನೋಂದಣಿ) ಕ್ರಮ ಕೈಕೊಂಡು, ಭಾರತದಲ್ಲಿರುವ ಕೋಟಿಗಟ್ಟಲೆ ಮುಸಲ್ಮಾನ ನುಸುಳುಕೋರರನ್ನು ಹೊರಗೆ ಅಟ್ಟಬೇಕು ಎಂದೇ ರಾಷ್ಟ್ರಪ್ರೇಮಿ ಜನರಿಗೆ ಅನಿಸುತ್ತದೆ !